Advertisement

ಮತಾಂತರ ನಿಷೇಧ ಕಾಯ್ದೆಗಾಗಿ ಸೈದಾಪುರ ಬಂದ್‌

06:07 PM Oct 02, 2021 | Team Udayavani |

ಸೈದಾಪುರ: ಹಣದ ಆಮಿಷ, ಸುಳ್ಳು ಭರವಸೆ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾದರೆ ಅದರ ಪರಿಣಾಮ ಗಂಭೀರವಾಗಿರುತ್ತದೆ ಎಂದು ನೆರಡಗಂ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತ ಮಠದ ಪಂಚಮ ಸಿದ್ಧಲಿಂಗ ಸ್ವಾಮಿಗಳು ಹೇಳಿದರು. ಪಟ್ಟಣದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ಆಗ್ರಹಿಸಿ ಹಿಂದೂ ದೃದಯ ಸಾಮ್ರಾಟ ಜೈ ಛತ್ರಪತಿ ಶಿವಾಜಿ ಸೇನೆ ಹಾಗೂ ಇತರ ಹಿಂದೂ ಪರ ಸಂಘಟನೆಗಳು ಕರೆ ನೀಡಿದ್ದ ಸ್ವಯಂ ಘೋಷಿತ ಬಂದ್‌ ಹಾಗೂ ಉಪವಾಸ ಸತ್ಯಾಗ್ರಹದಲ್ಲಿ ಅವರು ಮಾತನಾಡಿದರು.

Advertisement

ಹಿಂದೂ ಧರ್ಮದ ಬಗ್ಗೆ ಅಪಪ್ರಚಾರ ಮಾಡುವುದಲ್ಲದೆ, ಧರ್ಮದ ಪದ್ಧತಿಗಳಿಗೆ ಅಗೌರವ ಸಲ್ಲಿಸುತ್ತಿದ್ದಾರೆ. ಆದ ಕಾರಣ ಇತರೆ ರಾಜ್ಯಗಳಂತೆ ನಮ್ಮಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತಂದು ಅಮಾಯಕ ಹಿಂದೂಗಳನ್ನು ಮತ್ತು ಸನಾತನ ಧರ್ಮ, ಸಂಸ್ಕೃತಿ ಸಂಪ್ರದಾಯಗಳ ರಕ್ಷಣೆ ಮಾಡಬೇಕು ಎಂದರು. ಛತ್ರಪತಿ ಶಿವಾಜಿ ಸೇನೆಯ ರಾಜ್ಯಾಧ್ಯಕ್ಷ ಪರಶುರಾಮ ಶೇಗುರಕರ್‌ ಮಾತನಾಡಿದರು.

ಇದಕ್ಕೂ ಮೊದಲು ಬಸ್‌ ನಿಲ್ದಾಣದಿಂದ ಕನಕ ವೃತ್ತ, ಹೇಮರೆಡ್ಡಿ ಮಲ್ಲಮ್ಮ ವೃತ್ತ, ಅಂಬಿಗರ ಚೌಡಯ್ಯ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆಯಿತು. ಈ ವೇಳೆ ವಿಶ್ವಾನಾಥರೆಡ್ಡಿಗೌಡ ಚಿಗಾನೂರ, ಬಸ್ಸುಗೌಡ ಐರೆಡ್ಡಿ, ಮಲ್ಲಣ್ಣಗೌಡ ಸೈದಾಪುರ, ರವಿ ಪಾಟೀಲ್‌ ಜೋಳದಡಗಿ, ಮಲ್ಲರೆಡ್ಡಿ ಖಾನಾಪುರ, ಮಾಳಪ್ಪ ಅರಿಕೇರಿ, ರಾಜು ದೊರೆ, ಅರ್ಜುನ ಚವ್ಹಾಣ, ಸಿದ್ದಲಿಂಗರೆಡ್ಡಿ ದೇಶಮುಖ, ಸಿದ್ದು ಪೂಜಾರಿ, ಗುರುಲಿಂಗಯ್ಯ ಸ್ವಾಮಿ, ಶಿವುಕುಮಾರ ಮುನಗಾಲ, ಪ್ರಭು ಗೂಗಲ್‌, ಅಪ್ಪಣಿ ಹಿರೇಮಠ, ನಂದುಗೋಪಾಲ ಪಟವಾರಿ, ರಾಘವೇಂದ್ರ ಕಲಾಲ್‌, ವಿಶ್ವನಾಥ ಯಾದವ ಬದ್ದೇಪಲ್ಲಿ, ಶಿವಕುಮಾರ ಅವಂಟಿ, ಮಲ್ಲೇಶ ನಾಯಕ
ಕೂಡ್ಲೂರು, ಭೀಮಣ್ಣ ಮಾಡಿವಾಳಕರ್‌, ವಿಜಯ ಕಂದಳ್ಳಿ, ರಾಜೇಶ ದೇವರೆಶಟ್ಟಿ, ಬಸವಲಿಂಗಪ್ಪ ಕಲಾಲ್‌, ಲಕ್ಷ್ಮಣ ನಾಯಕ ನೀಲಹಳ್ಳಿ, ಅಂಬರೀಶ ನಾಯಕ, ಲ ಕ್ಷ್ಮಣ ನಾಯಕ, ಪ್ರಕಾಶ ಕೂಡ್ಲೂರು, ಶಿವುಗೌಡ, ಸುರೇಶ ಮಾಗನೂರ, ಬನ್ನಯ್ಯಸ್ವಾಮಿ ಕಾಳೆಬೆಳಗುಂದಿ, ಗಂಗು ಸ್ವಾಮಿ, ಮಹೇಶ ಜೇಗರ್‌, ನರೇಶ, ಬಸವರಾಜ ನಾಯಕ, ಮರೆಪ್ಪ, ಅಂಜಪ್ಪ, ಕಾಶಿನಾಥ ಶಟ್ಟಿಹಳ್ಳಿ ಇದ್ದರು.

ಅಸ್ವಸ್ಥ ಕಾರ್ಯಕರ್ತಆಸ್ಪತ್ರೆಗೆ ದಾಖಲು ಜಿಲ್ಲೆಯಲ್ಲಿ ಬಲವಂತದ ಮತಾಂತರ ವಿರುದ್ಧ ಜೈ ಛತ್ರಪತಿ ಶಿವಾಜಿ ಸೇನಾ ಕಾರ್ಯಕರ್ತರು ಹಮ್ಮಿಕೊಂಡಿದ್ದಾರೆ. ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಹಿಂದೂಪರ ಕಾರ್ಯಕರ್ತ ರಾಜೇಶ ದೇವರಶೆಟ್ಟಿ ಮತ್ತು ಅಶೋಕ ಇಬ್ಬರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಯಿತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next