ಸೈದಾಪುರ: ಮಗು ಮನೆಯಲ್ಲಿದ್ದರೆ ತನ್ನ ಪತ್ನಿ ಕೂಲಿ ಕೆಲಸಕ್ಕೆ ಹೋಗದೆ ಮನೆಯಲ್ಲಿರುತ್ತಾಳೆ ಎಂಬ ಕ್ಷಲಕ ಕಾರಣಕ್ಕೆ ತನ್ನ ಒಂಬತ್ತು ತಿಂಗಳ ಮಗಳು ತನುಶ್ರೀಯನ್ನು ಕೂತ್ತಿಗೆಗೆ ದಾರದಿಂದ ಉಸಿರುಗಟ್ಟಿಸಿ ಕೊಂದ ತಂದೆ. ಈ ಘಟನೆಯು ಬದ್ದೇಪಲ್ಲಿ ಗ್ರಾಮದಲ್ಲಿ ರಾಮು ಎಂಬತನಿಂದ ಈ ಕೃತ್ಯ ಜರುಗಿದೆ.
ತನಗೆ ಹೆಣ್ಣು ಮಗು ಜನಿಸಿದೆ ಮತ್ತು ಈ ಮಗುವಿನ ಆರೈಕೆ ಮಾಡುವುದರಿಂದ ತನ್ನ ಪತ್ನಿ ಕೂಲಿ ಕೆಲಸಕ್ಕೆ ತೆರಳದೆ ಮನೆಯಲ್ಲಿ ಇರುತ್ತಾಳೆ ಎಂಬ ಕಾರಣದಿಂದ, ತನ್ನ ಪತ್ನಿಗೆ ಮಗುವಿನ ಆರೈಕೆ ನಾನು ಮಾಡುತ್ತೇನೆ, ನೀನು ಕೂಲಿ ಕೆಲಸಕ್ಕೆ ಹೋಗು ಎಂದು ಆಕೆಗೆ ಕೆಲಸಕ್ಕೆ ಕಳುಹಿಸಿ, ಕಂಠ ಪೂರ್ತಿ ಕುಡಿದು ಮಗುವಿನ ಕೊರಳಿನಲ್ಲಿದ್ದ ದಾರಗಳಿಂದ ಮಗುವಿನ ಕತಿಗೆ ಬಿಗಿಯಾಗಿ ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂದು ಪತ್ನಿ ಆರೋಪಿಸಿ ಸೈದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: 78 ವರ್ಷದ ವೃದ್ದೆಯ ಮೇಲೆ ಹೇಯ ಕೃತ್ಯ ; ಅಪರಾಧಿಗೆ ಕಠಿಣ ಶಿಕ್ಷೆ