Advertisement

Sagara: ಎಲೆಲೆ, ಎಲೆ ಕೀಟ; ಅಪರೂಪಕ್ಕೆ ಕಂಡ ನೋಟ!

04:57 PM Oct 08, 2024 | Kavyashree |

ಸಾಗರ: ಭಾರತದಲ್ಲಿಯೂ 140 ಜಾತಿಯ ಪಾಸ್ಮಿಡಾಗಳಲ್ಲಿ ಎಲೆ ಕೀಟ ಸಾಕಷ್ಟು ಅಪರೂಪದ್ದು. ಏಷ್ಯಾ ಖಂಡದಿಂದ ಅಮೆರಿಕಾದವರೆಗೂ ಇದರ ಆಧಿಪತ್ಯವಿದೆ. ಪರಿಸರದ ಎಲೆಯಂತೆಯೇ ಕಾಣಿಸುವ ಈ ಎಲೆ ಕೀಟದ ಆಹಾರ ಕೂಡ ಎಲೆಯೇ.

Advertisement

ಇಂತಹ ಎಲೆಕೀಟವೊಂದು ಅ.8ರ ಮಂಗಳವಾರ ತಾಲೂಕಿನ ಕಲ್ಮನೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉದ್ರೆಯ ಉಮೇಶ್ ಯು.ಎಚ್. ಎಂಬವರ ಮನೆಯ ಹಿತ್ತಲಿನಲ್ಲಿ ಕಾಣಿಸಿತ್ತು.‌

ಯಾರನ್ನೂ ಕಚ್ಚದ, ಮರದ ಮೇಲಿನಿಂದಲೇ ಮೊಟ್ಟೆಯನ್ನು ಕೆಳಗೆ ಹಾಕಿ ಮರಿ ಮಾಡುವ ಎಲೆ ಕೀಟಗಳಲ್ಲಿ 40 ಕ್ಕೂ ಹೆಚ್ಚು ವೈವಿಧ್ಯತೆಯಿದೆ. ಎಲೆಯಲ್ಲಿಯೇ ಮರಿ ಎಲೆಗಳನ್ನು ಹೊಂದಿದಂತಹ ರಚನೆಯ ಈ ಉದ್ರೆಯ ಎಲೆ ಕೀಟದ ರಚನೆ, ಓಡಾಟ ಗಮನ ಸೆಳೆಯುವಂತಿತ್ತು.

ಉಮೇಶ್‌ರ ಪುತ್ರಿ ಲಾವಣ್ಯ ಇದರ ಚಟುವಟಿಕೆಗಳನ್ನು ಚಿತ್ರೀಕರಿಸಿ ಉದಯವಾಣಿಗೆ ನೀಡಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next