ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ಅವರಿಗಿಂದು 43ನೇ ಹುಟ್ಟುಹಬ್ಬದ ಸಂಭ್ರಮ. ಹಿಟ್ ನಿರ್ದೇಶಕನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ʼಉಗ್ರಂʼ ನಿಂದ ಅಂಡರ್ ವರ್ಲ್ಡ್ ಲೋಕದ ಕಥೆಯನ್ನು ಹೇಳಿ ಆ ಬಳಿಕ ʼಕೆಜಿಎಫ್ʼ ಮೂಲಕ ಚಿನ್ನದ ಗಣಿಯ ಕಹಾನಿಯನ್ನು ಹೇಳಿ ಇಡೀ ಭಾರತೀಯ ಸಿನಿಮಾ ಲೋಕದಲ್ಲಿ ಹೊಸ ಚರಿತ್ರೆ ಸೃಷ್ಟಿಸಿದ ಪ್ರಶಾಂತ್ ನೀಲ್, ಇದೀಗ ಮತ್ತೊಂದು ಬಿಗ್ ಬಜೆಟ್ ಮೂವಿಯಲ್ಲಿ ಬ್ಯುಸಿಯಾಗಿದ್ದಾರೆ.
ಡಾರ್ಲಿಂಗ್ ಪ್ರಭಾಸ್ ಅವರ ʼಸಲಾರ್ʼ ಸಿನಿಮಾ ತೆರೆಗೆ ಬರಲು ಸಿದ್ದವಾಗಿದ್ದು, ಚಿತ್ರತಂಡ ತನ್ನ ನಿರ್ದೇಶಕನ ಹುಟ್ಟುಹಬ್ಬಕ್ಕೆ ಸ್ಪೆಷೆಲ್ ವಿಡಿಯೋ ಮೂಲಕ ವಿಶ್ ಮಾಡಿದೆ. ಶೂಟಿಂಗ್ ಸಮಯದಲ್ಲಿ ಪ್ರಶಾಂತ್ ನೀಲ್ ಅವರ ಶಿಸ್ತು, ಸಂಯಮ ಮತ್ತು ಶೂಟಿಂಗ್ ನ ಬಿಡುವಿನ ವೇಳೆಯ ನಗುವಿನ ಮುಖಭಾವವನ್ನು, ತಂಡದೊಂದಿಗೆ ಕ್ರಿಕೆಟ್ ಆಡಿದ ಕ್ಷಣವನ್ನು ವಿಡಿಯೋದಲ್ಲಿ ತೋರಿಸಲಾಗಿದೆ.
ಇದನ್ನೂ ಓದಿ: Dr BR Ambedkar ಜಯಂತಿ ಆಚರಿಸಿದ ದಲಿತ ಯುವಕನ ದಾರುಣ ಹತ್ಯೆ: ಏಳು ಮಂದಿ ಆರೋಪಿಗಳ ಬಂಧನ
Related Articles
ಇನ್ನು ʼಸಲಾರ್ʼ ತಂಡದೊಂದಿಗೆ ಪ್ರಶಾಂತ್ ನೀಲ್ ಅವರು ತಮ್ಮ ಹುಟ್ಟುಹಬ್ಬದ ಕೇಕ್ ಕತ್ತರಿಸಿ ಬರ್ತ್ ಡೇ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ಪ್ರಭಾಸ್, ನಿರ್ಮಾಪಕ ವಿಜಯ್ ಕಿರಗಂದೂರು ಅವರು ಭಾಗಿಯಾಗಿದ್ದಾರೆ.
ಕನ್ನಡ ಬಿಟ್ಟು ಮೊದಲ ಬಾರಿ ತೆಲುಗು ಸಿನಿಮಾವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿದ್ದಾರೆ. ಪ್ರಭಾಸ್ , ಶ್ರುತಿ ಹಾಸನ್, ಪೃಥ್ವಿರಾಜ್ ಸುಕುಮಾರನ್, ಶ್ರೀಯಾ ರೆಡ್ಡಿ, ಈಶ್ವರಿ ರಾವ್, ಮಧು ಗುರುಸ್ವಾಮಿ ಮತ್ತು ಜಗಪತಿ ಬಾಬು ಮುಂತಾದವರು ʼಸಲಾರ್ʼ ನಲ್ಲಿ ಪ್ರಮುಖ ಪಾತ್ರವನ್ನು ನಿಭಾಯಿಸಿದ್ದಾರೆ. ಸೆ. 23 ರಂದು ಸಿನಿಮಾ ತೆರೆಗೆ ಬರಲಿದೆ.
ಇದಾದ ಬಳಿಕ ಪ್ರಶಾಂತ್ ನೀಲ್ ಜೂ.ಎನ್ ಟಿಆರ್ ಅವರೊಂದಿಗೆ ಸಿನಿಮಾ ಮಾಡಲಿದ್ದು, ಈ ಸಿನಿಮಾವನ್ನು ಮೈತ್ರಿ ಮೂವೀ ಮೇಕರ್ಸ್ ನಿರ್ಮಾಣ ಮಾಡುತ್ತಿದೆ.