Advertisement

1999-2000ದ ರಣಜಿ ಸೆಮಿಫೈನಲ್‌ ತೆಂಡುಲ್ಕರ್‌ ಪಾಲಿನ ಸ್ಮರಣೀಯ ಪಂದ್ಯ

07:00 AM Nov 10, 2017 | Team Udayavani |

ಮುಂಬಯಿ: ಪ್ರತಿಯೋರ್ವ ಕ್ರಿಕೆಟಿಗನ ಪಾಲಿಗೂ ಸ್ಮರಣೀಯವೆನಿಸಿದ, ಅಚ್ಚಳಿಯದ ನೆನಪಾಗಿ ಉಳಿದಿರುವ ಪಂದ್ಯ ವೊಂದು ಇದ್ದೇ ಇರುತ್ತದೆ. ಇದಕ್ಕೆ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡುಲ್ಕರ್‌ ಕೂಡ ಹೊರತಲ್ಲ. 1999-2000ದ ಸಾಲಿನ ತಮಿಳುನಾಡಿನ ರಣಜಿ ಟ್ರೋಫಿ ಸೆಮಿಫೈನಲ್‌ ತನ್ನ ಪಾಲಿನ ಸ್ಮರಣೀಯ ಪಂದ್ಯ ಎಂಬುದಾಗಿ ಅವರು ಹೇಳಿದ್ದಾರೆ.

Advertisement

“ರಣಜಿ ಕಿಂಗ್‌ ಮುಂಬಯಿ’ ತನ್ನ 500ನೇ ಪಂದ್ಯವಾಡುತ್ತಿರುವ ಸಂದರ್ಭದಲ್ಲಿ ಬುಧವಾರ ಏರ್ಪ ಡಿಸಲಾದ ಮುಂಬಯಿ ಕ್ರಿಕೆಟ್‌ ನಾಯಕರ ಸಮ್ಮಾನ ಸಮಾರಂಭದ ವೇಳೆ ತೆಂಡುಲ್ಕರ್‌ ಗತಕಾಲಕ್ಕೆ ಜಾರಿದರು.

“ತಮಿಳುನಾಡು ವಿರುದ್ಧ ಆಡಲಾದ 1999- 2000ದ ಋತುವಿನ ರಣಜಿ ಟ್ರೋಫಿ ಸೆಮಿಫೈನಲ್‌ ನನ್ನ ಪಾಲಿನ ಸ್ಮರಣೀಯ ಪಂದ್ಯ’ ಎಂದು ತೆಂಡುಲ್ಕರ್‌ ಹೇಳಿಕೊಂಡರು. ಆ ಪಂದ್ಯದಲ್ಲಿ ದ್ವಿಶತಕ ಬಾರಿಸಿದ ತೆಂಡುಲ್ಕರ್‌, ಪಂದ್ಯದ ಕೆಲವು ಕ್ಷಣಗಳನ್ನೂ ನೆನಪಿಸಿಕೊಂಡರು.

“ನಾನ್‌ ಸ್ಟ್ರೈಕಿಂಗ್‌ ತುದಿಯಲ್ಲಿದ್ದಾಗ ನಾನು ಕ್ರೀಸಿನ ಹೊರಗಡೆ ನಿಂತಿದ್ದೆ. ಇದನ್ನು ಹೇಮಾಂಗ್‌ ಬದನಿ ಬೌಲರ್‌ ಗಮನಕ್ಕೆ ತಂದರು. ಇದನ್ನು ಕೇಳಿದ ನಾನು, ಬೌಲರ್‌ ರನ್‌-ಅಪ್‌ ಆರಂಭಿಸುವಷ್ಟರಲ್ಲಿ ಕ್ರೀಸಿನೊಳಗೆ ಬಂದೆ. ಪಂದ್ಯದ ಬಳಿಕ ನಾನು ಬದನಿ ಬಳಿ ಹೋಗಿ, ನನಗೂ ತಮಿಳು ಅರ್ಥವಾಗುತ್ತದೆ ಎಂದು ತಮಾಷೆ ಮಾಡಿದೆ…’ 
ಎಂಬುದಾಗಿ ಅಂದಿನ ವಿದ್ಯಮಾನವನ್ನು ನಗುತ್ತ ಹೇಳಿದರು.

ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ತಮಿಳು ನಾಡಿನ 485 ರನ್ನುಗಳ ಮೊದಲ ಇನ್ನಿಂಗ್ಸಿಗೆ ಉತ್ತರವಾಗಿ ಮುಂಬಯಿ 490 ರನ್‌ ಪೇರಿಸಿ ಮುನ್ನಡೆ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಇದರಲ್ಲಿ ತೆಂಡುಲ್ಕರ್‌ ಪಾಲು 233 ರನ್‌. ಈ ಪಂದ್ಯವನ್ನು 8 ವಿಕೆಟ್‌ಗಳಿಂದ ಗೆದ್ದ ಮುಂಬಯಿ, ಫೈನಲ್‌ನಲ್ಲಿ ಹೈದರಾಬಾದನ್ನು ಮಣಿಸಿ ಚಾಂಪಿಯನ್‌ ಆಗಿತ್ತು. “ಮುಂಬಯಿ ರಣಜಿ ತಂಡ ದೇಶಕ್ಕೆ ಸಾಕಷ್ಟು ಮಂದಿ ಶ್ರೇಷ್ಠ ಕ್ರಿಕೆಟಿಗರನ್ನು ನೀಡಿದೆ. ರಣಜಿ ಪಂದ್ಯಗಳ ಮೂಲಕವೇ ದೇಶದ ಅತ್ಯುತ್ತಮ ಕ್ರಿಕೆಟಿಗರ ಜತೆ ಆಡುವ ಅವಕಾಶ ನಮಗೆಲ್ಲ ಸಿಕ್ಕಿತು’ ಎಂದೂ ಸಚಿನ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next