Advertisement

ಅಮೃತ್ ನೋನಿ ಸಂಸ್ಥೆಯ ಹೆಸರಿನಲ್ಲಿ ನಕಲಿ ಉತ್ಪನ್ನಗಳ ಮಾರಾಟ: ದೂರು ದಾಖಲು

02:59 PM Oct 04, 2021 | Team Udayavani |

ಶಿವಮೊಗ್ಗ: ಅಮೃತ್ ನೋನಿ ಸಂಸ್ಥೆಯ ಹೆಸರಿನಲ್ಲಿ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಕಂಪನಿಯ ವಿರುದ್ಧ ದೂರು ನೀಡಲಾಗಿದೆ.

Advertisement

ಶಿವಮೊಗ್ಗದಲ್ಲಿ ಅಮೃತ್ ನೋನಿ ಸಂಸ್ಥೆಯ ಉತ್ಪನ್ನಗಳ ಮಾದರಿಯಲ್ಲಿಯೇ ನಕಲಿ ಉತ್ಪನ್ನಗಳ ಮಾರಾಟ ಮಾಡಲಾಗುತ್ತಿತ್ತು. ಎಸ್ಎಲ್ ವಿ ಫಾರ್ಮ ಹೆಸರಿನಲ್ಲಿ ಅಮೃತ್ ನೋನಿ ನಕಲಿ ಉತ್ಪನ್ನಗಳ ಮಾರಾಟ ಮಾಡುತ್ತಿದ್ದ ಬಗ್ಗೆ ಗ್ರಾಹಕರಿಂದ ಮಾಹಿತಿ ಸಂಗ್ರಹಿಸಿದ್ದ ವ್ಯಾಲ್ಯೂ ಪ್ರಾಡಕ್ಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಇಂದು ದೂರು ದಾಖಲು ಮಾಡಿದೆ.

ಇದನ್ನೂ ಓದಿ:ಬಿಜೆಪಿ ತನ್ನ ತಾಲಿಬಾನಿ‌ ಮನಸ್ಥಿತಿಯನ್ನು ಬೆತ್ತಲು‌ ಮಾಡಿಕೊಳ್ಳುತ್ತಿದೆ: ಸಿದ್ದರಾಮಯ್ಯ

ಶಿವಮೊಗ್ಗದ ಮಾರ್ನಾಮಿ ಬೈಲ್ ವಿಳಾಸದಲ್ಲಿರುವ ಎಸ್ ಎಲ್ ವಿ ಫಾರ್ಮ್ ವಿರುದ್ಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಲಾಗಿದೆ. ತನಿಖೆ ಆರಂಭಿಸಿರುವ ದೊಡ್ಡಪೇಟೆ ಪೊಲೀಸರು 31 ಬಾಕ್ಸ್ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.