Advertisement

ಸಿಮೆಂಟ್‌ ಕಾರ್ಖಾನೆಗಳು ಪುನಾರಂಭ

11:33 AM Apr 24, 2020 | Naveen |

ಸೇಡಂ: ಕೋವಿಡ್ ನಿಂದ ಕಲಬುರಗಿ ತತ್ತರಿಸಿ ಹೋಗಿದೆ. ಸದ್ಯ ಸೇಫ್‌ ಝೋನ್‌ ನಲ್ಲಿರುವ ಸೇಡಂ ರೆಡ್‌ ಝೋನ್‌ ಆಗುವುದೇ? ಎಂಬ ಆತಂಕ ಈಗ ಜನರಲ್ಲಿ ಮೂಡಿದೆ. ಕಾರಣ ತಾಲೂಕಿನಲ್ಲಿರುವ ಸಿಮೆಂಟ್‌ ಕಾರ್ಖಾನೆಗಳು ಕಾರ್ಯನಿರ್ವಹಿಸಲು ಶುರು ಮಾಡಿರುವುದು. ಷರತ್ತು ಬದ್ಧವಾಗಿ ಸರ್ಕಾರ ಕಾರ್ಖಾನೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿದೆ. ಆದರೆ ಕಾರ್ಖಾನೆಗೆ ಬರುವವರು ವಿವಿಧ ರಾಜ್ಯಗಳನ್ನು ಸಂಚರಿಸುವುದರಿಂದ ಸ್ಥಳೀಯರಲ್ಲಿ ದುಗುಡ ಶುರುವಾಗಿದೆ.

Advertisement

ನಿಯಮಿತ ಸಿಬ್ಬಂದಿ ಮತ್ತು ಕೊವಿಡ್‌-19 ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ. ತಾಲೂಕಿನ ಮಳಖೇಡದ ರಾಜಶ್ರೀ ಸಿಮೆಂಟ್‌ ಕಾರ್ಖಾನೆ, ಕೋಡ್ಲಾದ ಶ್ರೀಸಿಮೆಂಟ್‌ ಈಗಾಗಲೇ ಸಿಮೆಂಟ್‌ ತಯಾರಿಕೆ ಮತ್ತು ಸರಬರಾಜಿನಲ್ಲಿ ತೊಡಗಿವೆ. ಇನ್ನು ಬಿರ್ಲಾ ಒಡೆತನದ ವಾಸವದತ್ತಾ ಸಿಮೆಂಟ್‌ ಕಾರ್ಯಾರಂಭ ಮಾಡುವ ತವಕದಲ್ಲಿದೆ. ಸಿಮೆಂಟ್‌ ಕಾರ್ಖಾನೆಗಳಿಂದ ಸಿಮೆಂಟ್‌ ಹೊತ್ತೂಯ್ಯುವ ಲಾರಿ ಮತ್ತು ಟ್ಯಾಂಕರ್‌ಗಳು ವಿವಿಧ ರಾಜ್ಯಗಳನ್ನು ಸಂಚರಿಸುವುದು ಸಾಮಾನ್ಯ. ಅದರಲ್ಲೂ ಹೆಚ್ಚಿನ ಕೊರೊನಾ ಪ್ರಕರಣಗಳಿರುವ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೆಚ್ಚಿನ ಮಾರುಕಟ್ಟೆ ಹೊಂದಿವೆ. ಇದರಿಂದ ಲಾರಿ ಚಾಲಕರು ವಿವಿಧ ರಾಜ್ಯಗಳಲ್ಲಿ ಸಂಚರಿಸಿ ಸೋಂಕು ಹೊತ್ತು ತರುವರೇ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ. ಆದರೆ ಕೆಲ ಕಾರ್ಖಾನೆಗಳಲ್ಲಿ ಸಾಮಾಜಿಕ ಅಂತರ ಮರೆಯಾಗಿದ್ದು, ಈಗ ತಾಲೂಕು ಆಡಳಿತದ ಕೆಂಗಣ್ಣಿಗೆ ಗುರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next