Advertisement

ಲಾರ್ಡ್ಸ್‌ ಗಂಟೆ ಬಾರಿಸಲಿಲ್ಲ ಸಚಿನ್‌ ತೆಂಡುಲ್ಕರ್‌ 

06:55 AM Aug 10, 2018 | |

ಲಂಡನ್‌: ಐತಿಹಾಸಿಕ ಲಾರ್ಡ್ಸ್‌ನಲ್ಲಿ ದಿನದ ಪಂದ್ಯದ ಆರಂಭವನ್ನು ಗಂಟೆ ಬಾರಿಸುವ ಮೂಲಕ ಸಾರುವುದೊಂದು ಸಂಪ್ರದಾಯ. ಭಾರತ-ಇಂಗ್ಲೆಂಡ್‌ ನಡುವಿನ ಮೊದಲ ದಿನದಾಟದ ಈ ಗೌರವ ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡುಲ್ಕರ್‌ಗೆ ಲಭಿಸಿತ್ತು. ಆದರೆ ಮಳೆಯಿಂದಾಗಿ ಆಟ ಆರಂಭವಾಗದೇ ಇದ್ದುದರಿಂದ ಸದ್ಯ ಸಚಿನ್‌ಗೆ ಈ ಅವಕಾಶ ತಪ್ಪಿದೆ.

Advertisement

ಟೆಸ್ಟ್‌ ಪಂದ್ಯದ ಐದೂ ದಿನಗಳ ಕಾಲ ಖ್ಯಾತ ಮಾಜಿ ಕ್ರಿಕೆಟಿಗರಿಗೆ ಈ ಅವಕಾಶ ಸಿಗುತ್ತದೆ. ಈ ಪಂದ್ಯದ 3ನೇ ದಿನಗಂಟೆ ಹೊಡೆಯುವ ಅವಕಾಶ ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಅವರಿಗೆ ದೊರೆತಿದೆ.

ಪಂದ್ಯದ 2ನೇ ದಿನ ಇಂಗ್ಲೆಂಡಿನ ಮಾಜಿ ಆಲ್‌ರೌಂಡರ್‌, 82ರ ಹರೆಯದ ಟೆಡ್‌ ಡೆಕ್ಸ್‌ಟರ್‌, 4ನೇ ದಿನ ಇಂಗ್ಲೆಂಡ್‌ ವನಿತಾ ಕ್ರಿಕೆಟಿನ ಖ್ಯಾತ ವೇಗಿ ಅನ್ಯಾ ಶ್ರಬೊಲ್‌ ಅವರನ್ನು ಗಂಟೆ ಬಾರಿಸಲು ಆರಿಸಲಾಗಿದೆ. ಲಾರ್ಡ್ಸ್‌ ಕಚೇರಿಯ ಆಡಳಿತಾಧಿಕಾರಿ ಹ್ಯೂಗೊ ಬರ್ನಾರ್ಡ್‌ ಈ ಯಾದಿಯನ್ನು ಬಿಡುಗಡೆ ಮಾಡಿದರು. ಆದರೆ 5ನೇ ದಿನ ಗಂಟೆ ಬಾರಿಸುವ ಆಟಗಾರ ಯಾರೆಂಬುದು ಇನ್ನೂ ಅಂತಿಮಗೊಂಡಿಲ್ಲ. ಮೊದಲ ದಿನ ಗಂಟೆ ಬಾರಿಸದ ಸಚಿನ್‌ಗೆ ಮರಳಿ ಅವಕಾಶ ಲಭಿಸುವ ಸಾಧ್ಯತೆ ಇದೆ. ಈಗಾಗಲೇ ಭಾರತದ ಸುನೀಲ್‌ ಗಾವಸ್ಕರ್‌, ಮನ್ಸೂರ್‌ ಅಲಿ ಖಾನ್‌ ಪಟೌಡಿ, ದಿಲೀಪ್‌ ವೆಂಗ್‌ ಸರ್ಕಾರ್‌, ರಾಹುಲ್‌ ದ್ರಾವಿಡ್‌, ಕಪಿಲ್‌ದೇವ್‌ ಮತ್ತು ಸೌರವ್‌ ಗಂಗೂಲಿ ಲಾರ್ಡ್ಸ್‌ನಲ್ಲಿ ಗಂಟೆ ಬಾರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next