Advertisement

ಸಿಗಂದೂರು ಚೌಡೇಶ್ವರಿ ಜಾತ್ರೆಗೆ ಚಾಲನೆ

04:37 PM Jan 15, 2020 | Naveen |

ಸಾಗರ: ತಾಲೂಕಿನ ಸಿಗಂದೂರು ಕ್ಷೇತ್ರದ ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ಇಲ್ಲಿನ ಪ್ರಧಾನ ಅರ್ಚಕ ಶೇಷಗಿರಿ ಭಟ್‌ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

Advertisement

ಸಾಗರ ಕ್ಷೇತ್ರದ ಶಾಸಕ ಎಚ್‌. ಹಾಲಪ್ಪ ಕುಟುಂಬ ಸಮೇತ ವಿವಿಧ ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗಿಯಾದರು. ಚೌಡೇಶ್ವರಿಯ ಮೂಲ ಸ್ಥಾನವಾದ ಸೀಗೇಕಣಿವೆಯಲ್ಲಿ ಬೆಳಗ್ಗೆ 7 ಗಂಟೆಗೆ ಪ್ರಥಮ ಪೂಜೆ ನಡೆಯಿತು. ಕುಂಭ ಕಳಸ ಹೊತ್ತ ಮಹಿಳೆಯರನ್ನು ಒಳಗೊಂಡ ವೈವಿಧ್ಯಮಯ ಕಲಾ ತಂಡಗಳೊಂದಿಗೆ ಜ್ಯೋತಿ ರೂಪದಲ್ಲಿ ಆಗಮಿಸಿದ ದೇವಿಯ ಮೆರವಣಿಗೆಯನ್ನು ಕ್ಷೇತ್ರದಲ್ಲಿ ಬರಮಾಡಿಕೊಳ್ಳಲಾಯಿತು. ದೇವಿಗೆ ವಿಶೇಷ ಹೂವಿನ ಹಾಗೂ ಆಭರಣ ಅಲಂಕಾರ ಮಾಡಲಾಗಿತ್ತು. ಹಲವು ಪೂಜೆಗಳು, ಚಂಡಿಕಾ ಹೋಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅನ್ನ ದಾಸೋಹ ನಡೆಸಲಾಯಿತು.

ಸಂಜೆ 5.30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10.30ಕ್ಕೆ ಸಿಗಂದೂರು ಮೇಳದವರಿಂದ ಯಕ್ಷಗಾನ ಪ್ರದರ್ಶನ ನಡೆಯಿತು. ಸಿಗಂದೂರು ರಾಮಪ್ಪ ದಂಪತಿ, ಸಾಗರ ನಗರಸಭಾ ಸದಸ್ಯೆ ಮೈತ್ರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next