Advertisement

ಸಾಗರದ ಮಹಿಳೆ ಸಾವು

12:50 AM Jan 21, 2019 | Harsha Rao |

ಉಡುಪಿ/ಹೆಬ್ರಿ: ಮಣಿಪಾಲ ಆಸ್ಪತ್ರೆಗೆ ದಾಖಲಾದ ಸಾಗರ ತಾಲೂಕು ಅರಲಗೋಡಿನ ಲಕ್ಷ್ಮೀದೇವಿ (82) ಸಾವನ್ನ ಪ್ಪಿದ್ದು, ಮಣಿಪಾಲ ಆಸ್ಪತ್ರೆಯಲ್ಲಿ ಮಂಗನ ಕಾಯಿಲೆಯಿಂದ ಮೃತಪಟ್ಟ ಪ್ರಕರಣ ಇದೇ ಮೊದಲ ಬಾರಿ ಸಂಭವಿಸಿದೆ.

Advertisement

ಇದುವರೆಗೆ ನೂರು ಮಂದಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾ ಗಿದ್ದು ಅವರೆಲ್ಲರೂ ಸಾಗರ ಆಸುಪಾಸಿನವರು. 40 ಮಂದಿಗೆ ಮಂಗನ ಕಾಯಿಲೆ ಇರುವ ಬಗ್ಗೆ ಮತ್ತು 59 ಜನರಿಗೆ ಇರದ ಬಗ್ಗೆ ವರದಿಯಾಗಿದೆ. ಒಬ್ಬರ ವರದಿ ಬರಬೇಕಾಗಿದೆ. 76 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. 23 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಬ್ರಿ ಕುಚ್ಚಾರು: ಮಂಗನ ಶವ ಪತ್ತೆ
ಹೆಬ್ರಿ ಸಮೀಪ ಕುಚ್ಚಾರಿನಿಂದ ಮಾಂಡಿಮೂರಕೈ ಹೋಗುವ ಮಾರ್ಗದಲ್ಲಿ ರಸ್ತೆ  ಬದಿ ಜ. 19ರಂದು ಮಂಗನ ಮೃತದೇಹ ಪತ್ತೆಯಾಗಿದ್ದು ಸ್ಥಳಕ್ಕೆ ಆರೋಗ್ಯ, ಪಶುಸಂಗೋಪನೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಪರೀಕ್ಷೆಗಾಗಿ ಶವದ ಮಾದರಿಗಳನ್ನು ಶಿವಮೊಗ್ಗಕ್ಕೆ ಕಳುಹಿಸಿದ್ದಾರೆ. ಬೇಳಂಜೆಯ ಕಾಡಿನಲ್ಲಿ ಜ. 20ರಂದು ಮಂಗನ ಶವವೊಂದು ಪತ್ತೆಯಾಗಿದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನಾಯಿ ದಾಳಿಯಿಂದ ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಇಲಾಖಾಧಿಕಾರಿಗಳು ತಿಳಿಸಿದ್ದಾರೆ.

ಬೆಳಂದೂರಿನಲ್ಲಿ  ಮಂಗ ಸಾವು
ಸವಣೂರು:
ಪುತ್ತೂರು ತಾಲೂಕಿನ ಬೆಳಂದೂರು ಗ್ರಾಮದ ಕೂಂಕ್ಯದ ನಾರ್ಣಪ್ಪ ಗೌಡ ಅವರ ತೋಟದಲ್ಲಿ ರವಿವಾರ ಮಂಗನ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ಆರೋಗ್ಯ ಹಾಗೂ ಅರಣ್ಯ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು  ಸುಡಲಾಗಿದೆ. ದೇಹದ ಮಾದರಿಗ ಳನ್ನು ಪರೀಕ್ಷಾ ಕೇಂದ್ರಕ್ಕೆ  ಕಳುಹಿಸಿದ್ದಾರೆ.

ಸಾಗರ: ಮತ್ತೆ ನಾಲ್ವರಿಗೆ ಜ್ವರ
ಸಾಗರ:
ಮಂಗನಕಾಯಿಲೆಯ ರೌದ್ರಾವತಾರ ಮುಂದುವರಿದಿದ್ದು, ರವಿವಾರ ಮತ್ತೆ ನಾಲ್ಕು ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next