Advertisement

ಸಕಲೇಶಪುರ-ಬಿಕ್ಕೋಡು ರಸ್ತೆ ಬಂದ್‌: ಕಿರಿಕಿರಿ

05:07 PM May 25, 2022 | Team Udayavani |

ಆಲೂರು: ಲೋಕೋಪಯೋಗಿ ಇಲಾಖೆ ಬೇಜವಾಬ್ದಾರಿಯಿಂದ ಬಿಕ್ಕೋಡು ರಸ್ತೆ ಮಾರ್ಗವಾಗಿ ಚಲಿಸುವ ಬಸ್ಸುಗಳನ್ನು ಓಡಿಸದೆ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.

Advertisement

ಪಟ್ಟಣದಲ್ಲಿರುವ ಬಿಕ್ಕೋಡು ರಸ್ತೆಗೆ ಮೋರಿ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಪರ್ಯಾಯ ರಸ್ತೆ ಕಲ್ಪಿಸದೆ ಮುಖ್ಯ ರಸ್ತೆ ಬಂದ್‌ ಮಾಡಿದೆ. ಈ ಕಾರಣದಿಂದ ವಾಹನಗಳುಅನಿವಾರ್ಯವಾಗಿ ಹೌಸಿಂಗ್‌ಬೋರ್ಡ್‌ನಲ್ಲಿರುವ ರಸ್ತೆಗಳಲ್ಲಿ ಚಲಿಸಲು ಪ್ರಾರಂಭ ಮಾಡಿದವು.

ಪಪಂ ಆಡಳಿತವು ರಸ್ತೆಗಳಲ್ಲಿ ಸಂಚಾರಕ್ಕೆ ತೊಡಕಾಗಿದ್ದ ಗಿಡಗಂಟಿಗಳನ್ನು ತೆರವುಗೊಳಿಸಿ ಅನುಕೂಲ ಮಾಡಿತ್ತು. ಆದರೆ ಸೋಮವಾರ ಬೆಳಗ್ಗೆ ಬಸ್ಸೊಂದು ತಿರುವು ರಸ್ತೆಯಲ್ಲಿ ಚಲಿಸುವಾಗ ರಸ್ತೆಯಂಚಿನಲ್ಲಿದ್ದ ಕೊಳವೆ ಬಾವಿ ವಿದ್ಯುತ್‌ ಸ್ವಿಚ್‌ಬೋರ್ಡ್‌ ಮತ್ತು ನಿವಾಸಿಯೊಬ್ಬರ ಮನೆಕಾಂಪೌಂಡ್‌ಗೆ ಗುದ್ದಿದ ಪರಿಣಾಮ, ಸ್ವಿಚ್‌ಬೋರ್ಡ್‌ ನೆಲಕ್ಕುರುಳಿ, ಕಾಂಪೌಂಡ್‌ ಗೋಡೆಕುಸಿಯಿತು. ಮಾಲೀಕರು ನಷ್ಟ ಭರಿಸಬೇಕೆಂದು ಬಸ್‌ ಚಾಲಕನನ್ನ ಆಗ್ರಹಿಸಿದರು.

ಬಸ್‌ ಸಂಚಾರ ಅಸಾಧ್ಯ: ನಷ್ಟ ಭರಿಸಲು ಬಸ್‌ಚಾಲಕ ಅಸಮಾಧಾನಗೊಂಡು, ಹೌಸಿಂಗ್‌ಬೋರ್ಡ್‌ ರಸ್ತೆಯಲ್ಲಿ ಬಸ್‌ಗಳು ಚಲಿಸಲು ಸಾಧ್ಯವಾಗುವುದಿಲ್ಲ ವೆಂದು ಹಿರಿಯ ಅಧಿಕಾರಿಗಳಿಗೆ ತಿಳಿಸಿದರು. ಸ್ಥಳಕ್ಕೆ ಭೇಟಿ ನೀಡಿಪರಿಶೀಲಿಸಿದ ಅಧಿಕಾರಿಗಳು ಬಸ್ಸುಗಳನ್ನು ಓಡಿಸಲು ಅಸಾಧ್ಯ ಎಂದರು.

ಬಸ್‌ ಸೌಕರ್ಯ ಒದಗಿಸಿ: ಈ ಪರಿಣಾಮದಿಂದ ಆಲೂರು-ಬಿಕ್ಕೋಡು 25 ಕಿ.ಮೀ. ದೂರದ ರಸ್ತೆ ವ್ಯಾಪ್ತಿಗೊಳಪಡುವ ನೂರಾರು ಗ್ರಾಮಗಳಿಗೆ ಬಸ್‌ ಸಂಪರ್ಕವಿಲ್ಲದಾಗಿ ದೆ. ಶೈಕ್ಷಣಿಕ ವರ್ಷಪ್ರಾರಂಭವಾಗಿದ್ದು, ಪ್ರತಿದಿನ ಆಲೂರು, ಹಾಸನಕ್ಕೆ ತೆರಳುವ ವಿದ್ಯಾರ್ಥಿಗಳು, ಜನಸಾಮಾನ್ಯರು ತೊಂದರೆಗೊಳಗಾಗಿದ್ದಾರೆ. ಕೂಡಲೆ ಬಸ್ಸುಗಳನ್ನು ಓಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Advertisement

ಕಣತೂರು, ಚಿಕ್ಕಕಣಗಾಲು, ತೊರಳ್ಳಿ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಗ್ರಾಮಗಳಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಆಲೂರು, ಹಾಸನ ಕಾಲೇಜಿಗೆ ಶಿಕ್ಷಣಕ್ಕೆಂದು ತೆರಳುತ್ತಿದ್ದಾರೆ.ಜನಸಾಮಾನ್ಯರು ತಾಲೂಕು ಕೇಂದ್ರಕ್ಕೆ ಬಂದುಹೋಗುತ್ತಾರೆ. ಬಸ್ಸುಗಳನ್ನು ನಿಲ್ಲಿಸಿರುವುದರಿಂದ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆತೊಂದರೆಯಾಗಿದೆ. ಕೂಡಲೆ ಬಸ್ಸುಗಳನ್ನು ಓಡಿಸಲು ಸಾರಿಗೆ ಇಲಾಖೆ ಮುಂದಾಗಬೇಕು. – ನಟರಾಜ್, ನಾಕಲಗೂಡು.

ರಸ್ತೆ ಬಂದ್‌ ಮಾಡಬೇಕಾದರೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಇಲಾಖೆ ಮತ್ತು ಸ್ಥಳೀಯ ಪಪಂ ಗಮನಕ್ಕೆ ತಂದು, ಪರ್ಯಾಯ ವ್ಯವಸ್ಥೆ ಕಲ್ಪಿಸಿ ರಸ್ತೆ ಬಂದ್‌ ಮಾಡಬೇಕು. ಆದರೆ ಯಾವುದೇ ಮುನ್ಸೂಚನೆ ಇಲ್ಲದೆ ಲೋಕೋಪಯೋಗಿ ಇಲಾಖೆರಸ್ತೆ ಬಂದ್‌ ಮಾಡಿದೆ. ಇದರಿಂದ ಜನರಿಗೆತೊಂದರೆಯಾಗಿದೆ. ಈಗಲಾದರೂ ಹೌಸಿಂಗ್‌ಬೋರ್ಡ್‌ನಲ್ಲಿರುವ ರಸ್ತೆಗಳಲ್ಲಿ ವಾಹನಗಳುಹೂಳದಂತೆ ಜಲ್ಲಿ ಪೌಡರ್‌ ಬಳಸಿದರೆ ವಾಹನಗಳು ತಿರುಗಾಡಲು ಸುಗಮವಾಗುತ್ತದೆ. -ನಟರಾಜ್, ಮುಖ್ಯಾಧಿಕಾರಿ, ಪಪಂ, ಆಲೂರು.

ಸುಗಮ ಸಂಚಾರಕ್ಕೆ ಅವಕಾಶವಿಲ್ಲದೆ ಬಸ್ಸುಗಳನ್ನು ಓಡಿಸಲು ಸಾಧ್ಯವಾಗುವುದಿಲ್ಲ. ಏನಾದರೂ ಘಟನೆಗಳು ಜರುಗಿದರೆತೊಂದರೆಯಾಗುತ್ತದೆ. ಬೇರೆ ಮಾರ್ಗದಲ್ಲಿಬಸ್ಸುಗಳನ್ನು ಓಡಿಸಲು ಮಾರ್ಗ ಬದಲಾಗಬೇಕಾಗುತ್ತದೆ. ಇದು ಕೇಂದ್ರಕಚೇರಿಯಿಂದ ಆಗಬೇಕು. ನಾಲ್ಕಾರು ದಿನಗಳ ನಂತರ ರಸ್ತೆ ಸರಿಯಾಗಬಹುದು. ಸಾರ್ವಜನಿಕರು ಸಹಕರಿಸಬೇಕು. – ಮಂಜುನಾಥ್‌, ಡಿಪೋ ಎಂಜಿನಿಯರ್‌, ಹಾಸನ

ಮಳೆಯಾಗುತ್ತಿದ್ದ ಕಾರಣ ರಸ್ತೆಗೆ ಕ್ರಷರ್‌ ಪುಡಿ ಹಾಕಲುಸಾಧ್ಯವಾಗಲಿಲ್ಲ. ಈಗ ಬಿಸಿಲುವಾತಾವರಣವಿರುವುದರಿಂದ ನಾಳೆಹೌಸಿಂಗ್‌ ಬೋ ರ್ಡ್‌ ರಸ್ತೆಗೆ ಕ್ರಷರ್‌ ಪುಡಿಹಾಕಿ ವಾಹನಗಳ ಸಂಚಾರಕ್ಕೆ ಅನುಕೂಲಮಾಡಿಕೊಡಲಾಗುವುದು. 15 ದಿನದಲ್ಲಿಕಾಮಗಾರಿ ಪೂರ್ಣಗೊಳ್ಳುತ್ತದೆ. -ಮಧು, ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ

 

-ಟಿ.ಕೆ.ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next