Advertisement
ಗಣರಾಜ್ಯೋತ್ಸವದಂತಹ ಪರೇಡ್‌ನಲ್ಲಿ ಭಾಗವಹಿಸುವುದು ಎಂದರೆ ಹೆಮ್ಮೆಯ ವಿಷಯವಲ್ಲವೆ! ಇಂತಹ ಭಾಗ್ಯ ನನ್ನ ಗೆಳತಿಯ ಪಾಲಿಗೆ ಒದಗಿಬಂದಿದೆ ಎಂದರೆ ಅದಕ್ಕಿಂತ ಸಂತೋಷದ ವಿಚಾರ ಬೇರುಂಟೆ? ಬಂಟ್ವಾಳ ತಾಲೂಕಿನ ಕನ್ಯಾನ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದ ಆಕೆ ಕನ್ಯಾನದಲ್ಲಿರುವ ಶ್ರೀಸರಸ್ವತಿ ವಿದ್ಯಾಲಯಕ್ಕೆ ಪ್ರಾಥಮಿಕ ಶಿಕ್ಷಣಕ್ಕಾಗಿ ಸೇರಿದವಳು. ಕನ್ಯಾನದಲ್ಲಿಯೇ ಹುಟ್ಟಿರುವ ನಾನೂ ಅವಳದೇ ತರಗತಿಗೆ ಸೇರಿಕೊಂಡೆ. ನಂತರ ನಾವು ಹೈಸ್ಕೂಲ್ ವಿದ್ಯಾಭ್ಯಾಸವನ್ನು ಬೇರೆ ಬೇರೆ ಶಾಲೆಯಲ್ಲಿ ಕಲಿತರೂ ಮತ್ತೆ ಪಿಯುಸಿ ಹಾಗೂ ಪದವಿಯನ್ನು ಪೂರೈಸಿದ್ದು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿಯೇ. ಅವಳು ಕಾಲೇಜಿನ ಎನ್‌ಸಿಸಿಗೆ ಸೇರಿಕೊಂಡಳು. ನಾನೂ ಅವಳೊಂದಿಗೆ ಎನ್‌ಸಿಸಿಗೆ ಸೇರಿಕೊಳ್ಳಬೇಕೆಂದು ಬಯಸಿದ್ದೆ. ಆದರೆ, ಅನಿವಾರ್ಯ ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ಆದರೆ, ನನ್ನ ಗೆಳತಿ ಮಾತ್ರ ಎಷ್ಟೇ ಕಷ್ಟ ಬಂದರೂ ಕಠಿಣ ಪರಿಶ್ರಮದಿಂದ ಮುನ್ನುಗ್ಗಬೇಕೆನ್ನುವ ಛಲ ಇದ್ದದ್ದರಿಂದ ಹಲವು ಹಂತಗಳನ್ನು ದಾಟಿ ದೆಹಲಿಯಲ್ಲಿ ನಡೆದ ಪರೇಡ್‌ಗೂ ಆಯ್ಕೆಯಾಗಿಬಿಟ್ಟಳು.
ದ್ವಿತೀಯ ಬಿ. ಎಸ್ಸಿ. ವಿವೇಕಾನಂದ ಕಾಲೇಜು, ಪುತ್ತೂರು