Advertisement

ರಾಷ್ಟ್ರ ಸುರಕ್ಷಿತವಾಗಿದ್ದರೆ ಧರ್ಮ ಸುರಕ್ಷಿತ: ಸಾಧ್ವಿ ಸರಸ್ವತೀ

11:37 PM Feb 20, 2023 | Team Udayavani |

ವೇಣೂರು: ರಾಷ್ಟ್ರ ಸುರಕ್ಷಿತ ವಾಗಿದ್ದರೆ ಧರ್ಮ ಮತ್ತು ಧಾರ್ಮಿಕ ಕ್ಷೇತ್ರಗಳು ಸುರಕ್ಷಿತವಾಗಿರುತ್ತವೆ. ಅದಕ್ಕಾಗಿ ನಾವು ಪಣತೊಡಬೇಕು. ಪರಶುರಾಮ, ಕಲ್ಕುಡ ಕಲ್ಲುರ್ಟಿ, ಕೋಟಿ-ಚೆನ್ನಯ, ನಾರಾಯಣ ಗುರು, ಕಟೀಲು ದುರ್ಗೆ ನೆಲೆ ನಿಂತಿರುವ ಈ ಪವಿತ್ರ ಭೂಮಿಗೆ ಬಂದಿರುವುದು ಬಹಳ ಸಂತಸವಾಗಿದೆ ಎಂದು ಮಧ್ಯಪ್ರದೇಶದ ಸಾಧ್ವಿ ಭಗವತಿ ಸರಸ್ವತೀ ನುಡಿದರು.
ಅಜಿಲಸೀಮೆಗೆ ಒಳಪಟ್ಟ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಫೆ. 19ರಿಂದ 27ರ ವರೆಗೆ ಪುನಃ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ ಜರಗಲಿದ್ದು, ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.

Advertisement

ಸಾಧನೆ ಸುಲಭದ ಮಾತಲ್ಲ. ಕಾಲೆಳೆಯುವ ಕಾಲಘಟ್ಟದಲ್ಲೂ ಶಾಸಕ ಹರೀಶ ಪೂಂಜರು ಸಣ್ಣ ವಯಸ್ಸಿನಲ್ಲೇ ಬಹುದೊಡ್ಡ ಸಾಧನೆ ಮಾಡುತ್ತಿದ್ದಾರೆ. ಎಂದು ಶ್ಲಾ ಸಿದರು. ಪಾಶ್ಚಾತ್ಯ ಸಂಸ್ಕೃತಿಯ ಬೇರೆ ಬೇರೆ ಡೇಗಳನ್ನು ಆಚರಿಸುವ ಬದಲು ನಾಡಿನ ಮಹಾಪುರುಷರ ಜಯಂತಿಗಳನ್ನು, ಪವಿತ್ರ ಹಬ್ಬಗಳನ್ನು ಆಚರಿಸುವ ಪರಿಪಾಠ ಬೆಲೆಯಲಿ ಎಂದರು.

ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲರು ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಶಾಸಕ ಹರೀಶ್‌ ಪೂಂಜ ಮಾತನಾಡಿ, ಅಜಿಲ ಅರಸರ ಅಪೇಕ್ಷೆಯಂತೆ ಬ್ರಹ್ಮಕಲಶ ವಿಜೃಂಭಣೆಯಿಂದ ನಡೆಯುತ್ತಿದೆ. ಇದಕ್ಕಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ಡಿ. ದೇವರಾಜ ಅರಸು ರಾಜ್ಯಪ್ರಶಸ್ತಿ ಪುರಸ್ಕೃತ ವೈದ್ಯ ಡಾ| ಎಂ. ಅಣ್ಣಯ್ಯ ಕುಲಾಲ್‌ ಉಳೂ¤ರು, ವೇಣೂರು ಕುಂಭಶ್ರೀ ವಿದ್ಯಾಸಂಸ್ಥೆಯ ಸಂಸ್ಥಾಪಕ ಗಿರೀಶ್‌ ಕೆ.ಎಚ್‌., ಉದ್ಯಮಿ ವೇಣೂರು ಧನಲಕ್ಷ್ಮೀ ಟ್ರೇಡರ್ನ ಜಗದೀಶ್‌ ನಾಯಕ್‌, ವೇಣೂರು ಗ್ರಾ.ಪಂ. ಅಧ್ಯಕ್ಷ ರಾದ ನೇಮಯ್ಯ ಕುಲಾಲ್‌, ವೈದ್ಯ ಡಾ| ಶಾಂತಿಪ್ರಸಾದ್‌, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಎನ್‌. ಪುರುಷೋತ್ತಮ ರಾವ್‌, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಯಜ್ಞನಾರಾಯಣ ಭಟ್‌ ಉಪಸ್ಥಿತರಿದ್ದರು.

ಉದ್ಘಾಟನೆ
ಉಗ್ರಾಣದ ಉದ್ಘಾಟನೆಯನ್ನು ವೇಣೂರು ಕಮಲಾ ಬಂಗೇರ, ಭಜನ ಕಮ್ಮಟ ಉದ್ಘಾಟನೆಯನ್ನು ಗೌರಮ್ಮ ನರಸಿಂಹ ಭಟ್‌ ಮತ್ತು ಚಂದ್ರಕುಮಾರಿ, ಸಾಂಸ್ಕೃತಿಕ ಕಾರ್ಯ
ಕ್ರಮವನ್ನು ವಿ. ಪ್ರವೀಣ್‌ ಕುಮಾರ್‌ ಇಂದ್ರ, ಅನ್ನಪೂರ್ಣೇಶ್ವರೀ ಭೋಜನ ಮಂಟಪವನ್ನು ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ ಮುಂಡ್ರುಪ್ಪಾಡಿ, ಬ್ರಹ್ಮಕಲಶ ಸೇವಾ ಕಚೇರಿಯನ್ನು ವಸಂತ ಸಾಲ್ಯಾನ್‌ ಹಾಗೂ ಯಕ್ಷವೇದಿಕೆಯ ಉದ್ಘಾಟನೆ ಯನ್ನು ಮುಜರಾಯಿ ಇಲಾಖೆಯ ಮಾಜಿ ಆಯುಕ್ತ ಶ್ಯಾಮ್‌ ಭಟ್‌ ನೆರವೇರಿಸಿದರು.

Advertisement

ಜೀಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಬಿ.ಇ. ಸ್ವಾಗತಿಸಿದರು. ಉಪನ್ಯಾಸಕ ಮಹಾವೀರ ಜೈನ್‌ ಮೂಡುಕೋಡಿಗುತ್ತು ನಿರೂಪಿಸಿ, ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಜಯಂತ್‌ ಕೋಟ್ಯಾನ್‌ ವಂದಿಸಿದರು.

ಆತ್ಮಗೌರವಕ್ಕಾಗಿ ಹೋರಾಡೋಣ
ದುರ್ಗೆ, ಸರಸ್ವತಿಯವರ ಸ್ವರೂಪವಾಗಿ ಸ್ತ್ರೀಯರನ್ನು ಪೂಜಿಸುವ ಸಂಸ್ಕೃತಿ ನಮ್ಮದು. ಆದರೆ ಇಂದು ಲವ್‌ ಜೆಹಾದ್‌ ಎಂಬ ಹೆಸರಿನಲ್ಲಿ ನಮ್ಮ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ. ನಮ್ಮ ಹೆಣ್ಣು ಮಕ್ಕಳು ಸದೃಢರಾಗಬೇಕಿದೆ. ರಾಣಿ ಅಬ್ಬಕ್ಕಳಂತೆ ಆತ್ಮಗೌರವಕ್ಕಾಗಿ ಹೋರಾಡಲು ಹಿಂಜರಿಯಬಾರದು ಎಂದು ಸಾಧ್ವಿ ಭಗವತಿ ಸರಸ್ವತೀ ತಿಳಿಸಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next