ಸಾಗರ: ತಾಲೂಕಿನ ಪಡವಗೋಡು ಗ್ರಾಪಂವ್ಯಾಪ್ತಿಯ ಬೆಳ್ಳಿಕೊಪ್ಪ ಗ್ರಾಮದ ಎಂಎಸ್‌ಐಎಲ್ ಮದ್ಯದಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ಶನಿವಾರ ಬೆಳ್ಳಿಕೊಪ್ಪ ಗ್ರಾಮಸುಧಾರಣಾ ಸಮಿತಿ ಮತ್ತು ವಿವಿಧ ಸ್ತ್ರೀಶಕ್ತಿಸಂಘಗಳ ಆಶ್ರಯದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಹಲವು ದಿನಗಳಿಂದಗ್ರಾಮಸ್ಥರು ನಡೆಸುತ್ತಿರುವ ಹೋರಾಟದಿಂದಆಡಳಿತ ಎಚ್ಚೆತ್ತುಕೊಳ್ಳದೆ ಇರುವುದುವಿಪರ್ಯಾಸದ ಸಂಗತಿ.ಕಳೆದ ಎಂಟತ್ತು ದಿನಗಳಿಂದ ಬೆಳ್ಳಿಕೊಪ್ಪಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ತೆರೆದಿರುವಮದ್ಯದಂಗಡಿಯನ್ನು ಮುಚ್ಚುವಂತೆಒತ್ತಾಯಿಸಿ ವಿವಿಧ ರೀತಿಯ ಪ್ರತಿಭಟನೆ ನಡೆಸುತ್ತಿದ್ದಾರೆ.
ಮದ್ಯದಂಗಡಿ ಮುಚ್ಚುವವರೆಗೂ ತಮ್ಮ ಹೆಣ್ಣುಮಕಳನ್ನು ಶಾಲೆಗೆಕಳಿಸುವುದಿಲ್ಲ ಎಂದು ಗ್ರಾಮಸ್ಥರು ಪಟ್ಟುಹಿಡಿದಿದ್ದಾರೆ. ಜೊತೆಗೆ ಶನಿವಾರ ಗ್ರಾಮಸ್ಥರುತಮ್ಮ ಗ್ರಾಮದಲ್ಲಿರುವ ಮದ್ಯದಂಗಡಿಮುಚ್ಚುವವರೆಗೂ ತಾವು ಕೋವಿಡ್‌ಪ್ರತಿಬಂಧಕ ಎರಡನೇ ಡೋಸ್ ಲಸಿಕೆತೆಗೆದುಕೊಳ್ಳುವುದಿಲ್ಲ ಎಂದು ಘೋಷಣೆಮಾಡಿದ್ದಾರೆ.
ಶನಿವಾರ ಪ್ರತಿಭಟನಾ ಸ್ಥಳಕ್ಕೆ ಮಾಜಿಸಚಿವ ಕಾಗೋಡು ತಿಮ್ಮಪ್ಪ ಭೇಟಿ ನೀಡಿಹೋರಾಟವನ್ನು ಬೆಂಬಲಿಸಿ ಮಾತನಾಡಿ,ಗ್ರಾಮಸ್ಥರ ಹೋರಾಟ ನ್ಯಾಯ ಸಮ್ಮತವಾಗಿದೆ.ಮದ್ಯದಂಗಡಿ ಬೇಡ ಎಂದು ಗ್ರಾಮಸ್ಥರುನಡೆಸುತ್ತಿರುವ ಹೋರಾಟದ ಮಹತ್ವವನ್ನುಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು.ತಕ್ಷಣ ತೆರೆದಿರುವ ಮದ್ಯದಂಗಡಿಯನ್ನುಮುಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕು.
ಒಂದೊಮ್ಮೆ ಆಡಳಿತ ಸ್ಪಂದಿಸದೆಹೋದಲ್ಲಿ ಉಪವಿಭಾಗಾಧಿಕಾರಿಗಳ ಕಚೇರಿಎದುರು ನಡೆಯುವ ಹೋರಾಟದಲ್ಲಿ ತಾವುಸಹ ಪಾಲ್ಗೊಳ್ಳುವ ಭರವಸೆ ನೀಡಿದರು.ಬ್ಲಾಕ್‌ಕಾಂಗ್ರೆಸ್‌ಅಧ್ಯಕ್ಷಬಿ.ಆರ್.ಜಯಂತ್‌ಮಾತನಾಡಿ, ಶಾಸಕರು ಸರ್ವಾಧಿಕಾರಿಯಂತೆವರ್ತಿಸಬಾರದು. ಗ್ರಾಮಸ್ಥರೇ ತಮ್ಮೂರಿಗೆಮದ್ಯದಂಗಡಿ ಬೇಡ ಎಂದು ಹಲವುದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಅದಕ್ಕೆ ಶಾಸಕರು ಕಿವಿಗೊಡುತ್ತಿಲ್ಲ ಎನ್ನುವುದು ಬೇಸರದ ಸಂಗತಿ.