ಕಾಲೇಜ್ ಸ್ಟೋರಿಗೆ ಸಾಧು ನಿರ್ದೇಶನ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ, ಸಂಗೀತ ನಿರ್ದೇಶಕನಾಗಿ, ನಿರ್ದೇಶಕನಾಗಿ ವಿವಿಧ ವಿಭಾಗಗಳಲ್ಲಿ ಗುರುತಿಸಿಕೊಂಡಿರುವ ಸಾಧು ಕೋಕಿಲ, ಈಗ ಸದ್ದಿಲ್ಲದೆ ಮತ್ತೂಂದು ಹೊಸ ಚಿತ್ರಕ್ಕೆ ನಿರ್ದೇಶನ ಮಾಡುವ ತಯಾರಿಯಲ್ಲಿದ್ದಾರೆ. ಅಂದಹಾಗೆ, ಸಾಧು ಕೋಕಿಲ ನಿರ್ದೇಶನ ಮಾಡುತ್ತಿರುವ ಹೊಸ ಚಿತ್ರಕ್ಕೆ “ಜಾಲಿ ಲೈಫ್’ ಎಂದು ಹೆಸರಿಡಲಾಗಿದ್ದು, ಸದ್ಯ ಈ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದೆ.
ಇನ್ನು ಹೆಸರೇ ಹೇಳುವಂತೆ “ಜಾಲಿ ಲೈಫ್’ ಕಂಪ್ಲೀಟ್ ಯೂಥ್ಸ್ ಸಬ್ಜೆಕ್ಟ್ ಚಿತ್ರವಂತೆ, ಇಂದಿನ ಯೂಥ್ಸ್, ಅವರ ಲೈಫ್ಸ್ಟೈ ಲ್, ಕಾಲೇಜ್ ಮತ್ತಿತರ ವಿಷಯಗಳ ಸುತ್ತ ಇಡೀ ಚಿತ್ರ ನಡೆಯಲಿದೆ.
ಇದನ್ನೂ ಓದಿ:‘ಮುಂದುವರೆದ ಅಧ್ಯಾಯ’ ಡೈಲಾಗ್ ಟೀಸರ್ ರಿಲೀಸ್: ಕ್ರೈಂ ಕಥಾಹಂದರದ ಚಿತ್ರದಲ್ಲಿ ಆದಿತ್ಯ
ಈ ಹಿಂದೆ “ತ್ರಿಕೋನ’ ಎಂಬ ಚಿತ್ರವನ್ನು ನಿರ್ಮಿಸಿದ್ದ ರಾಜಶೇಖರ್, “ಜಾಲಿ ಲೈಫ್’ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, “ಪೊಲೀಸ್ ಪ್ರಕ್ಕಿ’ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ಚಿತ್ರದ ಬಹುತೇಕ ಪಾತ್ರಗಳಲ್ಲಿ ಹೊಸ ಪ್ರತಿಭೆಗಳೇ ಅಭಿನಯಿಸಲಿದ್ದು, ಇಲ್ಲಿಯವರೆಗೆ ಪಾತ್ರಕ್ಕಾಗಿ ರಂಗಾಯಣ, ನೀನಾಸಂ, ಟೆಂಟ್ ಸಿನಿಮಾ ಮೊದಲಾದ ಸಂಸ್ಥೆಗಳ ಮೂಲಕ ಸುಮಾರು 500 ರಿಂದ 600 ಜನರನ್ನು ಆಡಿಶನ್ ಮಾಡಲಾಗಿದೆಯಂತೆ. ಹಿರಿಯ ನಟ ಸುಚೀಂದ್ರ ಪ್ರಸಾದ್ ನೇತೃತ್ವದಲ್ಲಿ ವಿಭಿನ್ನವಾಗಿ ನಡೆದ ಆಡಿಶನ್‌ನಲ್ಲಿ ಸುಮಾರು 18 ಹೊಸ ಪ್ರತಿಭೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದಿದೆ ಚಿತ್ರತಂಡ.
ಇದನ್ನೂ ಓದಿ: ‘ಪೊಗರು’ ವೀಕ್ಷಿಸಿದ ಪ್ರಶಾಂತ್ ನೀಲ್ ಸಿನಿಮಾ ಬಗ್ಗೆ ಹೇಳಿದ್ದೇನು ?
ಉಳಿದಂತೆ “ಜಾಲಿ ಲೈಫ್’ ಚಿತ್ರವನ್ನು ನಿರ್ದೇಶಿಸುತ್ತಿರುವುದರ ಜೊತೆಗೆ ಚಿತ್ರದ ಐದು ಹಾಡುಗಳಿಗೂ ಸಾಧುಕೋಕಿಲ ಅವರೇ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣವಿದೆ. ಸದ್ಯ “ಜಾಲಿ ಲೈಫ್’ ಚಿತ್ರದ ಅಂತಿಮ ಹಂತದ ಪ್ರೀ-ಪ್ರೊಡಕ್ಷನ್ ಕೆಲಸದಲ್ಲಿರುವ ಚಿತ್ರತಂಡ, ಮಾರ್ಚ್ ತಿಂಗಳಿನಲ್ಲಿ ಚಿತ್ರದ ಮುಹೂರ್ತವನ್ನು ನೆರವೇರಿಸಿ ಚಿತ್ರೀಕರಣ ಪ್ರಾರಂಭಿಸುವ ಯೋಚನೆಯಲ್ಲಿದೆ