Advertisement

ಸಾಗರ: ಅಪ್ರಚೋದಿತ ಗೂಳಿ ದಾಳಿ; ಅದೃಷ್ಟವಶಾತ್ ಪುಟ್ಟ ಬಾಲಕ ಪಾರು

04:13 PM Apr 03, 2023 | Vishnudas Patil |

ಸಾಗರ: ದಾರಿಯಲ್ಲಿ ಹೋಗುತ್ತಿದ್ದ ಗೂಳಿ ಅಪ್ರಚೋದಿತವಾಗಿ ರಸ್ತೆಯ ಪಕ್ಕದಲ್ಲಿ ನಿಂತಿದ್ದ ಪುಟ್ಟ ಬಾಲಕನ ಮೇಲೆ ದಾಳಿ ನಡೆಸಿ, ಆತನನ್ನು ಕ್ಷಣ ಮಾತ್ರದಲ್ಲಿ ಕೊಂಬುಗಳಿಂದ ಎತ್ತಿ ಬಿಸಾಕಿದ ಘಟನೆ ಇಲ್ಲಿನ ನೆಹರೂ ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಪವಾಡಸದೃಶವಾಗಿ ಹೆಚ್ಚಿನ ಅಪಾಯವಿಲ್ಲದೆ ಸ್ಥಳೀಯ 6 ವರ್ಷದ ನಜಾನ್ ಆಲಿಖಾನ್ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಬಾಲಕರಿಬ್ಬರು ವೃತ್ತಾಕಾರವಾಗಿ ಸೈಕಲ್ ಹೊಡೆಯುವ ಆಟವನ್ನು ನೋಡುವುದಕ್ಕಾಗಿ ಇನ್ನೊಬ್ಬ ಪುಟಾಣಿ ರಸ್ತೆಗೆ ಆಗಮಿಸಿ ಚರಂಡಿ ಪಕ್ಕದಲ್ಲಿ ನಿಲ್ಲುತ್ತಾನೆ. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಗೂಳಿ ಏಕಾಏಕಿ ಬಾಲಕನ ಬಳಿ ತೆರಳಿ ಕೊಂಬುಗಳಿಂದ ಎತ್ತಿ ರಸ್ತೆಗೆ ಬಿಸುಟಿದೆ.

ಈ ಅಚಾನಕ್ ದಾಳಿಯಿಂದ ಗಾಬರಿಗೊಳಗಾದ ಬಾಲಕನನ್ನು ಸೈಕಲ್ ಆಡುತ್ತಿದ್ದ ಹುಡುಗರು ಸಂತೈಸಿದ್ದಾರೆ. ಆಟವಾಡುತ್ತಿದ್ದ ಹುಡುಗರು ಹೆದರಿಸುತ್ತಿದ್ದಂತೆ ಗೂಳಿ ಜಾಗ ಖಾಲಿಮಾಡಿದೆ. ಬಾಲಕನ ತಲೆ ಮತ್ತು ಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಎಲ್ಲ ದೃಶ್ಯಗಳು ಸಿಸಿ ಟಿವಿಯಲ್ಲಿ ದಾಖಲಾಗಿದ್ದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅದೃಷ್ಟವಶಾತ್ ದೊಡ್ಡ ಹಾನಿ ಸಂಭವಿಸಿಲ್ಲ. ಆಕ್ರಮಣಕಾರಿ ಗೂಳಿ ಮತ್ತೆ ಮತ್ತೆ ದಾಳಿ ಮಾಡುವ ಸಾಧ್ಯತೆ ಇದ್ದು, ಬೀಡಾಡಿ ಗೂಳಿಯನ್ನು ಪತ್ತೆ ಹಚ್ಚಿ ಸರ್ಕಾರಿ ಗೋಶಾಲೆಗೆ ಅಟ್ಟುವ ಕೆಲಸವನ್ನು ನಗರಸಭೆ ಮಾಡಬೇಕು ಎಂದು ನೆಹರೂ ನಗರದ ನಿವಾಸಿಗಳು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next