ಕಿನ್ನಿಗೋಳಿ : ಐಕಳದಲ್ಲಿ ನಡೆಯುವ ಕಂಬಳ ಜಾನಪದ ಹಾಗೂ ಧಾರ್ಮಿಕ ಐತಿಹ್ಯದ ಕಂಬಳವಾಗಿದ್ದು ಗ್ರಾಮ ಹಬ್ಬವಾಗಿದೆ. ಐಕಳ ಕಾಂತಾಬಾರೆ – ಬೂದಾಬಾರೆ ಅಂದರೆ ಐಕಳ ಗ್ರಾಮಕ್ಕೆ ಮಾತ್ರವಲ್ಲ ಅದು ಊರಿಗೆ ಸಂಭ್ರಮ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಹೇಳಿದರು.
ಕಂಬಳದ ಸಭಾ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿ, ಐಕಳ ಬಾವ ದೇವಿಪ್ರಸಾದ್ ಶೆಟ್ಟಿಯವರು ಅಧ್ಯಕ್ಷರಾದ ಅನಂತರ ಈ ಕಂಬಳಕ್ಕೆ ಹೊಸ ರೂಪು ಸಿಕ್ಕಿದೆ. ಕಂಬಳದ ಮೂಲಕ ತುಳುನಾಡಿನ ಕೀರ್ತಿ ಹರಡಲಿ, ಸರಕಾರದಿಂದ ಕೂಡ ಕಂಬಳಕ್ಕೆ ಸಹಕಾರ ನೀಡುವಂತಾಗಲಿ ಎಂದರು.
ಸಹಕಾರಿ ಸಾರಥಿ ಪುರಸ್ಕಾರ
ಈ ಸಂದರ್ಭ ಕಂಬಳಾಭಿಮಾನಿಗಳ ಪರವಾಗಿ ಡಾ| ಎಂ. ಎನ್. ರಾಜೇಂದ್ರ ಕುಮಾರ್ ಅವರಿಗೆ ಸಹಕಾರಿ ಸಾರಥಿ ಬಿರುದು ನೀಡಿ ಗೌರವಿಸಲಾಯಿತು. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಅದಾನಿ ಫೌಂಡೇಶನ್‌ನ ಅಧ್ಯಕ್ಷ ಕಿಶೋರ್ ಅಳ್ವ, ಉದ್ಯಮಿ ರೋಹನ್ ಮೊಂತೆರೋ, ಡಾ| ಟಿ. ರಮಾನಾಥ ಶೆಟ್ಟಿ, ಐಕಳ ಬಾವ ಕುಟುಂಬದ ಹಿರಿಯರಾದ ಶಾಂಭವಿ ಶಂಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕ ವಿನಯ ಕುಮಾರ್ ಸೊರಕೆ, ಮೊದಿನ್ ಬಾವ, ನಾಗರಾಜ ಶೆಟ್ಟಿ, ಐವಾನ್ ಡಿ’ಸೋಜಾ, ಸಹ ಕಾರಿ ಮಾರಾಟ ಮಂಡಲದ ನಿರ್ದೇಶಕ ಪುಟ್ಟಸ್ವಾಮಿ ಗೌಡ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಮಟ್ಟಾರು ರತ್ನಾಕರ ಹೆಗ್ಡೆ, ವಿನಯ ಕುಮಾರ್ ಸೂರಿಂಜೆ, ಜಯಕರ ಶೆಟ್ಟಿ ಇಂದ್ರಾಳಿ, ಸಿದ್ದಿಕ್, ಶಶಿಕುಮಾರ್ ರೈ, ಸುಚರಿತ ಶೆಟ್ಟಿ, ಸಾಂತೂರು ಬಾಸ್ಕರ ಶೆಟ್ಟಿ, ಯಶಪಾಲ್ ಸುವರ್ಣ, ಕುಶಲ ಭಂಡಾರಿ ಐಕಳ, ಪ್ರಕಾಶ್ ಶೆಟ್ಟಿ ಪಡುಹಿತ್ಲು ಉಪಸ್ಥಿತರಿದ್ದರು.
Related Articles
ಕಂಬಳ ಸಮಿತಿಯ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಐಕಳ ಬಾವ ಸ್ವಾಗತಿಸಿದರು, ಸಾಯಿನಾಥ ಶೆಟ್ಟಿ ಮತ್ತು ನವೀನ್ ಎಡೆ¾ಮಾರ್ ನಿರೂಪಿಸಿದರು. ಚಿತ್ತರಂಜನ್ ಭಂಡಾರಿ ವಂದಿಸಿದರು.
ನಾಡಹಬ್ಬವಾಗಿ ಕಂಬಳ
ಕಂಬಳ ಬಗ್ಗೆ ಈ ಹಿಂದೆ ಕೇಳಿದ್ದೇನೆ. ಮೂಡುಬಿದಿರೆಯಲ್ಲಿ ಪ್ರಥಮ ಬಾರಿಗೆ ಕಂಬಳ ನೋಡಿದ್ದು ಇದೀಗ ಐಕಳ ಕಂಬಳಕ್ಕೆ ಬಂದಿದ್ದೇನೆ. ಕಂಬಳದ ಬಗ್ಗೆ ಇಲ್ಲಿನ ಜನರು ತೋರಿಸುವ ಒಲವು ವಿಶೇಷವಾಗಿದೆ. ಇದನ್ನು ನಾಡ ಹಬ್ಬವಾಗಿ ಆಚರಿಸುವಂತಾಗಲಿ ಎಂದು ದ.ಕ. ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು.