ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತೂಂದು ಸುತ್ತಿನ ತುಟ್ಟಿ ಭತ್ಯೆ ಏರಿಕೆಯ ಲಾಭ ಪಡೆಯಲಿದ್ದಾರೆ. ಆದರೆ ವಾಸ್ತವ ತುಟ್ಟಿ ಭತ್ಯೆಯನ್ನು ಏರಿಸುವುದರ ಬದಲಿಗೆ ತುಟ್ಟಿ ಭತ್ಯೆ ನೀಡುವ ಮೂಲ ವರ್ಷವನ್ನು ಬದಲಾವಣೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈವರೆಗೆ 2001ನೇ ಇಸ್ವಿಯನ್ನು ಮೂಲ ವರ್ಷವನ್ನಾಗಿ ಪರಿಗಣಿಸಲಾಗುತ್ತಿತ್ತು. ಆದರೆ ಈಗ 2016 ಅನ್ನು ಮೂಲ ವರ್ಷವನ್ನಾಗಿ ಪರಿಗಣಿಸಲು ನಿರ್ಧರಿಸ ಲಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವನ್ನು ಆಧರಿಸಿ ನೌಕರರಿಗೆ ತುಟ್ಟಿಭತ್ಯೆ ನೀಡಲಾಗುತ್ತದೆ. 2001ರ ನಂತರದಲ್ಲಿ ಗ್ರಾಹಕ ಬೆಲೆ ಸೂಚ್ಯಂಕದಲ್ಲಿ ಹಲವು ಹೊಸ ಸಾಮಗ್ರಿಗಳನ್ನು ಸೇರಿಸಿರುವುದರಿಂದ, ಆ ಸಾಮಗ್ರಿಗಳ ಬೆಲೆ ಏರಿಕೆ ಯಿಂದಾಗಿ ಉಂಟಾದ ಹಣ ದುಬ್ಬರವನ್ನು ಸದ್ಯ ನೀಡಲಾ ಗುತ್ತಿರುವ ತುಟ್ಟಿಭತ್ಯೆಯಲ್ಲಿ ಪರಿಗಣಿಸಲಾಗುತ್ತಿಲ್ಲ. ಮೂಲ ವರ್ಷವನ್ನು ಬದಲಿಸಿದರೆ, ಸಹಜವಾಗಿಯೇ ತುಟ್ಟಿ ಭತ್ಯೆಯ ಶೇಕಡಾವಾರು ಏರಿಕೆಯಾಗಲಿದೆ.