Advertisement

Sai Pallavi: ʼರಾಮಾಯಣʼಕ್ಕಾಗಿ ಸಸ್ಯಹಾರಿಯಾದರೆ ಸಾಯಿ ಪಲ್ಲವಿ?: ನಟಿ ಗರಂ ಆಗಿದ್ದೇಕೆ?

01:44 PM Dec 12, 2024 | Team Udayavani |

ಚೆನ್ನೈ: ಸೌತ್‌ ಬೆಡಗಿ ಸಾಯಿ ಪಲ್ಲವಿ (Sai Pallavi) ತನ್ನ ಅಭಿನಯದಿಂದಲೇ ಅಪಾರ ಮಂದಿಯ ಮನಗೆದ್ದವರು. ಕಣ್ಣೋಟದಿಂದಲೇ ಅಭಿನಯ ಮಾಡುವ ಸಾಯಿ ಪಲ್ಲವಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ವೊಂದರ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

Advertisement

ಸಾಯಿ ಪಲ್ಲವಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಿನಿಮಾ ಬಂದಾಗ ತಮ್ಮ ಹಳೆಯ ಹೇಳಿಕೆಗಳಿಂದ ಸುದ್ದಿಯಾಗುತ್ತಾರೆ. ಪ್ರತಿ ಬಾರಿಯೂ ಅವರು ನೀಡಿದ ಕೆಲ ಹಳೆಯ ಹೇಳಿಕೆಗಳಿಂದ ಸೋಶಿಯಲ್‌ ಮೀಡಿಯಾದಲ್ಲಿ ಅವರು ಟ್ರೆಂಡ್‌ ಆಗುತ್ತಾರೆ. ಆದರೆ ಈ ಬಾರಿ ಮಾತ್ರ ಸಾಯಿ ಪಲ್ಲವಿ ಖಡಕ್‌ ಎಚ್ಚರಿಕೆಯನ್ನು ನೀಡಿ ಮೌನ ಮುರಿದಿದ್ದಾರೆ.

ಏನಿದು ವಿಚಾರ?:  ಸಾಯಿ ಪಲ್ಲವಿ ಅವರು ಮೊದಲಿನಿಂದಲೂ ಸಸ್ಯಾಹಾರಿ ಆಗಿದ್ದಾರೆ. ಆದರೆ ತಮಿಳು ಸಿನಿಮಾ ವೆಬ್‌ ಸೈಟ್‌ವೊಂದು ಅವರ ಬಗ್ಗೆ ಸುಳ್ಳು ಸುದ್ದಿಯನ್ನು ಹಬ್ಬಿಸಿದೆ. ʼರಾಮಾಯಣʼ (Ramayana Movie) ಸಿನಿಮಾದಲ್ಲಿ ಸೀತೆಯ ಪಾತ್ರವನ್ನು ಮಾಡುತ್ತಿರುವ ಸಾಯಿ ಪಲ್ಲವಿ ಮಾಂಸಹಾರ ತ್ಯಜಿಸಿ ಸಸ್ಯಹಾರಿ ಆಗಿದ್ದಾರೆ ಎಂದು ತಮಿಳಿನ ಸಿನಿಮಾ ವೆಬ್‌ ಸೈಟ್‌ವೊಂದು ಇತ್ತೀಚೆಗೆ ಪೋಸ್ಟ್‌ ಮಾಡಿದೆ. ಈ ಕುರಿತು ಅನೇಕರು ಕಮೆಂಟ್‌ ಮಾಡಿದ್ದಾರೆ.

Advertisement

ಇದನ್ನು ನೋಡಿರುವ ಸಾಯಿ ಪಲ್ಲವಿ ಈ ಬಗ್ಗೆ ರಿಯಾಕ್ಟ್‌ ಮಾಡಿದ್ದಾರೆ. “ಪ್ರತಿ ಸಲಿ ನನ್ನ ಬಗ್ಗೆ ಆಧಾರರಹಿತ ಸುದ್ದಿ ಹಾಗೂ ರೂಮರ್ಸ್‌ಗಳನ್ನು ಹಬ್ಬಿಸಿದಾಗ ನಾನು ಯಾವುದೇ ರೀತಿ ಅದರ ಬಗ್ಗೆ ರಿಯಾಕ್ಟ್‌ ಮಾಡದೆ ಮೌನವಾಗಿರಲು ಇಷ್ಟಪಡುತ್ತೇನೆ. ಆದರೆ ಇದು ನಿರಂತರವಾಗಿ ನಡೆಯುತ್ತಿದೆ. ನಿಲ್ಲುವ ಲಕ್ಷಣವೇ ಕಾಣುತ್ತಿಲ್ಲ. ನನ್ನ ಸಿನಿಮಾಗಳ ಬಿಡುಗಡೆ ಸಮಯದಲ್ಲಿ ಇಂಥದ್ದು ಹೆಚ್ಚಾಗಿ ಆಗುತ್ತಿರುತ್ತದೆ. ಇನ್ಮುಂದೆ ನಾನು ಈ ಬಗ್ಗೆ ಸುಮ್ಮನೆ ಕೂರುವುದಿಲ್ಲ. ಮುಂದಿನ ಬಾರಿ ಯಾವುದೇ ಪ್ರತಿಷ್ಠಿತ ಮಾಧ್ಯಮ ಅಥವಾ ಪೇಜ್‌ಗಳು ಗಾಸಿಪ್‌ಗಳ ಹೆಸರಿನಲ್ಲಿ ಸುಳ್ಳು ಸುದ್ದಿಗಳನ್ನು ಬರೆದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇನೆ” ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: Allu Arjun: ಕಾಲ್ತುಳಿತ ಪ್ರಕರಣ; FIR ರದ್ದತಿಗೆ ಹೈಕೋರ್ಟ್‌ ಮೆಟ್ಟಿಲೇರಿದ ಅಲ್ಲು ಅರ್ಜುನ್

ನಿತೇಶ್ ತಿವಾರಿ ನಿರ್ದೇಶನದ ಬಿಗ್‌ ಬಜೆಟ್‌ ʼರಾಮಾಯಣʼದಲ್ಲಿ ರಣ್ಬೀರ್‌ ಕಪೂರ್‌ ರಾಮನಾಗಿ ಕಾಣಿಸಿಕೊಳ್ಳಲಿದ್ದಾರೆ. ʼಸೀತೆʼಯಾಗಿ ಸಾಯಿ ಪಲ್ಲವಿ, ʼರಾವಣʼ ಯಶ್‌ ಕಾಣಿಸಿಕೊಳ್ಳಲಿದ್ದಾರೆ. ಸನ್ನಿ ಡಿಯೋಲ್‌ ʼಹನುಮಾನ್‌ʼ ಆಗಿ ಬಣ್ಣ ಹಚ್ಚಲಿದ್ದಾರೆ.

ಯಶ್‌ ʼರಾವಣʼನ ಜತೆ ಸಿನಿಮಾಕ್ಕೆ ಬಂಡವಾಳವನ್ನು ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next