Advertisement

ಸಚಿನ್ ಸ್ಪೆಷಲ್: ಇವು ತೆಂಡೂಲ್ಕರ್ ರ ಐದು ಮಾಸ್ಟರ್ ಕ್ಲಾಸ್ ಏಕದಿನ ಇನ್ನಿಂಗ್ಸ್ ಗಳು

12:40 PM Apr 24, 2021 | Team Udayavani |

ಕ್ರಿಕೆಟ್ ದೇವರು, ಕ್ರಿಕೆಟ್ ದಂತಕಥೆ, ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಚಿಗುರು ಮೀಸೆಯ ಹುಡುಗನಾಗಿ ಕ್ರಿಕೆಟ್ ಅಂಗಳಕ್ಕೆ ಕಾಲಿಟ‍್ಟ ಸಚಿನ್ ರಮೇಶ್ ತೆಂಡೂಲ್ಕರ್ ಎರಡು ದಶಕಗಳ ಕಾಲ ವಿಶ್ವಕ್ರಿಕೆಟ್ ನ ದೊರೆಯಾಗಿ ಮೆರೆದವರು. ಮುಂಬೈಕರ್ ನ 48ನೇ ಬರ್ತ್ ಡೇ ಗಾಗಿ ಅವರು ಆಡಿದ ಐದು ಮಾಸ್ಟರ್ ಕ್ಲಾಸ್ ಏಕದಿನ ಇನ್ನಿಂಗ್ಸ್ ಗಳ ವಿವರಣೆ ಇಲ್ಲಿದೆ.

Advertisement

ಆಸೀಸ್ ವಿರುದ್ಧ 143 ರನ್- 1998

ಡೆಸರ್ಟ್ ಸ್ಟಾರ್ಮ್ ಇನ್ನಿಂಗ್ಸ್ ಎಂದು ಪ್ರಸಿದ್ದಿ ಪಡೆದ ಇನ್ನಿಂಗ್ಸ್ ಇದು. ಸಚಿನ್ ಆಡಿದ ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಗಳಲ್ಲಿ ಇದೂ ಒಂದು. ಶಾರ್ಜಾದಲ್ಲಿ ನಡೆದ ಈ ಪಂದ್ಯದಲ್ಲಿ ಬಲಿಷ್ಠ ಆಸೀಸ್ ಬೌಲರ್ ಗಳ ಎಸೆತಗಳನ್ನು ಸಚಿನ್ ಧೂಳಿಪಟ ಮಾಡಿದ್ದರು. 131 ಎಸೆತಗಳನ್ನು ಎದುರಿಸಿದ್ದ ಸಚಿನ್ 143 ರನ್ ಬಾರಿಸಿದ್ದರು. 9 ಬೌಂಡರಿ ಮತ್ತು ಐದು ಸಿಕ್ಸರ್ ಗಳನ್ನು ಸಚಿನ್ ಅಂದು ಸಿಡಿಸಿದ್ದರು. ಆದರೆ ಸಚಿನ್ ಔಟಾಗುತ್ತಿದ್ದಂತೆ ತಂಡ ಕುಸಿತ ಕಂಡಿತು. ಪಂದ್ಯದಲ್ಲಿ ಭಾರತ ಸೋಲನುಭವಿಸಿತ್ತು.

ಪಾಕಿಸ್ಥಾನ ವಿರುದ್ಧ 93 ರನ್-    2003

ದಕ್ಷಿಣ ಆಫ್ರಿಕಾದಲ್ಲಿ ನಡೆದ 2003ರ ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ನಡೆದ ಪಂದ್ಯವಿದು. ಶೋಯೆಬ್ ಅಕ್ತರ್, ವಾಖರ್ ಯೂನಿಸ್, ವಾಸಿಂ ಅಕ್ರಮ್ ರಂತಹ ಬಲಿಷ್ಠ ಬೌಲಿಂಗ್ ಪಡೆಯನ್ನು ಹೊಂದಿತ್ತು ಪಾಕಿಸ್ಥಾನ. ಈ ವೇಗದ ಕೋಟೆಯನ್ನು ಪುಡಿಪುಡಿ ಮಾಡಿದ ಸಚಿನ್ ಬೌಂಡರಿ ಸುರಿಮಳೆಗರೆದರು. ಶೋಯೆಬ್ ಅಕ್ತರ್ ಓವರ್ ನಲ್ಲಿ ಸಾಲು ಸಾಲು ಬೌಂಡರಿ ಬಾರಿಸಿದ ಸಚಿನ್ ನಂತರ 75 ಎಸೆತಗಳಲ್ಲಿ 93 ರನ್ ಬಾರಿಸಿದ್ದ ವೇಳೆ ಅಕ್ತರ್ ಎಸೆತದಲ್ಲೇ ಔಟಾದರು. ಭಾರತ ಈ ಪಂದ್ಯವನ್ನು ಜಯಿಸಿತ್ತು.

Advertisement

ದಕ್ಷಿಣ ಆಫ್ರಿಕಾ ವಿರುದ್ಧ ದ್ವಿಶತಕ- 2010

ಏಕದಿನ ಕ್ರಿಕೆಟ್ ನಲ್ಲಿ ದಾಖಲಾದ ಮೊತ್ತ ಮೊದಲ ದ್ವಿಶತಕ ಬಾರಿಸಿದವರು ಸಚಿನ್ ತೆಂಡೂಲ್ಕರ್. ದಕ್ಷಿಣ ಆಫ್ರಿಕಾ ವಿರುದ್ಧ ಗ್ವಾಲಿಯರ್ ನಲ್ಲಿ ನಡೆದ ಪಂದ್ಯದಲ್ಲಿ ಸಚಿನ್ ವಿಶ್ವ ದಾಖಲೆ ಬರೆದರು. ಡೇಲ್ ಸ್ಟೇನ್, ಮಾರ್ನೆ ಮಾರ್ಕೆಲ್ ರಂತಹ ವೇಗಿಗಳ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಸಚಿನ್ ಕೇವಲ 147 ಎಸೆತಗಳಲ್ಲಿ 200 ರನ್ ಬಾರಿಸಿದ್ದರು. ಪಂದ್ಯದಲ್ಲಿ ಭಾರತ 153 ರನ್ ಅಂತರದಿಂದ ಗೆಲುವು ಕಂಡಿತ್ತು.

ಆಸೀಸ್‍ ವಿರುದ್ಧ 134 ರನ್ -1998

ಡೆಸರ್ಟ್ ಸ್ಟಾರ್ಮ್ ಇನ್ನಿಂಗ್ಸ್ ನ ಎರಡು ದಿನ ನಂತರದ ಪಂದ್ಯವಿದು. ಶಾರ್ಜಾ ಕಪ್ ನ ಫೈನಲ್ ಪಂದ್ಯ. ಎದುರಾಳಿ ಮತ್ತದೆ ಆಸೀಸ್ ತಂಡ. ಆಸೀಸ್ ಬೌಲರ್ ಗಳನ್ನು ಬೆಂಡೆತ್ತಿದ ಸಚಿನ್ ಮತ್ತೊಂದು ಆಕರ್ಷಕ ಶತಕ ಬಾರಿಸಿದರು. 134 ಎಸತ ಎದುರಿಸಿದ ಸಚಿನ್ 131 ರನ್ ಬಾರಿಸಿದ್ದರು. ಆದರೆ ಈ ಬಾರಿ ಅವರ ಶತಕ ವ್ಯರ್ಥವಾಗಲಿಲ್ಲ. ಭಾರತ ಆರು ವಿಕೆಟ್ ಅಂತರದಿಂದ ಕಾಂಗರೂಗಳನ್ನು ಮಣಿಸಿತ್ತು.

ಕಿವೀಸ್ ವಿರುದ್ಧ 82 ರನ್: 1994

ಇದು ಆರಂಭಿಕನಾಗಿ ಸಚಿನ್ ತೆಂಡೂಲ್ಕರ್ ಆಡಿದ ಮೊದಲ ಪಂದ್ಯ. ಯುವ ಸಚಿನ್ ಕಿವೀಸ್ ವಿರುದ್ಧ ಅಬ್ಬರಿಸಿದ್ದರು. ಕೇವಲ 49 ಎಸೆತ ಎದುರಿಸಿದ ಸಚಿನ್ 82 ರನ್ ಗಳಿಸಿದ್ದರು. ಈ ಸಿಡಿಲಬ್ಬರದ ಇನ್ನಿಂಗ್ಸ್ ನಲ್ಲಿ ಸಚಿನ್ 15 ಬೌಂಡರಿ ಮತ್ತು ಎರಡು ಭರ್ಜರಿ ಸಿಕ್ಸರ್ ಬಾರಿಸಿದ್ದರು. ಪಂದ್ಯದಲ್ಲಿ ಭಾರತ ಎಳು ವಿಕೆಟ್ ಅಂತರದ ಜಯ ಸಾಧಿಸಿತ್ತು.

ಇದನ್ನೂ ಓದಿ:ರಾಜಸ್ಥಾನ್‌ ರಾಯಲ್ಸ್‌ ಗೆ ಆಘಾತ : ಈ ಬಾರಿಯ IPLನಿಂದ ಜೋಫ್ರಾ ಆರ್ಚರ್ ಹೊರಗೆ

Advertisement

Udayavani is now on Telegram. Click here to join our channel and stay updated with the latest news.

Next