Advertisement

ಪ್ರೊ|ಅಮೃತ ಸೋಮೇಶ್ವರ ಸಹಿತ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ

11:05 PM Feb 26, 2021 | Team Udayavani |

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯು 2020ನೇ ಸಾಲಿನ  ವರ್ಷದ  ಪ್ರಶಸ್ತಿಗಳನ್ನು ಪ್ರಕಟಿಸಿದೆ. ಮಂಗಳೂರಿನ ಪ್ರೊ| ಅಮೃತ ಸೋಮೇಶ್ವರ ಸಹಿತ ಐವರಿಗೆ ಗೌರವ ಪ್ರಶಸ್ತಿ ಹಾಗೂ  ಉಡುಪಿಯ ವೀಣಾ ಬನ್ನಂಜೆ, ಉತ್ತರ ಕನ್ನಡ ಜಿಲ್ಲೆಯ ಶಿವಾನಂದ ಕಳವೆ ಸಹಿತ 10 ಮಂದಿಗೆ “ಸಾಹಿತ್ಯ ಶ್ರೀ ಪ್ರಶಸ್ತಿ’ಯನ್ನು ಘೋಷಿಸಲಾಗಿದೆ.

Advertisement

ಕನ್ನಡ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅಕಾಡೆಮಿ ಅಧ್ಯಕ್ಷ ಡಾ| ಬಿ.ವಿ.ವಸಂತಕುಮಾರ್‌ ಈ  ಬಗ್ಗೆ ಮಾಹಿತಿ ನೀಡಿದರು.

ವರ್ಷದ ಗೌರವ ಪ್ರಶಸ್ತಿಯು 50 ಸಾ. ರೂ. ಮತ್ತು ಫ‌ಲಕ ಹಾಗೂ ಸಾಹಿತ್ಯಶ್ರೀ ಪ್ರಶಸ್ತಿ ಮತ್ತು ಪುಸ್ತಕ ಬಹುಮಾನವು  25 ಸಾ. ರೂ. ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ.  ಮಾರ್ಚ್‌ ಅಂತ್ಯದಲ್ಲಿ ರಾಯಚೂರಿನಲ್ಲಿ  ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.

2020ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು :

ಪ್ರೊ| ಅಮೃತ  ಸೋಮೇಶ್ವರ (ಮಂಗಳೂರು), ವಿ| ಷಣ್ಮುಖಯ್ಯ ಅಕ್ಕೂರಮಠ (ಗದಗ), ಡಾ| ಕೆ.ಕೆಂಪೇಗೌಡ (ಚನ್ನಪಟ್ಟಣ), ಡಾ| ಕೆ.ಆರ್‌.ಸಂಧ್ಯಾರೆಡ್ಡಿ (ಚಿತ್ರದುರ್ಗ), ಅಶೋಕಪುರಂ ಕೆ.ಗೋವಿಂದರಾಜು ( ಮೈಸೂರು).

Advertisement

2020ನೇ ಸಾಲಿನ ಸಾಹಿತ್ಯ ಶ್ರೀ ಪುರಸ್ಕೃತರು :

ವೀಣಾ ಬನ್ನಂಜೆ ( ಉಡುಪಿ), ಪ್ರೊ| ಪ್ರೇಮಶೇಖರ್‌ (ಕೊಳ್ಳೆಗಾಲ), ಡಾ| ರಾಜಪ್ಪ ದಳವಾಯಿ (ಚಿಕ್ಕಮಗಳೂರು), ಬಿ.ಟಿ. ಜಾಹ್ನವಿ (ದಾವಣಗೆರೆ), ಪ್ರೊ| ಕಲ್ಯಾಣರಾವ್‌ ಜಿ.ಪಾಟೀಲ್‌ (ಕಲಬುರಗಿ), ಡಾ| ಜೆ.ಪಿ.ದೊಡ್ಡಮನಿ (ಬೆಳಗಾವಿ), ಡಾ| ಮೃತ್ಯುಂಜಯ ರುಮಾಲೆ (ಹೊಸಪೇಟೆ), ಡಿ.ವಿ.ಪ್ರಹ್ಲಾದ್‌ (ಬೆಂಗಳೂರು), ಡಾ| ಎಂ.ಎಸ್‌.ಆಶಾದೇವಿ (ದಾವಣಗೆರೆ), ಶಿವಾನಂದ ಕಳವೆ (ಉತ್ತರ ಕನ್ನಡ).

2019ನೇ ಸಾಲಿನ ವರ್ಷದ ಪುಸ್ತಕ ಬಹುಮಾನ ಪುರಸ್ಕೃತರು :

ಸತ್ಯಮಂಗಲ ಮಹಾದೇವ ( ಕೃತಿ-ಪಂಚವರ್ಣದ ಹಂಸ), ಸಮಿತ್‌ ಮೇತ್ರಿ (ಥಟ್‌ ಅಂತ ಬರೆದುಕೊಡುವ ರಶೀದಿಯಲ್ಲ  ಕವಿತೆ), ವಸುಧೇಂದ್ರ (ತೇಜೋ ತುಂಗಭದ್ರಾ), ಲಕ್ಷ್ಮಣ ಬಾದಾಮಿ (ಒಂದು ಚಿಟಿಕೆ ಮಣ್ಣು), ಉಷಾ ನರಸಿಂಹನ್‌ (ಕಂಚುಗನ್ನಡಿ), ರಘುನಾಥ್‌ ಚ.ಹ. (ಬೆಳ್ಳಿ ತೊರೆ), ಡಿ.ಜಿ.ಮಲ್ಲಿಕಾರ್ಜುನ (ಯೋರ್ದಾನ್‌ ಪಿರೆಮಸ್‌ ), ಬಿ.ಎಂ.ರೋಹಿಣಿ (ನಾಗಂದಿಗೆಯೊಳಗಿಂದ), ಡಾ| ಗುರುಪಾದ ಮರಿಗುದ್ದಿ (ಪೊದೆಯಿಂದಿಳಿದ ಎದೆಯ ಹಕ್ಕಿ), ವಸುಮತಿ ಉಡುಪ (ಅಭಿಜಿತನ ಕತೆಗಳು), ಡಾ| ಕೆ.ಎಸ್‌.ಪವಿತ್ರಾ  (ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು), ಡಾ| ಮಹಾಬಲೇಶ್ವರ ರಾವ್‌ (ಶಿಕ್ಷಣದಲ್ಲಿ ಭಾಷೆ ಮತ್ತು ಮಾಧ್ಯಮ ಸಂಸ್ಥೆಗಳು), ಡಾ| ಚನ್ನಬಸವಯ್ಯ ಹಿರೇಮಠ (ಅನಾವರಣ), ಗೀತಾ ಶೆಣೈ (ಕಾಳಿಗಂಗಾ), ಧರಣೇಂದ್ರ ಕುರಕುರಿ (ಜ್ವಾಲಾಮುಖೀ ಪರ್‌), ಸುಧಾ ಆಡುಕಳ (ಬಕುಲದ ಬಾಗಿಲಿನಿಂದ), ಪ್ರೊ| ಡಿ.ವಿ.ಪರಮಶಿವಮೂರ್ತಿ ಡಿ.ಸಿದ್ದಲಿಂಗಯ್ಯ (ನೊಳಂಬರ ಶಾಸನಗಳು), ಕಪಿಲ ಪಿ.ಹುಮನಾಬಾದೆ (ಹಾಣಾದಿ).

2019ನೇ ಸಾಲಿನ ಅಕಾಡೆಮಿ ದತ್ತಿ ಬಹುಮಾನ ಪುರಸ್ಕೃತರು :

ಅನುಪಮಾ ಪ್ರಸಾದ್‌ ಅವರ  “ಪಕ್ಕಿ ಹಳ್ಳದ ಹಾದಿಗುಂಟ’ ಕೃತಿ – ಚದುರಂಗ ದತ್ತಿ ಬಹುಮಾನ

ನೀತಾ ರಾವ್‌ ಅವರ  “ಹತ್ತನೇ ಕ್ಲಾಸಿನ ಹುಡುಗಿ’ ಕೃತಿ- ವಿ.ಸೀತಾರಾಮಯ್ಯ ಸೋದರಿ ಇಂದಿರಾ ದತ್ತಿ ಬಹುಮಾನ. ಡಾ| ಬಿ.ಪ್ರಭಾಕರ ಶಿಶಿಲ ಅವರ  “ಬೊಗಸೆ ತುಂಬಾ ಕನಸು’ ಕೃತಿ- ಸಿಂಪಿ ಲಿಂಗಣ್ಣ ದತ್ತಿ ನಿಧಿ ಬಹುಮಾನ. ಡಾ| ಎಂ.ಉಷಾ ಅವರ  “ಕನ್ನಡ ಮ್ಯಾಕ್‌ ಬೆತ್‌ಗಳು’ ಕೃತಿ- ಪಿ.ಶ್ರೀನಿವಾಸರಾವ್‌ ದತ್ತಿ ನಿಧಿ ಬಹುಮಾನ. ಜಿ.ಎನ್‌.ರಂಗನಾಥ್‌ ರಾವ್‌ ಅವರ  “ಶ್ರೀ ಮಹಾಭಾರತ ಸಂಪುಟ 1,2,3 ಮತ್ತು 4’ಕೃತಿ- ಎಲ್‌.ಗುಂಡಪ್ಪ ಮತ್ತು ಶಾರದಮ್ಮ ದತ್ತಿ ನಿಧಿ ಬಹುಮಾನ.  ಭಾಗ್ಯಜ್ಯೋತಿ ಹಿರೇಮಠ ಅವರ  “ಪಾದಗಂಧ’ ಕೃತಿ -ಮಧುರಚೆನ್ನ ದತ್ತಿನಿಧಿ ಬಹುಮಾನ. ಪ್ರಮೋದ್‌ ಮುತಾಲಿಕ್‌ ಅವರ  “ಬಿಯೋಂಡ್‌ ಲೈಫ್’ ಕೃತಿ- ಅಮೆರಿಕ ಕನ್ನಡ ದತ್ತಿನಿಧಿ ಬಹುಮಾನ. ಮಲ್ಲಿಕಾರ್ಜುನ ಕಡಕೋಳ ಅವರ  “ಯಡ್ರಾಮಿ ಸೀಮೆ ಕಥನಗಳು’ ಕೃತಿ - ಬಿ.ವಿ.ವೀರಭದ್ರಪ್ಪ ದತ್ತಿ ನಿಧಿ. ಲಕ್ಷ್ಮೀಕಾಂತ ಪಾಟೀಲ್‌ ಅವರ ಶ್ರೀ ಪ್ರಸನ್ನ ವೆಂಕಟದಾಸರ್ಯಕೃತ ಶ್ರೀಲಕ್ಷ್ಮೀ ದೇವಿ ಅಪ್ರಕಟಿತ ಸ್ತುತಿರತ್ನಗಳು ಕೃತಿ- ಶ್ರೀಮತಿ ಜಲಜಾ ಶ್ರೀಪತಿ ಆಚಾರ್ಯ ಗಂಗೂರ್‌ ದತ್ತಿ ನಿಧಿ ಬಹುಮಾನ.

Advertisement

Udayavani is now on Telegram. Click here to join our channel and stay updated with the latest news.

Next