Advertisement

ಭೂಗತ ಲೋಕದಲ್ಲಿ ‘ಸಲಗ’ವಿಜಯ ದಶಮಿ!

11:20 AM Oct 16, 2021 | Team Udayavani |

“ಸಲಗ’ ಜೈಲಿನಿಂದ ರಿಲೀಸ್‌ ಆಗುತ್ತಾನೆ ಎಂದರೆ ಇಡೀ ಅಂಡರ್‌ವರ್ಲ್ಡ್ ನಡುಗುತ್ತದೆ, ಇನ್ನೊಂದಿಷ್ಟು ರೌಡಿ ಗ್ಯಾಂಗ್‌ಗಳು “ಸಲಗ’ನಿಗೆ ಸ್ಕೆಚ್‌ ರೆಡಿ ಮಾಡುತ್ತಾರೆ. ಆದರೆ, “ಸಲಗ’ನದ್ದು ಡಬಲ್‌ ಗುಂಡಿಗೆ. ನುಗ್ಗಿ ಹೊಡೆಯುತ್ತಿರುತ್ತಾನೆ, ರಕ್ತ ನೀರಿನಂತೆ ಹರಿಯುತ್ತಲೇ ಇರುತ್ತದೆ. ಆದರೆ, “ಸಲಗ’ ರೌಡಿ ಹೇಗಾದ, ಆತನ ಹಿಂದಿನ ಕಥೆ-ವ್ಯಥೆ ಏನು ಎಂಬ ಕುತೂಹಲವಿದ್ದರೆ ನೀವು “ಸಲಗ’ ಸಿನಿಮಾ ನೋಡಬಹುದು.

Advertisement

“ದುನಿಯಾ’ ವಿಜಯ್‌ ಮೊದಲ ಬಾರಿಗೆ ನಿರ್ದೇಶಿಸಿದ “ಸಲಗ’ ಚಿತ್ರ ಒಂದು ಮಾಸ್‌ ಸಿನಿಮಾ. ಭೂಗತ ಜಗತ್ತಿನ ಕಥೆಯೊಂದನ್ನು ತೆಗೆದುಕೊಂಡು ಅದಕ್ಕೆ “ದುನಿಯಾ’ ವಿಜಯ್‌ “ರಕ್ತ ತರ್ಪಣ’ ಮಾಡಿದ್ದಾರೆ. “ದುನಿಯಾ’ ವಿಜಯ್‌ ಇಲ್ಲಿ ವಿಜಯ್‌ ಕುಮಾರ್‌ ಆಗಿದ್ದಾರೆ. ವಿಜಯ್‌ ಕುಮಾರ್‌ ಆಗಿ ಇಡೀ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಸಾಗಿದ್ದಾರೆ ಮತ್ತು ಗೆದ್ದಿದ್ದಾರೆ. ಸಲಗ ನೋಡಿದಾಗ ನಿಮಗೆ ನಿರ್ದೇಶಕನಗಾಗಿ ವಿಜಯ್‌ ಕೆಲಸ ಇಷ್ಟವಾಗುತ್ತದೆ.

ಕಥೆಯನ್ನು ಆರಂಭಿಸಿ, ಅದನ್ನು ಸಿನಿಮಾದುದ್ದಕ್ಕೂ ಸಾಗಿಸಿದ ರೀತಿ, ಪಾತ್ರಗಳಿಗೆ ಕೊಟ್ಟ ಪ್ರಾಮುಖ್ಯತೆ, ಅಲ್ಲಲ್ಲಿ ತಂದ ಟ್ವಿಸ್ಟ್‌-ಟರ್ನ್ ಹಾಗೂ ಇಡೀ ಸಿನಿಮಾವನ್ನು ಕಟ್ಟಿಕೊಟ್ಟ ಪರಿಸರ… ಈ ಎಲ್ಲಾ ಅಂಶಗಳಲ್ಲಿ ನಿರ್ದೇಶಕ ವಿಜಯ್‌ಕುಮಾರ್‌ ಎದ್ದು ಕಾಣುತ್ತಾರೆ. ಮೊದಲ ಬಾರಿಗೆ ನಿರ್ದೇಶನ ಮಾಡುವವರು ಮಾಡುವಂತಹ ತಪ್ಪುಗಳು ಇಲ್ಲಿ ಹೆಚ್ಚು ಕಾಣಿಸುವುದಿಲ್ಲ. ಆ ಮಟ್ಟಿಗೆ “ಸಲಗ’ ಒಂದು ನೀಟಾದ ಸಿನಿಮಾ.

ಆದರೆ, ಮೊದಲೇ ಹೇಳಿದಂತೆ ಇದು ಪಕ್ಕಾ ರಗಡ್‌ ಹಾಗೂ ಮಾಸ್‌ ಅಂಶಗಳನ್ನೇ “ಉಸಿರಾಡುವ’ ಸಿನಿಮಾ. ಹಾಗಾಗಿ, ಚಿತ್ರದಲ್ಲಿ ರಕ್ತ ಪಾತದ, ಹೊಡೆದಾಟದ ದೃಶ್ಯಗಳು ಸಾಕಷ್ಟಿವೆ. ಇವೆಲ್ಲವೂ ಮಾಸ್‌ ಪ್ರಿಯರಿಗೆ ಇಷ್ಟವಾಗಬಹುದು. ಜೊತೆಗೆ ತುಂಬಾ ಪಂಚಿಂಗ್‌ ಡೈಲಾಗ್‌ಗಳಿವೆ. ಆದರೆ, “ಎ’ ಪ್ರಮಾಣ ಪತ್ರದೊಂದಿಗೆ ಮ್ಯೂಟ್‌ ನಿಂದ ವಿನಾಯಿತಿ ಪಡೆದುಕೊಂಡಿರುವ ಒಂದಷ್ಟು ಹಸಿಹಸಿ ಡೈಲಾಗ್‌ಗಳನ್ನು ಸಹಿಸಿಕೊಂಡರೆ ನಿಮಗೆ ಮಾಸ್‌ ಸಿನಿಮಾವಾಗಿ “ಸಲಗ’ ಇಷ್ಟವಾಗಬಹುದು.

ಇದನ್ನೂ ಓದಿ:ಕೋಟಿಗೊಬ್ಬ-3 ಚಿತ್ರ ವಿಮರ್ಶೆ: ಸತ್ಯ ಶೋಧನೆಯಲ್ಲಿ ದೊರೆತ ಶಿವ ಸಾಂಗತ್ಯ

Advertisement

ಸಿಕ್ಕಾಪಟ್ಟೆ ರಗಡ್‌ ಆಗಿ ಸಾಗುವ ಸಿನಿಮಾದಲ್ಲಿ ಬರುವ ಸಣ್ಣ ಫ್ಯಾಮಿಲಿ ಸೆಂಟಿಮೆಂಟ್‌ ಸಿನಿಮಾದ ಮಗ್ಗುಲು ಬದಲಿಸುತ್ತದೆ. ಇಲ್ಲಿ ಮೆಚ್ಚಬೇಕಾದ ಮತ್ತೂಂದು ಅಂಶವೆಂದರೆ ವಿಜಯ್‌ ಪಾತ್ರಗಳಿಗೆ ನೀಡಿದ ಪ್ರಾಮುಖ್ಯತೆ. ಇಲ್ಲಿ ಸ್ವತಃ ಹೀರೋ ಆಗಿದ್ದರೂ ಪ್ರೇಮ್‌ ಟು ಫ್ರೇಮ್‌ ತಮ್ಮನ್ನು ವಿಜೃಂಭಿಸಿಕೊಂಡಿಲ್ಲ. ಇತರ ಪಾತ್ರಗಳಿಗೂ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಔಟ್‌ ಅಂಡ್‌ ಔಟ್‌ ಮಾಸ್‌ ಸಿನಿಮಾವನ್ನು ಚಿತ್ರಮಂದಿರದಲ್ಲಿ ಕುಳಿತು ನೋಡಬೇಕೆಂದುಕೊಂಡವರಿಗೆ “ಸಲಗ’ ಹಬ್ಬದೂಟವಾಗಲಿದೆ.

ನಾಯಕ ವಿಜಯ್‌ ಸಿನಿಮಾದುದ್ದಕ್ಕೂ ಖಡಕ್‌ ಪಾತ್ರದಲ್ಲೇ ಕಾಣಿಸಿಕೊಂಡಿದ್ದಾರೆ. ಅವರ ಖದರ್‌, ಮಾಸ್‌ ಎಂಟ್ರಿ, ಲುಕ್‌ ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ. ಪೊಲೀಸ್‌ ಆಫೀಸರ್‌ ಆಗಿ ಕಾಣಿಸಿಕೊಂಡಿರುವ ಧನಂಜಯ್‌ “ಸ್ಮಾರ್ಟ್‌’ ಲುಕ್‌ನಲ್ಲಿ ಮಿಂಚಿದ್ದಾರೆ. ನಾಯಕಿ ಸಂಜನಾ ಇದ್ದಷ್ಟು ಹೊತ್ತು ಚೆಂದ. ಉಳಿದಂತೆ ಬರುವ ಕಲಾವಿದರು ಆಯಾ ಪಾತ್ರಗಳಿಗೆ ಹೊಂದಿಕೊಂಡಿದ್ದಾರೆ. ಚರಣ್‌ ರಾಜ್‌ ಸಂಗೀತ ಹಾಗೂ ಹಿನ್ನೆಲೆ ಸಂಗೀತ “ಸಲಗ’ ಹಾದಿಯನ್ನು ಸುಂದರವಾಗಿಸಿದೆ.

ಆರ್‌.ಪಿ

Advertisement

Udayavani is now on Telegram. Click here to join our channel and stay updated with the latest news.

Next