ಸಾಗರ : ಯಾವುದೊ ಕಾರಣಕ್ಕೆ ತಂದೆ ಬೆದರಿಸಿದ್ದಾರೆ ಎಂದು ಮನನೊಂದ ಯುವಕ ನೂರು ವರ್ಷ ಹಳೆಯದಾದ ಭಾರಿ ಗಾತ್ರದ ಮರವನ್ನು ಏರಿದ್ದಾನೆ, ಏರಿದವನಿಗೆ ಎತ್ತರದಿಂದ ಕೆಳಗೆ ನೋಡಿದ ವೇಳೆ ಭಯ ಉಂಟಾಗಿದೆ ಕಾರಣ ಕೆಳಗೆ ಇಳಿಯಲು ಆಗದೆ ತೊಂದರೆ ಅನುಭವಿಸಿ, ಕೊನೆಗೆ ಅಗ್ನಿಶಾಮಕ ಸಿಬಂದಿಗಳನ್ನು ಕರೆಸಿದ ವಿಲಕ್ಷಣ ಘಟನೆ ನಡೆಯಿತು.
ಸಾಗರದ ಮೀನು ಮಾರುಕಟ್ಟೆ ಹಿಂಭಾಗದ ಉಪ್ಪಾರಕೇರಿ ಹತ್ತಿರ ಫಯಾಜ್(21) ತನ್ನ ತಂದೆ ಬೈದರೆಂದು ಮನನೊಂದು ಮೀನು ಮಾರುಕಟ್ಟೆ ಬಳಿ ಇರುವ ಬಿಲಕಂಬಿ ಮರವನ್ನು ಏರಿ ಸುಮಾರು 80 ಅಡಿ ಎತ್ತರ ಮುಟ್ಟಿದ್ದಾನೆ. ಆನಂತರ ಕೆಳಗೆ ನೋಡಿದವನಿಗೆ ನಡುಕ ಶುರುವಾಗಿದೆ.
ಅಪ್ಪನನ್ನು ವಿರೋಧಿಸಲು ಹೊರಟವ ಸಹಾಯಕ್ಕಾಗಿ ಅಂಗಲಾಚುವಂತಾಗಿದೆ. ಹೀಗಾಗಿ ಸ್ಥಳಕ್ಕೆ ಆಗಮಿಸಿದ ಸಾಗರ ಅಗ್ನಿಶಾಮಕ ದಳ ಸಿಬ್ಬಂದಿ ಏಣಿ ಹಾಗೂ ಹಗ್ಗದ ಸಹಾಯದಿಂದ ಯುವಕನನ್ನು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರ್ಯಾಚರಣೆಯಲ್ಲಿ ಎಂ.ನಂದನ್ ಕುಮಾರ್, ಪ್ರಕಾಶ್, ಶಿವಕುಮಾರ್, ಪ್ರಶಾಂತ್ ಹಾಜರಿದ್ದರು.
ಇದನ್ನೂ ಓದಿ : ಗಣಿಗಾರಿಕೆಯ ಹೆಸರಿನಲ್ಲಿ ನಿಸರ್ಗದ ಒಡಲಿಗೆ ಕೊಡಲಿ ಪೆಟ್ಟು : ಅಧಿಕಾರಿಗಳ ವಿರುದ್ದ ಆಕ್ರೋಶ