Advertisement
ಅಲ್ಲಿದ್ದ ಸಚಿನ್ ತೆಂಡುಲ್ಕರ್ ಅವರ ಹಸ್ತಾಕ್ಷರ ಪಡೆಯಲು, ಅವರ ಕೈಕುಲುಕಿ ಸಂಭ್ರಮಿಸಲು ಸಾಕಷ್ಟು ಮಕ್ಕಳು ಸೇರಿದ್ದರು. ಕಡೆಗೊಮ್ಮೆ ಅಭ್ಯಾಸ ಮುಗಿಯುತ್ತಿದ್ದಂತೆಯೇ, ಮಕ್ಕಳೆಲ್ಲ ತೆಂಡುಲ್ಕರ್ ಅವರನ್ನು ಸುತ್ತುವರಿದರು. ಕೆಲವರು ಹಸ್ತಾಕ್ಷರ ಪಡೆದರು. ಈ ಮಧ್ಯೆಯೇ, ತೆಂಡುಲ್ಕರ್ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಬಾಲಕನೊಬ್ಬ ಅವರ ಕಾಲಿಗೆ ಬೀಳಲು ಮುಂದಾದ. ತಕ್ಷಣ ಆತನನ್ನು ತಡೆದ ತೆಂಡುಲ್ಕರ್ ಹೇಳಿದ್ದು: “ಹಾಗೆಲ್ಲ, ಯಾರ ಕಾಲಿಗೂ ಬೀಳಬಾರದು. ಕಾಲಿಗೆ ಬೀಳಲೇಬೇಕು ಅಂದರೆ, ಮನೆಗೆ ಹೋಗಿ, ಅಲ್ಲಿರುವ ತಾಯಿ ತಂದೆಯ ಕಾಲು ಮುಟ್ಟಿ ನಮಸ್ಕರಿಸಿ. ಹೆತ್ತವರಿಗಿಂತ ದೊಡ್ಡವರು, ಅವರಿಗಿಂತ ಶ್ರೇಷ್ಠರು ಈ ಜಗತ್ತಿನಲ್ಲಿ ಯಾರೂ ಇಲ್ಲ’ ಎಂದರು. Advertisement
“ಅಪ್ಪ-ಅಮ್ಮನಿಗೆ ನಮಸ್ಕಾರ ಮಾಡಿ’
12:03 AM Feb 13, 2020 | Sriram |
Advertisement
Udayavani is now on Telegram. Click here to join our channel and stay updated with the latest news.