Advertisement

ಸೈದಾಪುರ: ಕ್ವಾರಂಟೈನ್‌ಲ್ಲಿದ್ದ 9 ಜನಕ್ಕೆ ಸೋಂಕು

12:37 PM Jun 07, 2020 | Naveen |

ಸೈದಾಪುರ: ಮುಂಬೈನಿಂದ ಜಿಲ್ಲೆಗೆ ಆಗಮಿಸಿ ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಮುಗಿಸಿ ಪಟ್ಟಣಕ್ಕೆ ಬಂದಿದ್ದ ಪುರುಷನೊಬ್ಬನಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಸೋಂಕಿತ ವ್ಯಕ್ತಿ ಮೂರು ದಿನಗಳಲ್ಲಿ ಪಟ್ಟಣದಲ್ಲಿ ಅಲೆದಾಡಿರುವುದರಿಂದ ಜನರಲ್ಲಿ ಆತಂಕ ಸೃಷ್ಟಿಯಾಗಿದೆ.

Advertisement

ಹಾಟ್‌ಸ್ಪಾಟ್‌ ನಗರಗಳಾದ ಪುಣೆ, ಮುಂಬೈ ಮತ್ತು ಹೈದ್ರಾಬಾದ್‌ನಿಂದ ಆಗಮಿಸಿದ ವಲಸಿಗರನ್ನು ಪಟ್ಟಣದ ಸ್ವಾಮಿ ವಿವೇಕಾನಂದ ವಸತಿ ಶಾಲೆಯಲ್ಲಿ 39 ಜನ, ಮೆಟ್ರಿಕ್‌ ಪೂರ್ವ ಬಾಲಕರ ವಸತಿ ನಿಲಯದಲ್ಲಿ 37 ಜನ, ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ 255 ಜನ ಸೇರಿ 331 ಕಾರ್ಮಿಕರನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಮೇ 25ರಂದು ಮೂಗು ಮತ್ತು ಗಂಟಲು ದ್ರವ ತೆಗೆದುಕೊಂಡು ಕೋವಿಡ್ ಪರೀಕ್ಷೆಗಾಗಿ ಪ್ರಯೋಗಲಾಯಕ್ಕೆ ಕಳುಹಿಹಿಸಿಕೊಡಲಾಗಿದೆ. ಆದರೆ ಸರ್ಕಾರದ ಆದೇಶದಂತೆ ಕೋವಿಡ್ ಪರೀಕ್ಷೆ ಫಲಿತಾಂಶ ಬರುವ ಮುನ್ನವೇ ಮೇ 30 ಮತ್ತು ಜೂನ್‌ 2ರಂದು ಎಲ್ಲರಿಗೂ ಗೃಹ ಬಂಧನದಲ್ಲಿರುವಂತೆ ತಿಳಿಸಿ ಸಾಂಸ್ಥಿಕ ಕ್ವಾರಂಟೈನಿಂದ ಬಿಡುಗಡೆ ಮಾಡಲಾಗಿದೆ.

ಸೈದಾಪುರದ ಒಬ್ಬನ ಸೇರಿದಂತೆ ಸಮೀಪದ ಬಾಲಛೇಡ ಗ್ರಾಮದ ಇಬ್ಬರಿಗೆ ಸೋಂಕು ದೃಡಪಟ್ಟಿದೆ. ಸೋಂಕಿತರು ಗೃಹ ಬಂಧನದಲ್ಲಿರದೆ ಪಟ್ಟಣದ ಕ್ಷೌರಿಕ ಮತ್ತು ಮಾರಕಟ್ಟೆ ಸೇರಿದಂತೆ ಗ್ರಾಮಗಳಲ್ಲಿ ಅಲೆದಾಡಿದ್ದಾರೆ. ಇದು ಕೋವಿಡ್ ಆತಂಕ ಹೆಚ್ಚಾಗುವಂತೆ ಮಾಡಿದೆ. ಪಟ್ಟಣದ ಹೊರವಲದಲ್ಲಿರುವ ಮೂರು ಕ್ವಾರಂಟೈನ್‌ ಕೇಂದ್ರದಲ್ಲಿದ್ದ 331 ವಲಸಿಗರಲ್ಲಿ 9 ಜನಕ್ಕೆ ಕೋವಿಡ್ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಇಲ್ಲಿನ ಸಿಬ್ಬಂದಿಗೂ ಆತಂಕ ಎದುರಾಗಿದೆ.

ಜೂ. 1ರಿಂದ ರೈಲು ಸಂಚಾರ ಆರಂಭವಾಗಿದೆ. ಈಗಾಗಲೇ ಮುಂಬೈನಿಂದ ಹಲವಾರು ಪ್ರಯಾಣಿಕರು ಆಗಮಿಸಿದ್ದಾರೆ. ಅವರೆಲ್ಲನ್ನು ಕ್ವಾರಂಟೈನ್‌ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ರೈಲುಗಳ ಸಂಚಾರ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸುವ ನಿರೀಕ್ಷೆಯಿದೆ.

ಕ್ಷೌರದ ಅಂಗಡಿಗಳು ಬಂದ್‌
ಸಾಂಸ್ಥಿಕ ಕ್ವಾರಂಟೈನ್‌ ಅವಧಿ ಮುಗಿಸಿ ಪಟ್ಟಣಕ್ಕೆ ಆಗಮಿಸಿದ್ದ ಕೋವಿಡ್ ಸೋಂಕಿತ ವ್ಯಕ್ತಿ ಕ್ಷೌರ ಮಾಡಿಸಿಕೊಂಡಿದ್ದಾನೆ. ಇದರಿಂದ ಕ್ಷೌರಿಕರ ಕುಟುಂಬ ಸೇರಿದಂತೆ ಆಗಂಡಿಯಲ್ಲಿ ಕ್ಷೌರ ಮಾಡಿಸಿಕೊಂಡ ಜನರಲ್ಲಿ ಆತಂಕ ಹೆಚ್ಚಾಗಿದೆ. ಆದರಿಂದ ಪಟ್ಟಣದ ಕ್ಷೌರದ ಅಂಗಡಿ ಮಾಲಿಕರು ಜೂನ್‌ 22ರ ವರೆಗೆ 15 ದಿನಗಳ ಕಾಲ ತಮ್ಮ ಅಂಗಡಿಗಳನ್ನು ಬಂದ್‌ ಮಾಡಿ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ನಿಯಮ ವಿಧಿಸಿಕೊಂಡಿದ್ದಾರೆ.

Advertisement

ಜಿಲ್ಲೆಯ ಸುಮಾರು ಐದು ಸಾವಿರಕ್ಕಿಂತ ಹೆಚ್ಚು ಕೋವಿಡ್ ಫಲಿತಾಂಶ ಬರುವುದು ಬಾಕಿ ಇದೆ. ಮುಂದಿನ 2 ವಾರಗಳಲ್ಲಿ ಬರುವ ನಿರೀಕ್ಷೆ ಇದೆ. ಈ ದಿನಗಳು ಅತ್ಯಂತ ಸೂಕ್ಷ್ಮವಾಗಿವೆ. ಈ ಸಮಯದಲ್ಲಿ ಗೃಹ ಬಂಧನದಲ್ಲಿರುವವರು ಸ್ವಯಂ ಜಾಗೃತಿಯೊಂದಿಗೆ ಸಾಮಾಜಿಕ ಜವಾಬ್ದಾರಿ ನಿಭಾಹಿಸಬೇಕು. ನಿಯಮ ಉಲ್ಲಂಘಿಸಿ ಮನೆ ಬಿಟ್ಟು ಹೊರಗೆ ಬಂದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆ. ಆದ್ದರಿಂದ ಸಾರ್ವಜನಿಕರು ಆತಂಕ ಪಡದೆ ಮುಂಜಾಗೃತಾ ಕ್ರಮ ಕೈಗೊಂಡು ಕೊರೊನಾ ಹರಡುವುದನ್ನು ತಡೆಗಟ್ಟಲು ಆಡಳಿತ ವರ್ಗಕ್ಕೆ ಸಹಕಾರ ನೀಡಬೇಕು.
ಶಂಕರಗೌಡ ಸೋಮನಾಳ,
ಸಹಾಯಕ ಆಯುಕ್ತ ಯಾದಗಿರಿ

ಭೀಮಣ್ಣ ಬಿ. ವಡವಟ್‌

Advertisement

Udayavani is now on Telegram. Click here to join our channel and stay updated with the latest news.

Next