ಸಾಗರ: ಇಲ್ಲಿನ ಅಶೋಕ್ ರಸ್ತೆಯಲ್ಲಿನ ಶ್ರೀರಾಮ ಸಿಟಿ ಫೈನಾನ್ಸ್ ಎಂಬ ಖಾಸಗಿ ಹಣಕಾಸು ಸಂಸ್ಥೆಯು ಸ್ಥಳೀಯ ನಗರಸಭೆಯಿಂದ ಅಧಿಕೃತ ಪರವಾನಿಗೆ ಪಡೆದುಕೊಳ್ಳದೆ ವ್ಯವಹಾರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಮಂಗಳವಾರ ನಗರಸಭೆ ಅಧಿಕಾರಿಗಳು ಪರಿಶೀಲನೆ ನಡೆಸಿ, ನೊಟೀಸ್ ನೀಡಿದ್ದಾರೆ.
ನಗರಸಭೆ ಪರಿಸರ ಅಭಿಯಂತರ ಮದನ್ ಮತ್ತು ಮಹೇಶ್ ಸ್ಥಳಕ್ಕೆ ಭೇಟಿ ನೀಡಿದ್ದು, 7 ದಿನಗಳ ಅವಧಿಯೊಳಗೆ ಹಣಕಾಸು ಸಂಸ್ಥೆಯು ಅಧಿಕೃತ ಉತ್ತರ ನೀಡದಿದ್ದರೆ ಪುರಸಭೆ 1964 ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಲಾಗುವುದು ಎಂದು ನೊಟೀಸ್‌ನಲ್ಲಿ ತಿಳಿಸಿದ್ದಾರೆ.
ಪ್ರತಿಭಟನೆ: ಬಂಗಾರದ ಆಭರಣಗಳ ಹರಾಜು ಪ್ರಕ್ರಿಯೆಯನ್ನು ಸಮರ್ಪಕವಾಗಿ ನಡೆಸುತ್ತಿಲ್ಲ ಎಂದು ಮಂಗಳವಾರ ಈ ಫೈನಾನ್ಸ್ ಎದುರು ಜನರು ಪ್ರತಿಭಟನೆ ನಡೆಸಿದ್ದಾರೆ. ಬಂಗಾರದ ಆಭರಣಗಳನ್ನು ಅಡವಿಟ್ಟು ಸಾಲ ಪಡೆದುಕೊಂಡಿರುವ ಗ್ರಾಹರಿಕೆ ಸೂಕ್ತ ಮಾಹಿತಿ ನೀಡದೆ ಹರಾಜು ಕಾರ‍್ಯ ನಡೆಸಲಾಗಿದೆ ಎಂದು ಪ್ರತಿಭಟನಾನಿರತರು ಆಕ್ಷೇಪಿಸಿದ್ದಾರೆ.
ಪ್ರವೀಣ್ ಬಣಕಾರ್, ನಗರಸಭೆ ಸದಸ್ಯ ಸಯ್ಯದ್ ಝಾಕೀರ್, ಜಯರಾಮ ಸೂರನಗದ್ದೆ, ನಾಗರಾಜ ಗುಡ್ಡೇಮನೆ, ದಿನೇಶ, ಕೃಷ್ಣಮೂರ್ತಿ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಶ್ರೀರಂಗಪಟ್ಟಣ : ಹೈಕೋರ್ಟ್ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಶಿಕ್ಷಕಿ