ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಉಚಿತವಾಗಿ ವಿತರಿಸುತ್ತಿರುವ ಆಹಾರ, ದಿನಸಿ ಕಿಟ್ ಹಾಗೂ ಔಷಧಿಗಳನ್ನು ಅರ್ಹರಿಗೆ ತಲುಪಿಸುವ ನಿಟ್ಟಿನಲ್ಲಿ “ಸಹಾಯ ಸೇತುವೆ’ ಆ್ಯಪ್ ಬಿಡುಗಡೆ ಮಾಡಲಾಯಿತು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಆ್ಯಪ್ ಬಿಡುಗಡೆ ಮಾಡಿದ ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ಆಯಾ ಪ್ರದೇಶಗಳ ಬಗ್ಗೆ ಮಾಹಿತಿಯನ್ನು ಆ್ಯಪ್‌ಗೆ ಅಪ್‌ಲೋಡ್ ಮಾಡಲಾಗಿದೆ. ಸ್ವಯಂ ಸೇವಾ ಸಂಸ್ಥೆಗಳು ತಾವು ಆಹಾರ, ದಿನಸಿ, ಔಷಧಿ ಪೂರೈಕೆ ಬಗ್ಗೆ ಇಲ್ಲಿ ಮಾಹಿತಿ ಪಡೆದು ಹಂಚಿಕೆ ಮಾಡಬಹುದು ಎಂದರು.
ಲಾಕ್‌ಡೌನ್ ಮೇ.3ರವರೆಗೆ ಇರುವುದರಿಂದ ದಕ್ಷಿಣ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ಅಗತ್ಯ ವಸ್ತುಗಳ ಹೋಮ್ ಡೆಲಿವರಿ ನೀಡುವ ಸಹಾಯವಾಣಿ ಸೇವೆಯನ್ನು ಬಿಬಿಎಂಪಿಯ ಎಲ್ಲ ವಲಯಗಳಿಗೆ ಇನ್ನು 3 ದಿನಗಳ ಒಳಗಾಗಿ ವಿಸ್ತರಿಸಲಾಗುವುದು ಎಂದರು.
3 ಹಂತದಲ್ಲಿ ಆ್ಯಪ್ ಕಾರ್ಯಾಚರಣೆ :
Related Articles
1 ಸಹಾಯ ಸೇತುವೆ ಆಪ್ ಮೂಲಕ ನಾಗರಿಕರು, ಸಂಘ ಸಂಸ್ಥೆ ದೇಣಿಗೆ ನೀಡಬಹುದು
2 ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುವವರು ತಮ್ಮ ಸಂಪೂರ್ಣ ವಿವರ ನೀಡಬಹುದು.
3 ಬಿಬಿಎಂಪಿ ಇಂದಿರಾ ಕ್ಯಾಂಟೀನ್, ಫೀವರ್ ಕ್ಲಿನಿಕ್ ವಿಳಾಸ ನೀಡಲಿದೆ. ಕೊರೊನಾ ವಿರುದ್ಧ ಕಾರ್ಯನಿರ್ವಹಿಸುತ್ತಿರುವ ಬಿಬಿಎಂಪಿ ಅಧಿಕಾರಿಗಳು, ಸಂಘ ಸಂಸ್ಥೆಗಳ ವಿವರ
ಸಹಾಯ ಸೇತುವೆ ಡೌನ್ ಲೋಡ್ ಲಿಂಕ್:
https://play.google.com/store/apps/details?id=in.bbmpgov.covid.er