Advertisement

ಸಕಲೇಶಪುರ: ಆತಂಕ ಹುಟ್ಟಿಸಿದ್ದ ಬೃಹತ್ ಕಾಳಿಂಗ ಸರ್ಪ ಹಿಡಿದ ಸ್ನೇಕ್ ಸಗೀರ್

03:38 PM Jan 10, 2022 | Team Udayavani |

ಸಕಲೇಶಪುರ: ತಾಲೂಕಿನ ಕುಂಬರಡಿ ಗ್ರಾಮದಲ್ಲಿ ಕಾಣಿಸಿಕೊಂಡ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಉರಗ ಪ್ರೇಮಿ ಸಗೀರ್ ಅವರು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಿದ್ದಾರೆ.

Advertisement

ಹಾನುಬಾಳ್ ಹೋಬಳಿ ಹೆಬ್ಬಸಾಲೆ ಗ್ರಾ.ಪಂ ವ್ಯಾಪ್ತಿಯ ಕುಂಬರಡಿ ಗ್ರಾಮದ ನಿಂಗಪ್ಪ ಎಂಬುವರ ಕಾಫಿ ತೋಟದಲ್ಲಿ ಕಾಳಿಂಗಸರ್ಪವೊಂದು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮನೆಯವರು ಆತಂಕಗೊಂಡು ಸ್ಥಳೀಯರ ಸಹಾಯದಿಂದ ಹಾವಿನ ಚಲನವಲನಗಳನ್ನು ಗಮನಿಸಿ ಪಟ್ಟಣದ ಉರಜ ತಜ್ಞ ಸಗೀರ್‌ರವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಸಗೀರ್, ಗ್ರಾಮಸ್ಥರುಗಳಾದ ಶಶಿಧರ್, ಸುರೇಶ್, ತನುಜ್, ವಿಜಿತ್‌ರವರ ಸಹಾಯದಿಂದ ಹಾವನ್ನು ಹಿಡಿದು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಒಪ್ಪಿಸಿದರು.

ಕಳೆದ ಹಲವಾರು ದಿನಗಳಿಂದ ಸುಮಾರು 11 ಅಡಿ ಉದ್ದದ ಈ ಕಾಳಿಂಗ ಸರ್ಪ ನಿಂಗಪ್ಪ ಹಾಗೂ ಅಕ್ಕಪಕ್ಕದ ಕಾಫಿ ತೋಟಗಳಲ್ಲಿ ಸಂಚರಿಸಿ ಗ್ರಾಮಸ್ಥರಲ್ಲಿ ಆತಂಕ ಹುಟ್ಟುಹಾಕಿತ್ತು. ಸ್ನೇಕ್ ಸಗೀರ್‌ರವರ ಗ್ರಾಮಸ್ಥರ ಸಹಕಾರದಿಂದ ಕಾಳಿಂಗಸರ್ಪವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದು ಗ್ರಾಮಸ್ಥರಲ್ಲಿ ನೆಮ್ಮದಿ ತಂದಿದೆ. ಸುಮಾರು 9000ಕ್ಕೂ ಹೆಚ್ಚು ಹಾವುಗಳನ್ನು ಸ್ನೇಕ್ ಸಗೀರ್ ಯಾವುದೆ ಪ್ರತಿಫಲದ ಅಪೇಕ್ಷೆಯಿಲ್ಲದೆ ಹಿಡಿದಿದ್ದು ಇವರಿಗೆ ಅರಣ್ಯ ಇಲಾಖೆ ಸೂಕ್ತ ನೆರವು ಕಲ್ಪಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next