Advertisement

ಪುರೋಹಿತ್‌ ಪ್ರೇಮ ಪುರಾಣ ‘ಸಿಂಧೂರ’ ಕಾವ್ಯ

04:53 PM May 20, 2022 | Team Udayavani |

ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಸಿಂಧೂರ’ ಚಿತ್ರ ತೆರೆಗೆ ಬರಲು ಸಿದ್ಧªವಾಗಿದೆ. ಈಗಾಗಲೇ ಬಿಡುಗಡೆಯಾಗಿರುವ “ಸಿಂಧೂರ’ ಚಿತ್ರದ ಟೀಸರ್‌, ಹಾಡುಗಳಿಗೆ ಪ್ರೇಕ್ಷಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ, ಮೇ ಅಂತ್ಯಕ್ಕೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

Advertisement

ಇನ್ನು “ಸಿಂಧೂರ’ ಚಿತ್ರದ ಮೂಲಕ ಯುವನಟ ಸಚಿನ್‌ ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ. “ಸಿಂಧೂರ’ ಚಿತ್ರದಲ್ಲಿ ತೆರೆಮೇಲೆ ನಾಯಕನಾಗಿರುವ ಸಚಿನ್‌ ಪುರೋಹಿತ್‌, ತೆರೆಹಿಂದೆ ನಿರ್ದೇಶಕನಾಗಿ “ಡಬಲ್‌ ರೋಲ್‌’ನಲ್ಲಿ ಕಾಣಿಸಿಕೊಂಡಿ ದ್ದಾರೆ.

“ಇದೊಂದು ಟ್ರೈಯಂಗಲ್‌ ಲವ್‌ಸ್ಟೋರಿ ಸಿನಿಮಾ. ಇದರಲ್ಲಿ ಲವ್‌, ರೊಮ್ಯಾನ್ಸ್‌, ಆ್ಯಕ್ಷನ್‌, ಸೆಂಟಿಮೆಂಟ್‌, ಒಳ್ಳೆಯ ಹಾಡುಗಳು ಎಲ್ಲವೂ ಇದೆ. ಇಂದಿನ ಜನರೇಶನ್‌ಗೆ ಸಬೆjಕ್ಟ್ ಇಟ್ಟುಕೊಂಡು, ಅದನ್ನು ಎಲ್ಲ ವರ್ಗದ ಆಡಿಯನ್ಸ್‌ಗೂ ಇಷ್ಟವಾಗುವಂತೆ ಸಿನಿಮಾದಲ್ಲಿ ಹೇಳಿದ್ದೇವೆ’ ಎಂದು ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ನೀಡುತ್ತಾರೆ ನಾಯಕ ಕಂ ನಿರ್ದೇಶಕ ಸಚಿನ್‌ ಪುರೋಹಿತ್‌.

ಇದನ್ನೂ ಓದಿ:ರಾಜಸ್ಥಾನ ರಾಯಲ್ಸ್ ವಿರುದ್ಧ ಕೊನೆಯ ಐಪಿಎಲ್ ಪಂದ್ಯವಾಡುತ್ತಾರೆಯೇ ಎಂ.ಎಸ್.ಧೋನಿ?

“ಸಿಂಧೂರ’ ಚಿತ್ರಕ್ಕೆ ನಾಯಕ ನಟ ಸಚಿನ್‌ ಪುರೋಹಿತ್‌ ತಂದೆ ಮತ್ತು ಹಿರಿಯ ನಟ ರಾಮ್‌ ಪುರೋಹಿತ್‌ ಕಥೆ ಬರೆದಿದ್ದು, ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ತೆರೆಮೇಲೂ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಾಯಕ ಸಚಿನ್‌ ಪುರೋಹಿತ್‌ಗೆ, ನಿವಿಕ್ಷಾ ನಾಯ್ಡು, ಸುರಕ್ಷಿತಾ ಶೆಟ್ಟಿ ನಾಯಕಿಯರಾಗಿ ತೆರೆಮೇಲೆ ಜೋಡಿಯಾಗಿದ್ದಾರೆ.

Advertisement

ಉಳಿದಂತೆ ದಯಾನಂದ್‌ ನೀನಾಸಂ, ಚೇತನ್‌ ಸೂರ್ಯ, ಬ್ಯಾಂಕ್‌ ಜನಾರ್ಧನ್‌, ಶ್ರೀವಿಷ್ಣು, ವೇದ್‌ ಈಗಲ್‌, ರಾಮ್‌ ಪುರೋಹಿತ್‌, ರೇಖಾ ದಾಸ್‌, ಅರುಣ್‌ ದೇವಸ್ಯ, ಜ್ಯೋತಿ ಮುರೂರು, ಉಮಾಶಂಕರ್‌, ಮಮತಾ, ನಿಹಾಲ್‌, ಶಿವಾನಿ ಮೊದಲಾದವರು “ಸಿಂಧೂರ’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next