Advertisement

ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ : ಜನಪದ ವಿದ್ವಾಂಸ ಅಮೃತ ಸೋಮೇಶ್ವರ

01:09 AM Feb 27, 2021 | Team Udayavani |

ಉಳ್ಳಾಲ: ಹಿರಿಯ ಸಾಹಿತಿ, ಜನಪದ ವಿದ್ವಾಂಸ ಅಮೃತ ಸೋಮೇಶ್ವರ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಲಭಿಸಿದೆ.

Advertisement

ಸೋಮೇಶ್ವರ ನಿವಾಸಿಯಾಗಿ ರುವ 85ರ ಹರೆಯ ಅಮೃತ ಸೋಮೇಶ್ವರ ಅವರು ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ ಕನ್ನಡ ಪ್ರಾಧ್ಯಾಪಕರಾಗಿ ಸುಮಾರು 35 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.  ಕನ್ನಡ ಮತ್ತು ತುಳು – ಎರಡೂ ಭಾಷೆಗಳಲ್ಲಿ ವೈವಿಧ್ಯಮಯ ಹಾಗೂ ವಿಸ್ತೃತವಾದ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ. ಯಕ್ಷಗಾನದ ಬಗ್ಗೆ ವ್ಯಾಪಕ ಸಂಶೋಧನೆ, ಅಧ್ಯಯನ, ಆವಿಷ್ಕಾರ, ಕೃತಿರಚನೆ ಅವರ ಇನ್ನೊಂದು ಪ್ರಮುಖ ಕಾರ್ಯಕ್ಷೇತ್ರ. ತುಳು

ಭಾಷೆ ಹಾಗೂ ಜಾನಪದದ ಬಗ್ಗೆ ಸಂಶೋಧನೆ ಅವರ ಮತ್ತೂಂದು  ಕ್ಷೇತ್ರ. ಇಷ್ಟಲ್ಲದೆ ಸಾಮಾಜಿಕ, ಸಾಂಸ್ಕೃತಿಕ ವಿಚಾರಗಳ ಬಗ್ಗೆ ಜನಜಾಗೃತಿಯ ನೆಲೆಯಲ್ಲಿ ಅವರು ನಿರಂತರ ಸ್ಪಂದಿಸುತ್ತಲೇ ಬಂದಿದ್ದಾರೆ.

ಭಗವತೀ ಆರಾಧನೆ ಎಂಬ ಅವರ ಕೃತಿ ಒಂದು ಮಹತ್ವದ ಕೃತಿಯಾಗಿದ್ದು ಅದರಲ್ಲಿ ಕರಾವಳಿ  ಕರ್ನಾಟಕ ಹಾಗೂ ಕೇರಳದಲ್ಲಿ ಆರಾಧಿಸಲ್ಪಡುವ ಭಗವತಿ, ಚಾಮುಂಡಿ, ಇತ್ಯಾದಿ ವಿವಿಧ ದೆ„ವಗಳಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಿ ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next