Advertisement

ವಿಡಿಯೋ : ಕೊರೊನಾ ಪರೀಕ್ಷೆ ವೇಳೆ ವೈದ್ಯರಿಗೆ ಪ್ರಾಂಕ್ ಮಾಡಿದ ಸಚಿನ್..!

03:51 PM Mar 09, 2021 | Team Udayavani |

ನವದೆಹಲಿ : ಸಚಿನ್ ತೆಂಡೂಲ್ಕರ್ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಆಗಾಗ ತಮಾಷೆ ಮಾಡುತ್ತ ಆನಂದಿಸುತ್ತಾರೆ. ಇದೀಗ ವೈದ್ಯಕೀಯ ಸಿಬ್ಬಂದಿಯನ್ನೇ ಪ್ರಾಂಕ್ ಮಾಡಿದ್ದು, ಅದನ್ನು ತಮ್ಮ ಸೋಷಿಯಕ್ ಮೀಡಿಯಾದಲ್ಲಿ ಶೇರ್ ಮಾಡಿ ಖುಷಿಪಟ್ಟಿದ್ದಾರೆ. .

Advertisement

ಸದ್ಯ ಸಚಿನ್ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ ಸ್ಕ್ವಾಡ್ ತಂಡದ ಪರವಾಗಿ ಆಡುತ್ತಿದ್ದಾರೆ. ಆಟ ಶುರುವಾಗುವುದಕ್ಕೂ ಮುಂಚೆ ಸಚಿನ್ ಗೆ ವೈದ್ಯಕೀಯ ಸಿಬ್ಬಂದಿ ಕೊರೊನಾ ಪರೀಕ್ಷೆ ಮಾಡಿದ್ದು ಈ ವೇಳೆ ಪ್ರಾಂಕ್ ಮಾಡಿದ್ದಾರೆ.

ವೈದ್ಯರು ಸಚಿನ್ ಅವರ ಗಂಟಲು ಮತ್ತು ಮೂಗಿನ ದ್ರವ ಪರೀಕ್ಷೆ ಮಾಡಿದ್ದಾರೆ. ಪರೀಕ್ಷೆ ವೇಳೆ ಸಚಿನ್ ಮೂಗಿಗೆ ಪರೀಕ್ಷೆ ಮಾಪನ ಇಡುತ್ತಿದ್ದಂತೆ ಆಕ್ಷಿ ಎಂದು ಸೀನಿದ್ದಾರೆ. ನಂತ್ರ ಅಲ್ಲೆ ಇದ್ದ ವೈದ್ಯರು ಕೊಂಚ ಹಿಂದಕ್ಕೆ ಸರಿದಿದ್ದು ನಂತ್ರ ಸಚಿನ್ ನಕ್ಕಿದ್ದಾರೆ.

ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, 200 ಟೆಸ್ಟ್  ಪಂದ್ಯಗಳನ್ನು ಆಡಿದ್ದೇನೆ ಹಾಗೂ 277 ಬಾರಿ ಕೊರೊನಾ ಟೆಸ್ಟ್ ಮಾಡಿಸಿಕೊಂಡಿದ್ದೇನೆ. ಇದೊಂದು ಸಣ್ಣ ಪ್ರಾಂಕ್ ಸಮಯ ಎಂದು ಬರೆದಿದ್ದಾರೆ.

ಕಳೆದ ವರ್ಷ ಕೊರೊನಾ ಕಾರಣದಿಂದ ರೋಡ್ ಸೇಫ್ಟಿ ಸಿರೀಸ್ ಸ್ಥಗಿತಗೊಂಡಿತ್ತು. ಆ ಸರಣಿಯನ್ನು ಇದೇ ಮಾರ್ಚ್ ನಿಂದ ಪ್ರಾರಂಭಿಸಲಾಗಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next