Advertisement

ಪಳ್ಳಿ ಅಡಪಾಡಿಯಲ್ಲಿ ಸಹಸ್ರ ಚಂಡಿಕಾ ಯಾಗ, ಬ್ರಹ್ಮಕಲಶಾಭಿಷೇಕ

08:06 PM Mar 27, 2023 | Team Udayavani |

ಬೆಳ್ಮಣ್‌: ಕಾರ್ಕಳ ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಪಳ್ಳಿ ಅಡಪಾಡಿ ಶ್ರೀ ಉಮಾಮಹೇಶ್ವರ , ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಕ್ಷೇತ್ರದ ವಾಯುವ್ಯ ಭಾಗದ ಪುರಾತನ ಆಲಡೆ ಸಾನ್ನಿಧ್ಯಗಳ ಪುನ: ಪ್ರತಿಷ್ಠಾಪನಾಂಗ ಬ್ರಹ್ಮ ಕಲಶೋತ್ಸವಾಂಗ ಸಹಸ್ರ ಚಂಡಿಕಾ ಮಹಾಯಾಗ ಸೋಮವಾರ ನಡೆಯಿತು.

Advertisement

ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠಾಧೀಶ ಶ್ರೀಮದ್‌ ಗುರು ಶಿವಾನಂದ ಸರಸ್ವತೀ ಸ್ವಾಮೀಜಿಯವರ ಉಪಸ್ಥಿತಿ ಹಾಗೂ ಶುಭ ಆಶೀರ್ವಾದಗಳೊಂದಿಗೆ ವೇದಮೂರ್ತಿ ಶ್ರೀಮೃಗೇಶ್‌ ಭಟ್‌ ಲಕ್ಷ್ಮೀ ಪುರ ಹಿರ್ಗಾನ ಹಾಗೂ ವೇದಮೂರ್ತಿ ಶ್ರೀ ದಯಾನಂದ್‌ ಭಟ್‌ ಕಲ್ಲಡ್ಕ ಇವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಅನುಷ್ಠಾನಗಳು, ಕ್ಷೇತ್ರದ ಧರ್ಮದರ್ಶಿ ಪುಂಡಲೀಕ ನಾಯಕ್‌ರವರ ಧರ್ಮದರ್ಶಿತ್ವದಲ್ಲಿ ವಿವಿಧ ಕಾರ್ಯಕ್ರಮಗಳು ನಡೆದವು.

ಸಹಸ್ರ ಚಂಡಿಕಾಹವನ ಪ್ರಾರಂಭಗೊಳ್ಳಲಿದ್ದು, ಸಹಸ್ರ ಚಂಡಿಕಾ ಹೋಮದ ಪೂರ್ಣಾಹುತಿ, ಶ್ರೀ ದೇವರ ಉಭಯ ಸಾನಿಧ್ಯದಲ್ಲಿ ಅಧಿವಾಸಿತಾ ದೇವತಾ ಪೂಜೆ , ಪಂಚಾಮೃತ ದ್ರವ್ಯ ಕಲಶಾಭಿಷೇಕ,  ಮಧ್ಯಾಹ್ನ ಶ್ರೀ ಉಮಾಮಹೇಶ್ವರ ದೇವರಿಗೆ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಬ್ರಹ್ಮಕಲಶಾಭಿಶೇಕ ನಡೆಯಿತು. ಉತ್ತರಾನ್ಯಾಸ, ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ನಡೆದು ಭಾರೀ ಸಂಖ್ಯೆಯ ಭಕ್ತರು ಮಹಾ ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡರು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಧ್ಯಾಹ್ನ ತವಿಲ್‌ ವಿದ್ವಾನ್‌ ಕರ್ನಾಟಕ ಕಲಾರತ್ನ ಧರ್ಮಸ್ಥಳ ಡಿ.ಕೆ.ಸುರೇಶ್‌ ಬಳಗದವರಿಂದ ವಾದ್ಯ ವೈಭವ ನಡೆಯತು.

Advertisement

Udayavani is now on Telegram. Click here to join our channel and stay updated with the latest news.

Next