Advertisement

ಸಾಗರ: 5 ವರ್ಷದ ಮಗು ಹೃದಯಾಘಾತದಿಂದ ಸಾವು

10:21 AM Jan 23, 2022 | Team Udayavani |

ಸಾಗರ: ನಗರದ ಅಣಲೆಕೊಪ್ಪದಲ್ಲಿ ಆಯತಪ್ಪಿ ಬಿದ್ದ ಮಗು, ಆಘಾತಗೊಂಡು ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಘಟನೆ ಶನಿವಾರ ಸಂಜೆ ನಡೆದಿದೆ.

Advertisement

ಕ್ರಿಶಾ (5) ಮೃತಪಟ್ಟ ಮಗು.

ಸಂಜೆ ಐದರ ಸಮಯದಲ್ಲಿ ಆಟವಾಡಿಕೊಂಡಿದ್ದ ಮಗು ಆಯತಪ್ಪಿ ಬಿದ್ದಿದೆ. ಕೂಡಲೇ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಆ ವೇಳೆಗೆ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಖಚಿತಪಡಿಸಿದ್ದಾರೆ.

ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೈತೂರು ಕ್ವಾಗೇರಿಯ ಮೂರ್ತಿ, ರಾಜೇಶ್ವರಿ ದಂಪತಿಗಳ ಎರಡನೇ ಮಗು ಕ್ರಿಶಾ. ಮಗುವಿನ ಅಂತಿಮ ವಿಧಿವಿಧಾನಗಳನ್ನು ಹೈತೂರಿನಲ್ಲಿ ನೆರವೇರಿಸಲಾಗಿದೆ ಎಂದು ಮೂರ್ತಿ ಕುಟುಂಬದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next