Advertisement

ತುರ್ತು ಅಗತ್ಯ ಸೇವೆಗೆ ಸಿಗಬೇಕಾದ ಅಂಬ್ಯುಲೆನ್ಸ್ ಗೇ ಅರೋಗ್ಯ ಸಮಸ್ಯೆ : 4 ದಿನಗಳಿಂದ ತಟಸ್ಥ!

06:06 PM Jul 06, 2022 | sudhir |

ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶವಾದ ತುಮರಿಯ ಜನರಿಗೆ ದಿನದ 24 ಘಂಟೆಯೂ ಆರೋಗ್ಯ ಸೇವೆ ಲಭ್ಯವಾಗಬೇಕು ಎಂಬ ಕಾರಣಕ್ಕೆ ಮಂಜೂರಾದ ವಿಶೇಷ ಅಂಬ್ಯುಲೆನ್ಸ್ ವಾಹನವೇ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದೆ. ಕಳೆದ ಮೂರು ದಿನಗಳಿಂದ ತುಮರಿಯ ಆರೋಗ್ಯ ಕೇಂದ್ರದ ರಸ್ತೆ ಪಕ್ಕದಲ್ಲಿ ಕೆಟ್ಟು ನಿಂತಿದ್ದು ತುರ್ತು ಅಗತ್ಯಗಳಿಗೆ ಒದಗದ ವಾತಾವರಣ ನಿರ್ಮಾಣವಾಗಿದೆ.

Advertisement

ಮೂರು ದಿನಗಳ ಹಿಂದೆ ಸಾಗರ ನಗರದಿಂದ ಮರಳುವಾಗ ವೆಂಟಿಲೇಟರ್ ವ್ಯವಸ್ಥೆಯೂ ಇರುವ ಅಂಬುಲೆನ್ಸ್ ಲಾಂಚ್‌ನಲ್ಲಿ ಏಕಾಏಕಿ ಹೊಗೆ ಕಾರಿ ನಿಂತಿದೆ. ವಾಹನದ ಸೆನ್ಸಾರ್ ವ್ಯವಸ್ಥೆಯ ದೋಷದ ಕಾರಣ ಈ ಸಮಸ್ಯೆಯಾಗಿದೆ. ನಂತರ ನಡುದಾರಿಯಲ್ಲಿ ಕೈಕೊಟ್ಟ ವಾಹನವನ್ನು ಎಳೆದುಕೊಂಡು ಬಂದು ಆಸ್ಪತ್ರೆಯ ಎದುರು ನಿಲ್ಲಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ತುಮರಿ ಗ್ರಾಮ ಪಂಚಾಯ್ತಿಯ ಮಾಜಿ ಅಧ್ಯಕ್ಷ, ಜನಪರ ಹೋರಾಟ ವೇದಿಕೆಯ ಜಿ.ಟಿ.ಸತ್ಯನಾರಾಯಣ ಕರೂರು, ವೆಂಟಿಲೇಟರ್ ಇರುವ ವಾಹನವನ್ನು ನಿಲ್ಲಿಸಲು ಆಸ್ಪತ್ರೆಯಲ್ಲಿ ಶೆಡ್ ನಿರ್ಮಾಣವಾಗಿಲ್ಲ. ಇದರಿಂದ ರಸ್ತೆ ಪಕ್ಕದಲ್ಲಿ ನಿಲ್ಲಿಸುವುದರಿಂದ ವಾಹನದೊಳಗೆ ನೀರಿನ ಸೋರಿಕೆ, ಆರ್ದತೆ ಹೋಗಿ ಅದರ ಸೆನ್ಸಾರ್ ವ್ಯವಸ್ಥೆ ಹಾಳಾಗುತ್ತಿದೆ ಎಂಬ ಅನುಮಾನಗಳಿವೆ. ನಾಲ್ಕು ದಿನಗಳಿಂದ ಅಂಬುಲೆನ್ಸ್ ಸೇವೆ ವ್ಯತ್ಯಯವಾಗಿದ್ದರೂ ಆರೋಗ್ಯ ಇಲಾಖೆ ಈ ಕುರಿತು ಗಮನ ಹರಿಸದಿರುವುದು ಖಂಡನೀಯ. ಈ ಬಗ್ಗೆ ತುರ್ತು ಪರಿಸ್ಥಿತಿ ನಿರ್ಮಾಣ ಆಗುವ ಮುನ್ನವೇ ಗಮನ ಹರಿಸಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಗೆ ಆಡಳಿತಾತ್ಮಕ ಮಂಜೂರು- ಕವಟಗಿಮಠ

Advertisement

Udayavani is now on Telegram. Click here to join our channel and stay updated with the latest news.

Next