Advertisement

Sagara: ಪೈಪ್ ಕಳ್ಳತನ ಪ್ರಕರಣ; ಖದೀಮನ ಬಂಧನ

08:42 PM Nov 06, 2023 | Shreeram Nayak |

ಸಾಗರ: ತಾಲೂಕಿನ ಹೆಗ್ಗೋಡು ಗ್ರಾಮದ ಕೇಡಲಸರ ಸಂಸ್ಕೃತ ಶಾಲಾ ಆವರಣದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅಳವಡಿಸಲು ಸಂಗ್ರಹಿಸಿಟ್ಟಿದ್ದ ಪೈಪ್‌ಗಳನ್ನು ಅಪಹರಿಸಿದ್ದ ಕಳ್ಳನನ್ನು ಬಂಧಿಸುವಲ್ಲಿ ಸಾಗರ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ.

Advertisement

ಆರೋಪಿ ವೇಗರಾಜ್ ಹೊಸೂರು ಅವರನ್ನು ಪೊಲೀಸರು ಸೋಮವಾರ ಬಂಧಿಸಿದ್ದು, 1.15 ಲಕ್ಷ ರೂ. ಬೆಲೆಯ ಒಂದು ಸಾವಿರ ಮೀಟರ್ ಉದ್ದದ 5 ಪೈಪ್ ಬಂಡಲ್‌ಗಳು ಮತ್ತು ಕೃತ್ಯಕ್ಕೆ ಬಳಸಿದ 1.5೦ ಲಕ್ಷ ರೂ. ಬೆಲೆಯ ಟಾಟಾ ಸುಪರ್ ಎಸ್ ಮಿಂಟ್ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಅ. 22ರಿಂದ 25ರ ಮಧ್ಯದ ಅವಧಿಯಲ್ಲಿ ನಡೆದ ಕಳ್ಳತನದ ಪ್ರಕರಣ ಸಂಬಂಧ ಸಾಗರದ ಡಿವೈಎಸ್‌ಪಿ ಗೋಪಾಲಕೃಷ್ಣ ನಾಯ್ಕ ಟಿ. ಪತ್ತೆಗೆ ವಿಶೇಷ ಪೊಲೀಸ್ ತಂಡವನ್ನು ರಚಿಸಿದ್ದರು. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಇನ್ಸ್‌ಪೆಕ್ಟರ್ ಮಹಾಬಲೇಶ್ವರ ನಾಯ್ಕ್, ಪಿಎಸ್‌ಐ ನಾರಾಯಣ ಮಧುಗಿರಿ ಹಾಗೂ ಸಿಬ್ಬಂದಿಗಳಾದ ಸನಾವುಲ್ಲಾ, ಷೇಖ್ ಫೈರೋಜ್ ಅಹಮದ್, ರವಿಕುಮಾರ್ ತಂಡದಲ್ಲಿದ್ದರು.

ಚಾಲಕ ವೃತ್ತಿಯಲ್ಲಿದ್ದ ವೇಗರಾಜ್ ಮೂವರು ಇತರ ಆರೋಪಿಗಳು ಸೇರಿ ಸೇರಿ ಕಳ್ಳತನ ಮಾಡಿ, ಮಾಲನ್ನು ತಾಲೂಕಿನ ಆವಿನಹಳ್ಳಿ ಹೋಬಳಿಯ ನಿರ್ಜನ ಪ್ರದೇಶ ಒಂದರಲ್ಲಿ ಬಚ್ಚಿಟ್ಟಿದ್ದರು. ಖಚಿತ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದರು. ಇನ್ನೂ ಮೂವರು ಈ ಕಳ್ಳತನದಲ್ಲಿ ಭಾಗಿಯಾಗಿದ್ದಾರೆನ್ನಲಾಗಿದ್ದು ಅವರ ಬಂಧನ ಇನ್ನಷ್ಟೇ ಆಗಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next