Advertisement

ಕಾಂಗ್ರೆಸ್, ಬಿಜೆಪಿ ಬಗ್ಗೆ ಕ್ಷೇತ್ರದಲ್ಲಿ ಬೇಸರವಿದೆ : ಕುಷ್ಟಗಿ ಜೆಡಿಎಸ್ ಅಭ್ಯರ್ಥಿ ತುಕಾರಾಮ್

07:51 PM Dec 19, 2022 | Team Udayavani |

ಕುಷ್ಟಗಿ:ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಬಗ್ಗೆ ಬೇಸರವಿದೆ ಆದರೂ ತೋರಿಸಿಕೊಂಡು ನಿಷ್ಟುರ ಕಟ್ಟಿಕೊಳ್ಳುತ್ತಿಲ್ಲ ಎಂದು ಕುಷ್ಟಗಿ ವಿಧಾಸಭೆ ಜೆಡಿಎಸ್ ಅಧಿಕೃತ ಅಭ್ಯರ್ಥಿ ತುಕಾರಾಮ್ ಸುರ್ವೆ ಹೇಳಿದರು.

Advertisement

ಜೆಡಿಎಸ್ ಪಕ್ಷದ ಶಾಸಕಾಂಗ ಪಕ್ಷದ ನಾಯಕ ವಿಧಾನಸಭಾ ಕ್ಷೇತ್ರವಾರು ಪ್ರಕಟಿಸಿದ ಅಧಿಕೃತ 93 ಅಭ್ಯರ್ಥಿಗಳ ಪಟ್ಟಿಯಲ್ಲಿ, ಕುಷ್ಟಗಿ ಕ್ಷೇತ್ರದಿಂದ ತುಕಾರಾಮ್ ಸುರ್ವೆ ಅವರಿಗೆ ಅವಕಾಶ ಸಿಕ್ಕಿರುವ ಹಿನ್ನೆಲೆಯಲ್ಲಿ ಸಂತಸ ಹಂಚಿಕೊಂಡರು. ನಾನು 1994ರಿಂದಲೂ ಜನತಾ ಪರವಾರದಿಂದ ಇದ್ದೇನೆ. ಆಗ ನನಗೆ ರಾಜಕೀಯ ಗುರು ಮಾಜಿ ಶಾಸಕ ಕೆ.ಶರಣಪ್ಪ ಆಗಿದ್ದು, ಅವರು ಜೆಡಿಎಸ್ ಬಿಟ್ಟು ಬಿಜೆಪಿ ಸೇರಿದ್ದರೂ, ನಾನೂ ಜೆಡಿಎಸ್ ನಲ್ಲಿ ಇದ್ದೇನೆ. ಈ ಬಾರಿ ಕುಷ್ಟಗಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದು, ಮಾಜಿ ಸಿಎಂ ನನಗೆ ಪಕ್ಷದ ಟಿಕೆಟ್ ನೀಡುವುದು ಖಾತ್ರಿಯಾಗಿತ್ತು. ಅಂತೆಯೇ ಕುಷ್ಟಗಿ ವಿಧಾನಸಭೆಗೆ ನನ್ನನ್ನು ಅಧಿಕೃತ ಅಭ್ಯರ್ಥಿ ಎಂದು ಪ್ರಕಟಿಸಿದ್ದಾರೆ. ಈಗಾಗಲೇ ಕಳೆದ 23 ದಿನಗಳಿಂದ ಕುಷ್ಟಗಿ ತಾಲೂಕಿನಾದ್ಯಂತ ಪಂಚರತ್ನ ರಥಯಾತ್ರೆ 130 ಗ್ರಾಮಗಳಲ್ಲಿ ಸಂಚರಿಸಿದೆ. ಇನ್ನೂ 8ರಿಂದ 10ಗ್ರಾಮಗಳು ಉಳಿದಿವೆ ಎಂದರು.

ರಥಯಾತ್ರೆಯ ಸಂಚಾರದ ವೇಳೆ ಜನರು, ಕುಮಾರಸ್ವಾಮಿ ಸರ್ಕಾರದ ಸಾಲಮನ್ನಾ ಯೋಜನೆಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಜನರಿಗೆ ಬಿಜೆಪಿ, ಕಾಂಗ್ರೆಸ್ ಬಗ್ಗೆ ಬೇಸರ ವ್ಯಕ್ತವಾಗಿದ್ದು, ಹಣ, ಜಾತಿ ಪ್ರಭಾವ, ಪ್ರಾಬಲ್ಯ ದ ರಾಷ್ಟ್ರೀಯ ಪಕ್ಷಗಳ ಪೈಪೋಟಿಯಲ್ಲಿ ಮೂರನೇಯವರಿಗೆ ಮನ್ನಣೆ ನೀಡುವ ವಿಶ್ವಾಸದಿಂದಲೇ ಸ್ಪರ್ಧಿಸಿರುವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next