Advertisement

SAF: ಚೆಟ್ರಿ ಹ್ಯಾಟ್ರಿಕ್‌ ದಾಖಲೆ- ಭಾರತಕ್ಕೆ ಶರಣಾದ ಪಾಕಿಸ್ಥಾನ

10:19 PM Jun 21, 2023 | Team Udayavani |

ಬೆಂಗಳೂರು: ನಾಯಕ ಸುನೀಲ್‌ ಚೆಟ್ರಿ ಅವರ ಹ್ಯಾಟ್ರಿಕ್‌ ಪರಾಕ್ರಮದಿಂದ ಸ್ಯಾಫ್ ಫ‌ುಟ್‌ಬಾಲ್‌ ಪಂದ್ಯಾವಳಿಯ ಆರಂಭಿಕ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ಥಾನವನ್ನು 4-0 ಗೋಲುಗಳಿಂದ ಮಣಿಸಿದೆ.

Advertisement

ಸುನೀಲ್‌ ಚೆಟ್ರಿ ಪಂದ್ಯದ 11ನೇ, 15ನೇ ಹಾಗೂ 74ನೇ ನಿಮಿಷದಲ್ಲಿ ಗೋಲು ಬಾರಿಸಿ ಹ್ಯಾಟ್ರಿಕ್‌ ಪೂರೈಸಿದರು. ಇದರೊಂದಿಗೆ ಅವರು ಅಂತಾರಾಷ್ಟ್ರೀಯ ಫ‌ುಟ್‌ಬಾಲ್‌ನಲ್ಲಿ 2ನೇ ಅತ್ಯಧಿಕ ಗೋಲು ಬಾರಿಸಿದ ಏಷ್ಯನ್‌ ಆಟಗಾರನೆನಿಸಿದರು. ಚೆಟ್ರಿ ಅವರ ಒಟ್ಟು ಗೋಲು ಸಂಖ್ಯೆ 90ಕ್ಕೆ ಏರಿತು.

ಪಂದ್ಯದ 4ನೇ ಗೋಲನ್ನು ಉದಾಂತ್‌ ಸಿಂಗ್‌ 81ನೇ ನಿಮಿಷದಲ್ಲಿ ಬಾರಿಸಿದರು. ಬದಲಿ ಆಟಗಾರನಾಗಿ ಕಣಕ್ಕಿಳಿದ ಐದೇ ನಿಮಿಷದಲ್ಲಿ ಉದಾಂತ್‌ ಪಾಕ್‌ಗೆ ಪ್ರಹಾರವಿಕ್ಕಿದರು.
ಮೊದಲ ಪಂದ್ಯದಲ್ಲಿ ಕುವೈಟ್‌ 3-1 ಗೋಲುಗಳಿಂದ ನೇಪಾಲವನ್ನು ಮಣಿಸಿತು.

Advertisement

Udayavani is now on Telegram. Click here to join our channel and stay updated with the latest news.

Next