Advertisement

ರಸ್ತೆಯಲ್ಲಿ ಸಿಕ್ಕ ಹಣವನ್ನು ವಾರಸುದಾರರಿಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಟೀ ಅಂಗಡಿ ಮಾಲೀಕ

07:40 PM Jun 27, 2022 | Team Udayavani |

ಸಕಲೇಶಪುರ: ರಸ್ತೆಯಲ್ಲಿ ವ್ಯಕ್ತಿಯೋರ್ವರು ಅಕಸ್ಮಿಕವಾಗಿ ಬೀಳಿಸಿಕೊಂಡು ಹೋಗಿದ್ದ ಹಣ ಹಾಗೂ ಬ್ಯಾಂಕ್ ಪಾಸ್ ಬುಕ್ ಗಳನ್ನು ಟೀ ಅಂಗಡಿ ಮಾಲಿಕರೊರ್ವರು ನೈಜ ಮಾಲಿಕರಿಗೆ ಹಿಂತಿರುಗಿಸುವ ಮುಖಾಂತರ ಪ್ರಾಮಾಣಿಕತೆ ಮೆರೆದಿದ್ದಾರೆ.

Advertisement

ಪಟ್ಟಣದ ಬಿ.ಎಮ್ ರಸ್ತೆಯಲ್ಲಿರುವ ಲಕ್ಷ್ಮಣ್ ಎಂಬುವರ ಟೀ ಅಂಗಡಿ ಸಮೀಪ ಇದೇ ತಿಂಗಳ 23 ರಂದು ಮಳಲಿ ಗ್ರಾಮದ ವಸಂತ್ ಕುಮಾರ್ ಎನ್ನುವ ವೃದ್ದರೊರ್ವರು 5000ರೂ ನಗದು ಹಾಗೂ ಬ್ಯಾಂಕ್ ಪಾಸ್ ಬುಕ್ ಗಳನ್ನು ಬೀಳಿಸಿಕೊಂಡು ಹೋಗಿದ್ದರು. ಬ್ಯಾಂಕ್ ಪಾಸ್ ಬುಕ್ ನಲ್ಲಿ ವಸಂತ್ ಕುಮಾರ್ ರವರ ದೂರವಾಣಿ ಸಂಖ್ಯೆ ಇರದ ಕಾರಣ ಲಕ್ಷ್ಮಣ್ ಪಾಸ್ ಬುಕ್ ದಾಖಲಾತಿಗಳನ್ನು ಕೆಲವು ವಾಟ್ಸಪ್ ಗ್ರೂಪ್ ಗಳಲ್ಲಿ ಹಂಚಿಕೊಂಡಿದ್ದರು. ಇದನ್ನು ವಾಟ್ಸಪ್ ಗ್ರೂಪ್ ಒಂದರಲ್ಲಿ ನೋಡಿದ ವ್ಯಕ್ತಿಯೋರ್ವರು ವಸಂತ್ ಕುಮಾರ್ ರವರ ಮಗನಿಗೆ ವಿಷಯ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸೋಮವಾರ ಲಕ್ಷ್ಮಣ್ ರವರ ಅಂಗಡಿಗೆ ಆಗಮಿಸಿದ ವಸಂತ್ ಕುಮಾರ್ ರವವರಿಗೆ ಲಕ್ಷ್ಮಣ್ ರವರು ಬೀಳಿಸಿಕೊಂಡಿದ್ದ 5000ರೂಗಳು ಹಾಗೂ ಪಾಸ್ ಬುಕ್ ಹಿಂತಿರುಗಿಸುವ ಮುಖಾಂತರ ಪ್ರಾಮಾಣಿಕತೆ ಮೆರೆದಿದ್ದಾರೆ. ಈ ಹಿನ್ನೆಲೆಯಲ್ಲಿ ವಸಂತ್ ಕುಮಾರ್ ರವರ ಕುಟುಂಬ ಹಾಗೂ ಸಾರ್ವಜನಿಕರು ಟೀ ಅಂಗಡಿ ಮಾಲಿಕ ಲಕ್ಚ್ಮಣ್ ರವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಸಾಗರ:  ವಿಕಿಪೀಡಿಯಾ ಪ್ರಕಾರ ಕಾಗೋಡು ಈಗ ಮಾಜಿ ರಾಜಕಾರಣಿ!

Advertisement

Udayavani is now on Telegram. Click here to join our channel and stay updated with the latest news.

Next