ಪುಣೆ: ಬಂಟ್ಸ್ ಅಸೋಸಿಯೇಶನ್ ಪುಣೆ ಸಮಾಜ ಬಾಂಧವರಿಗಾಗಿ ಆಯೋಜಿಸಿದ ಬಾಕ್ಸ್ ಕ್ರಿಕೆಟ್ ಪಂದ್ಯಾವಳಿಯು ಡಿ. 2ರಂದು ನಗರದ ಕರ್ವೆ ರೋಡ್, ಗರ್ವಾರೆ ಕಾಲೇಜು ಹತ್ತಿರದ ಸೆಂಟ್ರಲ್ ಮಾಲ್‌ನ 5ನೇ ಮಹಡಿಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಸಂಘದ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ ಅವರು ಪಂದ್ಯಾಟವನ್ನು ಉದ್ಘಾಟಿಸಿದರು. ಈ ಪಂದ್ಯಾವಳಿಯಲ್ಲಿ ಸಾಯಿ ಬಿ. ತಂಡ ಹಾಗೂ ಬ್ಯೂಟಿ ದಿ ಬೆಸ್ಟ್ ತಂಡಗಳು ಫೈನಲ್ ಪ್ರವೇಶಿಸಿ ಅಂತಿಮವಾಗಿ ಸಾಯಿ ಬಿ. ತಂಡ ಪ್ರಶಸ್ತಿ ಗಳಿಸಿದರೆ, ಬ್ಯೂಟಿ ದಿ ಬೆಸ್ಟ್ ತಂಡವು ರನ್ನರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಬಾಲಾಜಿ ಸೆವೆನ್ ಎ, ರೈಸಿಂಗ್ ಸ್ಟೈರ್ಕ್, ಬಂಟ್ಸ್ ಅಸೋಸಿಯೇಶನ್ ಯೂತ್, ಸಾಯಿ ಎ., ಬ್ಯೂಟಿ ದಿ ಬೆಸ್ಟ್, ಸಿದ್ಧಿವಿನಾಯಕ್, ಬಂಟ್ಸ್ ಅಸೋಸಿಯೇಶನ್ ಪುಣೆ, ಸಾಯಿ ಬಿ., ಬಾಲಾಜಿ ಸೆವೆನ್ ಬಿ. ಹಾಗೂ ಸ್ಮಾರ್ಶ್ ಸೆವೆನ್ ಸೇರಿದಂತೆ ಒಟ್ಟು ಹತ್ತು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿದ್ದವು.
ಸಂಘದ ಅಧ್ಯಕ್ಷ ನಾರಾಯಣ ಕೆ. ಶೆಟ್ಟಿ, ಪುಣೆ ತುಳು ಕೂಟದ ಅಧ್ಯಕ್ಷ ತಾರಾನಾಥ ಕೆ. ರೈ ಮೇಗಿನಗುತ್ತು, ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ ಕಟ್ಟಿಂಗೇರಿ, ಪ್ರಧಾನ ಕಾರ್ಯದರ್ಶಿ ರೋಹಿತ್ ಶೆಟ್ಟಿ ನಗ್ರಿಗುತ್ತು, ಕೋಶಾಧಿಕಾರಿ ಅರವಿಂದ ರೈ, ಕ್ರೀಡಾ ಕಾರ್ಯಾಧ್ಯಕ್ಷ ಉದಯ್ ಶೆಟ್ಟಿ ಮಾನಂಬಳ್ಳಿ, ಪದಾಧಿಕಾರಿಗಳಾದ ಸತೀಶ್ ಶೆಟ್ಟಿ ಎರವಾಡ, ಲೋಹಿತ್ ಶೆಟ್ಟಿ, ಸುಶ್ಮಿತ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಲ್ಲಿಕಾ ಆನಂದ್ ಶೆಟ್ಟಿ, ಕಾರ್ಯದರ್ಶಿ ಉಷಾ ಯು. ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ದೀಪಾ ಅರವಿಂದ್ ರೈ, ಕೋಶಾಧಿಕಾರಿ ಪುಷ್ಪಾ ಆರ್. ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಪ್ರದೀಪ್ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಸದಸ್ಯರು, ಯುವ ವಿಭಾಗದ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದು ಆಟಗಾರರನ್ನು ಪ್ರೋತ್ಸಾಹಿಸಿದರು. ಸಂತೋಷ್ ಶೆಟ್ಟಿ ಎಣ್ಣೆಹೊಳೆ ಮತ್ತು ಲೋಹಿತ್ ಶೆಟ್ಟಿ ವೀಕ್ಷಕ ವಿವರಣೆಯನ್ನು ನೀಡಿದರು.