ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್ ಗೋಕುಲದ ಯುವ ವಿಭಾಗದ ವತಿಯಿಂದ 7ರಿಂದ 15 ವರ್ಷದೊಳಗಿನ ಮಕ್ಕಳಿಗಾಗಿ ಜೂ. 15ರಿಂದ 3 ದಿನಗಳ ಬೇಸಗೆ ಶಿಬಿರವನ್ನು ನೆರೂಲ್‌ನಲ್ಲಿರುವ ಸಂಸ್ಥೆಯ ಹಿರಿಯ ನಾಗರಿಕರ ಆಶ್ರಯಧಾಮ ಆಶ್ರಯದಲ್ಲಿ ಆಯೋಜಿಸಲಾಗಿತ್ತು.
ಜೂ. 15 ರಂದು ಸಂಜೆ ಸಂಘದ ಉಪಾಧ್ಯಕ್ಷರಾದ ವಾಮನ್ ಹೊಳ್ಳ, ಕಾರ್ಯದರ್ಶಿ ಅನಂತಪದ್ಮನಾಭ ಪೋತಿ, ಹಾಗೂ ಪುಟಾಣಿಗಳು, ಪದಾಧಿಕಾರಿಗಳು ಹಾಗೂ ಕಾ ರ್ಯಕಾರಿ ಸಮಿತಿಯವರ ಉಪಸ್ಥಿತಿಯಲ್ಲಿ ದೀಪ ಪ್ರಜ್ವ ಲನೆಯೊಂದಿಗೆ ಶಿಬಿರಕ್ಕೆ ಸಾಂಪ್ರದಾಯಿಕವಾಗಿ ಚಾಲನೆ ನೀಡಿದರು. ಬಾಲ ಕಲಾವೃಂದದವರಿಂದ ಪ್ರಾರ್ಥನೆ ನೆರವೇರಿತು.
ಮರುದಿನ ಮುಂಜಾನೆ ಮಕ್ಕಳಿಂದ ಶ್ಲೋಕ ಪಠಣೆ, ಪ್ರಾರ್ಥನೆಯೊಂದಿಗೆ ಶಿಬಿರದ ಕಾರ್ಯಾಗಾರ ಪ್ರಾರಂಭ ವಾಯಿತು. ಶಿಬಿರದಲ್ಲಿ ಸಹನಾ ಪೋತಿ ಅವರು ಭಜನೆ, ಪ್ರಶಾಂತ್ ಹೆರ್ಲೆ ಅವರು ಆಟೋಟಗಳ ಬಗ್ಗೆ, ಪ್ರೇಮಾ ರಾವ್ ಮತ್ತು ಪ್ರಸಾದ್ ನಿಂಜೂರ್ ಅವರು ಕನ್ನಡ ಕಲಿಕೆ ಹಾಗೂ ನೀರಜಾ ಭಟ್ ಅವರು ಸಂಸ್ಕೃತ ಕಲಿಕೆ, ಚಂದ್ರಾವತಿಯವರು ಕಿರು ಪ್ರಹಸನ, ಕೃತಿ ಚಡಗ ಅವರು ನೃತ್ಯ, ತನ್ವಿ ರಾವ್ ಅವರು ಯಕ್ಷಗಾನ, ರಚಿತಾ ರಾವ್ – ಚಟ್ ಪಟ್ ಚಾಟ್ ತಿನಿಸು ತಯಾರಿ, ಶಾಲಿನಿ ಉಡುಪ, ರಶ್ಮಿ ಭಟ್ ಮತ್ತು ಸರೋಜಾ ಸತ್ಯನಾರಾಯಣರವರು ಕರಕುಶಲ ವಸ್ತುಗಳ ತಯಾರಿಕೆಗಳ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು.
ಶಿಬಿರದ ಸಮಾರೋಪ ಸಮಾರಂಭವು ಗೌರವ ಕೋಶಾಧಿಕಾರಿ ಹಾಗೂ ಯುವ ವಿಭಾಗದ ಅಧ್ಯಕ್ಷರಾದ ಹರಿದಾಸ್ ಭಟ್ ಅವರ ನಿರೂಪಣೆಯಲ್ಲಿ ನಡೆಯಿತು. ಕಾರ್ಯದರ್ಶಿ ಎ. ಪಿ. ಕೆ. ಪೋತಿ ಹಾಗೂ ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್ ಮತ್ತು ಕಾರ್ಯಕಾರಿ ಸಮಿತಿಯವರು ಉಪಸ್ಥಿತರಿದ್ದರು. ಶಿಬಿರದ ಯಶಸ್ಸಿಗೆ ಸಹಕರಿಸಿದ ಶಿಕ್ಷಕ -ಶಿಕ್ಷಕಿಯರನ್ನು, ಕಾರ್ಯಕರ್ತರನ್ನು, ಪದಾಧಿಕಾರಿಗಳು ಗೌರವಿಸಲಾಯಿತು.
ಹರಿದಾಸ್ ಭಟ್ ಅವರು ಶಿಬಿರದಲ್ಲಿ ಭಾಗವಹಿಸಿದ ಮಕ್ಕಳಿಗೆ ಶುಭ ಹಾರೈಸಿ, ಮುಂದಿನ ಶಿಬಿರಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸುವಂತಾಗಲಿ ಎಂದು ಆಶಿಸಿದರು. ಶಿಬಿರವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಯುವ ವಿಭಾಗ ಹಾಗೂ ಮಹಿಳಾ ವಿಭಾಗದ ಕಾರ್ಯಕರ್ತರನ್ನು ಅಭಿನಂದಿಸಿ ವಂದಿಸಿದರು.