Advertisement

ಕ್ಲೈಮ್ಯಾಕ್ಸ್‌ನತ್ತ “ಸಲಗ’

10:02 AM Nov 01, 2019 | Lakshmi GovindaRaju |

ನಟ ದುನಿಯಾ ವಿಜಯ್‌ ಚೊಚ್ಚಲ ನಿರ್ದೇಶನದ “ಸಲಗ’ ಚಿತ್ರದ ಪ್ರೊಡಕ್ಷನ್‌ ಕಾರ್ಯಗಳು ಭರದಿಂದ ನಡೆಯುತ್ತಿದೆ. ಸದ್ಯ ಚಿತ್ರದ ಬಹುತೇಕ ಟಾಕಿ ಪೋರ್ಷನ್‌ ಪೂರ್ಣಗೊಳಿಸಿರುವ “ಸಲಗ’ ಚಿತ್ರತಂಡ, ಚಿತ್ರದ ಬಹುಮುಖ್ಯ ಭಾಗವಾದ ಕ್ಲೈಮ್ಯಾಕ್ಸ್‌ ಶೂಟಿಂಗ್‌ಗೆ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಿದೆ. ಚಿತ್ರತಂಡದ ಮೂಲಗಳ ಪ್ರಕಾರ “ಸಲಗ’ ಚಿತ್ರದ ಕ್ಲೈಮ್ಯಾಕ್ಸ್‌ ಭರ್ಜರಿ ಆ್ಯಕ್ಷನ್‌ ದೃಶ್ಯಗಳು ಬರಲಿದ್ದು, ಈ ದೃಶ್ಯಗಳನ್ನು ವಿಭಿನ್ನವಾಗಿ ಮತ್ತು ಅದ್ಧೂರಿಯಾಗಿ ಚಿತ್ರೀಕರಿಸುವ ಯೋಜನೆಯಲ್ಲಿದೆ ಚಿತ್ರತಂಡ.

Advertisement

ಈಗಾಗಲೇ “ಸಲಗ’ದ ಕ್ಲೈಮ್ಯಾಕ್ಸ್‌ನಲ್ಲಿ ಬರುವ ಆ್ಯಕ್ಷನ್‌ ದೃಶ್ಯಗಳ ಸಂಯೋಜನೆಗಾಗಿ ದಕ್ಷಿಣ ಭಾರತದ ಖ್ಯಾತ ಸಾಹಸ ನಿರ್ದೇಶಕರುಗಳನ್ನು ಸಂಪರ್ಕಿಸುತ್ತಿದೆ. ಈಗಾಗಲೇ ಎರಡು-ಮೂರು ಪ್ರಸಿದ್ದ ಸಾಹಸ ನಿರ್ದೇಶಕರ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದ್ದು, ಅಂತಿಮವಾಗಿ “ಸಲಗ’ದ ಕ್ಲೈಮ್ಯಾನ್ಸ್‌ನಲ್ಲಿ ಬರುವ ಆ್ಯಕ್ಷನ್‌ ದೃಶ್ಯಗಳನ್ನು ಯಾರು ಸಂಯೋಜಿಸಲಿದ್ದಾರೆ ಅನ್ನೋದು ಕೆಲ ದಿನಗಳಲ್ಲೇ ಗೊತ್ತಾಗಲಿದೆ.

ಈ ನಡುವೆಯೇ “ಸಲಗ’ ಚಿತ್ರದ ಮಾಸ್‌ ಪೋಸ್ಟರ್‌ವೊಂದು ಬಿಡುಗಡೆಯಾಗಿದೆ. “ಬಲದಲ್ಲಿ, ಛಲದಲ್ಲಿ ಸಲಗ, ನೆಲದಲ್ಲಿ, ಕುಲದಲ್ಲಿ ಕನ್ನಡಿಗ’ ಎಂಬ ವಾಕ್ಯವಿರುವ ಮಾಸ್‌ ಪೋಸ್ಟರ್‌ ಮೂಲಕ “ಸಲಗ’ ಗಮನ ಸೆಳೆಯುತ್ತಿದೆ. ಇನ್ನು “ಸಲಗ’ ಚಿತ್ರದಲ್ಲಿ ದುನಿಯಾ ವಿಜಯ್‌ ಅವರೊಂದಿಗೆ ನಟ ಧನಂಜಯ್‌ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆ.ಪಿ ಶ್ರೀಕಾಂತ್‌ ಚಿತ್ರ ನಿರ್ಮಾಣದ ಹೊಣೆಯನ್ನು ಹೊತ್ತುಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next