ಸಾಗರ: ಶ್ರದ್ಧಾ-ಭಕ್ತಿಯಿಂದ ಭಗವಂತನನ್ನುಪ್ರಾರ್ಥನೆ ಮಾಡಿದರೆ ನಮ್ಮ ಇಷ್ಟಾರ್ಥ ಈಡೇರುತ್ತದೆಎಂದು ಖ್ಯಾತ ಜ್ಯೋತಿಷಿಗಳು ಹಾಗೂ ಪುರೋಹಿತರಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿಡಾ|ಭಾನುಪ್ರಕಾಶ್ ಶರ್ಮ ತಿಳಿಸಿದರು.ಇಲ್ಲಿನ ಗೌತಮ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ವಿಪ್ರ ವೈದಿಕ ಪರಿಷತ್, ವಿಪ್ರ ನೌಕರರಸಂಘ, ಜೋಶಿ ಫೌಂಡೇಶನ್ ನೀಡಿದ ಸನ್ಮಾನಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ನಾವು ಮಾಡುವ ಧರ್ಮ ಕಾರ್ಯಗಳು ಸದಾನಮ್ಮನ್ನು ಕಾಪಾಡುತ್ತವೆ. ಮನುಷ್ಯ ಜೀವನದಲ್ಲಿಪರಿಸರಕ್ಕೆ ಪೂರಕವಾದ ಕೆಲಸ ಮಾಡಬೇಕು.ದುಡ್ಡಿದ್ದವರು ಸ್ವಲ್ಪ ಪ್ರಮಾಣದಲ್ಲಿ ದಾನ ಮಾಡುವಮೂಲಕ ನೊಂದವರ ನೆರವಿಗೆ ನಿಲ್ಲಬೇಕು.ದೇವಸ್ಥಾನ ಜೀಣೊìàದ್ಧಾರ, ದೇವಸ್ಥಾನನಿರ್ಮಾಣ, ಸಾಲುಮರಗಳನ್ನು ನೆಡುವುದು ಸೇರಿದಂತೆ ವಿವಿಧ ಸಾರ್ಥಕ ಕೆಲಸಗಳನ್ನುಮನುಷ್ಯ ಮಾಡಬೇಕು.
ಧರ್ಮ ಕಾರ್ಯಕ್ಕೆವಿನಿಯೋಗ ಮಾಡಿದ ಹಣ ಯಾವತ್ತೂಸಾರ್ಥಕತೆಯತ್ತ ಕರೆದೊಯ್ಯುತ್ತದೆ ಎಂದುತಿಳಿಸಿದರು.ಅಖೀಲ ಕರ್ನಾಟಕ ಬ್ರಾಹ್ಮಣ ಮಹಾಸಭಾದಪ್ರಧಾನ ವಕ್ತಾರ ಮ.ಸ.ನಂಜುಂಡಸ್ವಾಮಿಮಾತನಾಡಿ, ಸಮಾಜ ನಿರ್ಮಾಣ ಕಾರ್ಯದಲ್ಲಿಇಂತಹ ಶ್ರೇಷ್ಠರ ಮಾರ್ಗದರ್ಶನ ಅತ್ಯಗತ್ಯ.ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿಜಿ.ಪರಮೇಶ್ವರಪ್ಪ ಸದಸ್ಯರ ಹಿತ ಕಾಯುವ ಜೊತೆಗೆಸಮಾಜಮುಖೀ ಕೆಲಸದಲ್ಲೂ ತೊಡಗಿಸಿಕೊಂಡಿದ್ದಾರೆ.
ಇಂತಹವನ್ನು ಸನ್ಮಾನಿಸುವುದರಿಂದ ಇನ್ನಷ್ಟುಸತ್ಕಾರ್ಯಗಳು ಸಮಾಜದಲ್ಲಿ ನಡೆಯುತ್ತವೆ ಎಂದುಹೇಳಿದರು.ವಿಪ್ರ ವೈದಿಕ ಪರಿಷತ್ ಅಧ್ಯಕ್ಷ ನವೀನ್ ಜೋಯ್ಸಅಧ್ಯಕ್ಷತೆ ವಹಿಸಿದ್ದರು. ವಿಪ್ರ ನೌಕರರ ಸಂಘದ ಅಧ್ಯಕ್ಷವೈ.ಮೋಹನ್, ಶರಾವತಿ ಸಿ.ರಾವ್, ಬದ್ರಿನಾಥ್,ಜ್ಯೋತಿ ನಂಜುಂಡಸ್ವಾಮಿ, ಗಾಯತ್ರಿ, ಶ್ರೀಶ,ಸುಜಾತ ವಸಂತಕುಮಾರ್, ಸುರೇಖಾ ಇನ್ನಿತರರುಹಾಜರಿದ್ದರು.ಮಣಿಕಲ್ ಗಣೇಶ್ ಭಟ್ ಮತ್ತು ನಾಗೇಂದ್ರಭಟ್ ವೇದಘೋಷ ಮಾಡಿದರು. ಮಾನಸಸಂಜಯ್ ಪ್ರಾರ್ಥಿಸಿ, ಎಲ್.ಎಂ.ಹೆಗಡೆ ನಿರೂಪಿಸಿ,ಡಾ|ವೆಂಕಟೇಶ್ ಜೋಯ್ಸ ವಂದಿಸಿದರು.