Advertisement

ಸಜೀಪನಡು: “ಗೈರಾಗಿರುವ ಅಧಿಕಾರಿಗಳ ವಿರುದ್ಧ ದೂರು’

11:25 PM Sep 23, 2019 | sudhir |

ಬಂಟ್ವಾಳ: ಗ್ರಾ.ಪಂ.ಗಳಲ್ಲಿ ನಡೆಯುವ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಗಳ ಕುರಿತು ಅಧಿಕಾರಿಗಳು ಗ್ರಾ.ಪಂ.ನ ಸಭೆ ಎಂಬ ತಾತ್ಸಾರ ಭಾವನೆಯನ್ನು ಬಿಟ್ಟು ಸಭೆಗಳಲ್ಲಿ ಭಾಗವಹಿಸಬೇಕು. ನಮ್ಮ ಗ್ರಾ.ಪಂ.ನಲ್ಲಿ ನಡೆದ ಕೆಡಿಪಿ ಸಭೆಗೆ ಗೈರಾಗಿರುವ ಅಧಿಕಾರಿಗಳ ಕುರಿತು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ದೂರು ನೀಡಲಾಗುವುದು ಎಂದು ಸಜೀಪನಡು ಗ್ರಾ.ಪಂ. ಅಧ್ಯಕ್ಷ ಮೊಹಮ್ಮದ್‌ ನಾಸೀರ್‌ ಹೇಳಿದರು.

Advertisement

ಸೋಮವಾರ ಸಜೀಪನಡು ಗ್ರಾ.ಪಂ. ನಲ್ಲಿ ಸರಕಾರದ ಆದೇಶದಂತೆ ನಡೆದ ಮೊದಲ ಕರ್ನಾಟಕ ಅಭಿವೃದ್ಧಿ ಕಾರ್ಯ ಕ್ರಮಗಳು(20) ಸೇರಿದಂತೆ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಗ್ರಾ.ಪಂ.ನ ಮೊದಲ ಸಭೆಯಲ್ಲಿ ಕಂದಾಯ, ಶಿಕ್ಷಣ, ಕೃಷಿ, ಮೆಸ್ಕಾಂ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಂಥಾಲಯ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಪಾಲ್ಗೊಂ ಡಿದ್ದರು.

ತೋಟಗಾರಿಕೆ, ಸಾಮಾಜಿಕ ಅರಣ್ಯ, ಸಣ್ಣ ನೀರಾವರಿ, ಗ್ರಾಮೀಣ ರಸ್ತೆ- ಪಂಚಾಯತ್‌ ರಾಜ್‌, ಸಮಾಜ ಕಲ್ಯಾಣ, ಪ್ರವಾಸೋದ್ಯಮ, ಮೀನು ಗಾರಿಕೆ, ಗುಡಿ ಕೈಗಾರಿಕಾ ಇಲಾಖೆ ಅಧಿಕಾರಿಗಳು ಗೈರಾಗಿದ್ದು, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಅಧ್ಯಕ್ಷರು ಸಭೆಗೆ ಮಾಹಿತಿ ನೀಡಿದರು.

ಸಜೀಪನಡು ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆಗಳ ಮುಖ್ಯಶಿಕ್ಷಕರು ತಮ್ಮ ಶಾಲೆಯ ಬೇಡಿಕೆ ಹಾಗೂ ಶಿಕ್ಷಣ ಇಲಾಖೆಯ ಕುರಿತು ಮಾಹಿತಿ ನೀಡಿದರು.
ಸಜೀಪನಡು ಗ್ರಾಮ ಕರಣಿಕ ಎ. ಪ್ರಕಾಶ್‌ ಅವರು ಕಂದಾಯ ಇಲಾಖೆಯ ಕುರಿತು ಮಾಹಿತಿ ನೀಡಿ, ತಮ್ಮ ಕಚೇರಿಯ ಬಾಗಿಲು ದುರಸ್ತಿ ಪಡಿಸುವಂತೆ ಮನವಿ ಮಾಡಿದರು. ಗ್ರಾಮದಲ್ಲಿ 27 ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಾಗಿದ್ದು, 4 ಅರ್ಜಿಗಳನ್ನು ತಾಲೂಕು ಕಚೇರಿಗೆ ನೀಡಲಾಗಿದೆ ಎಂದು ತಿಳಿಸಿದರು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಯವರು ಗ್ರಾಮದ ಅಂಗನವಾಡಿಗಳ ಸ್ಥಿತಿಗತಿಯ ಕುರಿತು ಸಭೆಯ ಗಮನಕ್ಕೆ ತಂದರು. ವಿದ್ಯುತ್‌ ಪೂರೈಕೆಯ ದೃಷ್ಟಿಯಿಂದ ಆದರ್ಶ ಯೋಜನೆಯು ಅರ್ಧಕ್ಕೆ ನಿಂತಿದ್ದರೂ, ಮೆಸ್ಕಾಂನ ಇತರ ಅನುದಾನದಿಂದ ಗ್ರಾಮದ ವಿದ್ಯುತ್‌ ಸಮಸ್ಯೆಗಳನ್ನು ಪರಿಹರಿಸಲಾಗುತ್ತಿದೆ ಎಂದು ಮೆಸ್ಕಾಂ ಜೆಇ ಮಾಹಿತಿ ನೀಡಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶಿವಗೊಂಡಪ್ಪ ಬಿರಾದರ್‌ ಅವರು ಜಮಾಬಂದಿಯ ವಿವರ ನೀಡಿದರು. ಉಪಾಧ್ಯಕ್ಷೆ ಸುನೀತಾ ಶಾಂತಿ ಮೊರಾಸ್‌ ಉಪಸ್ಥಿತರಿದ್ದರು. ಸಿಬಂದಿ ಮುಝಮ್ಮಿಲ್‌ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next