Advertisement

ಪ್ರಣಯ್‌, ಪ್ರಣೀತ್‌ ಗೆಲುವಿನ ಶುಭಾರಂಭ

10:11 AM Oct 26, 2017 | |

ಪ್ಯಾರಿಸ್‌: ಭಾರತೀಯ ಶಟ್ಲರ್‌ಗಳಾದ ಎಚ್‌. ಎಸ್‌. ಪ್ರಣಯ್‌ ಮತ್ತು ಬಿ ಸಾಯಿ ಪ್ರಣೀತ್‌ ಅವರು ಸುಲಭ ಜಯದೊಂದಿಗೆ ಫ್ರೆಂಚ್‌ ಓಪನ್‌ ಸೂಪರ್‌ ಸೀರೀಸ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ದ್ವಿತೀಯ ಸುತ್ತಿಗೇರಿದ್ದಾರೆ.

Advertisement

ಯುಎಸ್‌ ಓಪನ್‌ ಚಾಂಪಿಯನ್‌ ಆಗಿರುವ ಪ್ರಣಯ್‌ ಅವರು ಡೆನ್ಮಾರ್ಕ್‌ ಓಪನ್‌ನ ಫೈನಲಿಸ್ಟ್‌ ಕೊರಿಯದ 37ರ ಹರೆಯದ ಲೀ ಹ್ಯುನ್‌ ಅವರನ್ನು 21-15, 21-17 ಗೇಮ್‌ಗಳಿಂದ ಉರುಳಿಸಿದರು. ಪ್ರಣಯ್‌ ಡೆನ್ಮಾರ್ಕ್‌ ಓಪನ್‌ನಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದರು. 

ಇನ್ನೊಂದು ಪಂದ್ಯದಲ್ಲಿ ಪ್ರಣೀತ್‌ ಅವರು ಥಾçಲಂಡಿನ ಖೋಸಿಟ್‌ ಫೆಪ್ರಾದಾಬ್‌ ಅವರನ್ನು 21-13, 21-23, 21-19 ಗೇಮ್‌ಗಳಿಂದ ಕೆಡಹಿ ದ್ವಿತೀಯ ಸುತ್ತಿಗೇರಿದರು. ಪ್ರಣೀತ್‌ ಡೆನ್ಮಾರ್ಕ್‌ ಓಪನ್‌ನಲ್ಲಿ ಮೊದಲ ಸುತ್ತಿನಲ್ಲಿಯೇ ಸೋತಿದ್ದರು. ಪ್ರಣೀತ್‌ ಮುಂದಿನ ಸುತ್ತಿನಲ್ಲಿ ಮೂರು ಬಾರಿಯ ಒಲಿಂಪಿಕ್‌ ಬೆಳ್ಳಿ ವಿಜೇತ  ಮತ್ತು ಹಾಲಿ ವಿಶ್ವದ 7ನೇ ರ್‍ಯಾಂಕಿನ ಮಲೇಶ್ಯದ ಲೀ ಚಾಂಗ್‌ ವೆಯಿ ಅವರನ್ನು ಎದುರಿಸಲಿದ್ದಾರೆ. ಪ್ರಣಯ್‌ ಅವರು ಈ ಋತುವಿನಲ್ಲಿ ಚಾಂಗ್‌ ವೆಯಿ ಅವರನ್ನು ಎರಡು ಬಾರಿ ಸೋಲಿಸಿದ್ದರಿಂದ ಪ್ರಣೀತ್‌ ಮುಂದಿನ ಪಂದ್ಯಕ್ಕಾಗಿ ಪ್ರಣಯ್‌ ಅವರಿಂದ ಮಾಹಿತಿ ಪಡೆಯಲು ಬಯಸಿದ್ದಾರೆ. 

ಮಿಕ್ಸೆಡ್‌ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪಾ ಮತ್ತು ಸಿಕ್ಕಿ ರೆಡ್ಡಿ ಅವರು ಇಂಡೋನೇಶ್ಯದ ಟೊಂಟೋವಿ ಅಹ್ಮದ್‌ ಮತ್ತು ಲಿಲಿಯಾನ ನಾಟ್ಸೆರ್‌ ಕೈಯಲ್ಲಿ ಸೋತು ಹೊರಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next