ಮಥುರಾ: ಉತ್ತರ ಪ್ರದೇಶದಲ್ಲಿ ನಡೆದ ಅತ್ಯಂತ ಹೇಯ ಮತ್ತು ಕಳವಳಕಾರಿ ಘಟನೆಯೊಂದರಲ್ಲಿ ಬರ್ಸಾನಾ ಎಂಬಲ್ಲಿ ದೇವಾಲಯದಲ್ಲಿ ಮಲಗಿದ್ದ 45 ವರ್ಷ ಪ್ರಾಯದ ಸಾಧ್ವಿಯೊಬ್ಬರ ಮೇಲೆ ಇಬ್ಬರು ಕಾಮಾಂಧರು ಗ್ಯಾಂಗ್ ರೇಪ್ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 11 ರಂದು ಘಟನೆ ನಡೆದಿದ್ದು, ಶುಕ್ರವಾರ ಈ ಬಗ್ಗೆ ಎಫ್ಐಆರ್ ದಾಖಲಾಗಿದೆ.
ದೂರಿನಲ್ಲಿ ದಾಖಲಾದಂತೆ ಶ್ರೀಜಿ ಎಂಬ ದೇವಾಲಯದ ಮೇಲ್ಮಹಡಿಯಲ್ಲಿ ಮಲಗಿದ್ದ ಸಾಧ್ವಿಯನ್ನು ದೇವಾಲಯದ ಕಾವಲುಗಾರ ಮತ್ತು ಇನ್ನೊಬ್ಬ ಸಿಬಂದಿ ಎಳೆದೊಯ್ದು ಏಕಾಂತ ಸ್ಥಳದಲ್ಲಿ ಬರ್ಬರವಾಗಿ ಅತ್ಯಾಚಾರ ಎಸಗಿದ್ದಾರೆ. ಕಾಮುಕರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಸಂತ್ರಸ್ತ ಸಾಧ್ವಿಯನ್ನು ಆಸ್ಪತ್ರೆಗೆ ದಾಖಲಿಸಿ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಘಟನೆಯಿಂದಾಗಿ ತೀವ್ರ ಘಾಸಿಗೊಳಗಾಗಿರುವ ಆಕೆ ಯಾವುದೇ ಹೇಳಿಕೆ ನೀಡುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಬ್ಬರು ಪರಾರಿಯಾಗಿದ್ದು ಅವರ ಬಂಧನಕ್ಕಾಗಿ 2 ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
Video Courtesy: Capture News