Advertisement

ಜೀವ ರಕ್ಷಣೆಗೆ ಸುರಕ್ಷತೆ ಅವಶ್ಯ

10:05 AM Sep 18, 2017 | |

ಕಲಬುರಗಿ: ಜೀವ ಜೀವನ ತುಂಬಾ ಅತ್ಯಮೂಲ್ಯ. ಅದರ ಸುರಕ್ಷತೆಗೆ ಎಚ್ಚರಿಕೆ ವಹಿಸಬೇಕು. ರಕ್ಷಣೆ ಭಾಗವಾಗಿ ಉತ್ತಮವಾಗಿ ಪ್ರಯಾಣಿಸಬೇಕು ಎಂದು ಈಶಾನ್ಯ ವಲಯ ಐಜಿಪಿ ಅಲೋಕಕುಮಾರ ಹೇಳಿದರು.

Advertisement

ರವಿವಾರ ಸಂಜೆ ಸರದಾರ ವಲ್ಲಭಭಾಯಿ ಪಟೇಲ್‌ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಸುಗಮ, ಸುರಕ್ಷಿತ ಟ್ರಾಫಿಕ್‌ ಡ್ರೈವ್‌ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತಿಚಿನ ವರ್ಷಗಳಲ್ಲಿ ರಸ್ತೆ ಅಫಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಫಘಾತಗಳಲ್ಲಿ ಬಹುತೇಕವು ನಿರ್ಲಕ್ಷ ಮತ್ತು ಹೆಚ್ಚು ವೇಗದ ಕಾರಣದಿಂದಾಗಿ ನಡೆಯುತ್ತವೆ. ಅವುಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್‌ ಸುರಕ್ಷಿತ ಪ್ರಯಾಣಕ್ಕಾಗಿ ಮನವಿ ಮಾಡುತ್ತ ಜಾಗೃತಿ ಮೂಡಿಸುವ ಯತ್ನ ಮಾಡುತ್ತಿದೆ. ಅಪಘಾತದ ಸಂದರ್ಭದಲ್ಲಿ ತಲೆಗೆ ಹೆಚ್ಚು ಪೆಟ್ಟಾಗುವುದರಿಂದ ಹೆಲ್ಮೆಟ್‌ ಕಡ್ಡಾಯವಾಗಿ ಹಾಕಿಕೊಳ್ಳಿ ಎಂದು ಮನವಿ ಮಾಡಿದರು.

ರಸ್ತೆಗಳಲ್ಲಿ ಓಡಾಡುವವರೆಲ್ಲ ಸಹ ಪ್ರಯಾಣಿಕರ ಪ್ರಾಣದ ಕುರಿತು ಎಚ್ಚರಿಕೆ ವಹಿಸುವುದು ಉತ್ತಮ. ಆಟೋ ಚಾಲಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು. ಇದರಿಂದ ಅವರನ್ನು ಗುರುತಿಸಲು ಸಹಾಯವಾಗುತ್ತದೆ. ಆಟೋಗಳಲ್ಲಿ ಮುಂದಿನ ಸೀಟುಗಳಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಳ್ಳಬಾರದು. ಇದರಿಂದ ಉತ್ತವಾಗಿ ಆಟೋ ಓಡಿಸಲು ಚಾಲಕರಿಗೆ ಸಹಾಯವಾಗುತ್ತದೆ. ಬೀದಿಗಳಲ್ಲಿ ವ್ಯಾಪಾರ ಮಾಡಿಕೊಂಡಿರುವರು ಸುಗಮ ಸಂಚಾರಕ್ಕೆ ಅಡ್ಡಿ ಪಡಿಸದೆ ಸಹಕಾರ ನೀಡಬೇಕು ಎಂದರು.

ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ಹಾಗೂ ಎಸ್ಪಿ ಶಶಿಕುಮಾರ ಮಾತನಾಡಿದರು. ಪ್ರೊಬೆಷನರಿ ಐಪಿಎಸ್‌ ಅಧಿಕಾರಿ ಲೋಕೇಶ ಬಿ.ಜಿ, ಡಿವೈಎಸ್ಪಿ ಉದಯಕುಮಾರ ಪಾಲ್ಗೊಂಡಿದ್ದರು. 

Advertisement

ಇದಕ್ಕೂ ಮುನ್ನ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊಲೀಸರು, ಮಹಿಳಾ ಪೇದೆಗಳು ಹಮ್ಮಿಕೊಂಡಿದ್ದ ಬೈಕ್‌ ರ್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next