Advertisement
ಈ ಬಾರಿ ಈ ಸಂಘದ ಎಂಟನೇ ಆಖ್ಯಾನ “ಭಾರ್ಗವ ವಿಜಯ’ ಮಂಗಳೂರಿನ ಪುರಭವನದಲ್ಲಿ ಮಾರ್ಚ್ 26ರಂದು ನಡೆಯಿತು. ಈ ಸಂದರ್ಭದಲ್ಲಿ ಯಕ್ಷ ಕಲಾವಿದರಾದ ಸಚ್ಚಿದಾನಂದ ಪ್ರಭು ಅಜೇರ್ ಮತ್ತು ಪ್ರಕಾಶ್ ನಾಯಕ್ ನೀರ್ಚಾಲು ಇವರಿಗೆ “ಕೊಂಕಣಿ ಯಕ್ಷರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಚ್ಚಿದಾನಂದ ಪ್ರಭು ಅಜೇರ್ ಹಾಸ್ಯ ಕಲಾವಿದ ಹಾಗೂ ಸಮರ್ಥ ಅರ್ಥಧಾರಿ. 14ನೇ ವಯಸ್ಸಿನಿಂದ ಗುರು ಮುದುಕುಂಜ ವಾಸುದೇವ ಪ್ರಭುರಿಂದ ನಾಟ್ಯ ಕಲಿಯಲಾರಂಭಿಸಿದರು. ಆಮೇಲೆ ನಯನ ಕುಮಾರ್ ಮುಖಾಂತರ ಹಾಸ್ಯ ಪಾತ್ರಕ್ಕೆ ಪ್ರವೇಶ. ಪುಂಡು,ಕಿರೀಟ,ಬಣ್ಣದ ವೇಷಕ್ಕೂ ಸೈ ಎನಿಸಿದ್ದಾರೆ. ಯಕ್ಷವೃತ್ತಿಯೊಂದಿಗೆ ಮುದ್ರಣಾಲಯವನ್ನೂ ನಡೆಸುತ್ತಿದ್ದಾರೆ. ಯಕ್ಷ ಪುಸ್ತಕಗಳ ಸಂಗ್ರಹ ಇವರ ಹವ್ಯಾಸ. 300ಕ್ಕೂ ಅಧಿಕ ಅಧ್ಯಯನ ಯೋಗ್ಯ ಮತ್ತು ಸಂಗ್ರಹ ಯೋಗ್ಯ ಯಕ್ಷ ಪುಸ್ತಕಗಳು ಇವರ ಪುಸ್ತಕ ಭಂಡಾರದಲಿವೆ. ಭಗವತಿ, ಬಪ್ಪನಾಡು, ಇರುವೈಲು , ಮೂಡಬಿದ್ರೆ, ಮುಲ್ಕಿ, ತಳಕಲ್, ಬಜಪೆ,ಸುರತ್ಕಲ್ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮಂಗಳಾದೇವಿ ಮೇಳದಲ್ಲಿದ್ದಾರೆ. ನಳ ದಮಯಂತಿಯ ಧಾರಕ, ದಕ್ಷ ಯಜ್ಞದ ಬ್ರಾಹ್ಮಣ, ರಜಕ, ನಾರದ, ವಿಜಯ, ಉಸ್ಮಾನ್, ಕೇಳು ಪಂಡಿತ, ಅಜ್ಜ, ಕಾಶಿ ಮಾಣಿ ಮುಂತಾದ ಪಾತ್ರಗಳಿಂದ ಗಮನ ಸೆಳೆದಿದ್ದಾರೆ. ಶುದ್ಧ ಶಬ್ದ ಪ್ರಯೋಗ, ಪಾತ್ರಗಳ ಔಚಿತ್ಯ ಕಾಯ್ದು ನ್ಯಾಯ ನೀಡಿ ಕಲಾರಸಿಕರ ಹೃದಯದಲ್ಲಿ ಹಸಿರಾಗಿದ್ದಾರೆ. ಯಕ್ಷ ನಮನ ಸಾಂಸ್ಕೃತಿಕ ಕಲಾ ಸಂಘ (ರಿ.) ಅಜೇರಿನಲ್ಲಿ ಸ್ಥಾಪಿಸಿ ಅಧ್ಯಕ್ಷರಾಗಿದ್ದು, ಯಕ್ಷಗಾನ ಕಲಿಕೆ, ಯಕ್ಷರಂಗ ಪ್ರವೇಶದಂತಹ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಪ್ರಕಾಶ್ ನಾಯಕ್ ನೀರ್ಚಾಲು
ಅಣ್ಣ ನ ಹಾದಿಯಲ್ಲಿ ಯಕ್ಷಗಾನ ಕ್ಷೇತ್ರ ಪ್ರವೇಶಿಸಿದವರು ಪ್ರಕಾಶ್ ನಾಯಕ್ ನೀರ್ಚಾಲು. ಶಾಲೆಯಲ್ಲಿರುವಾಗಲೇ ಜಯರಾಮ ಪಾಟಾಳಿಯವರಿಂದ ಯಕ್ಷ ತರಬೇತಿ ಪಡೆದು ಧರ್ಮಸ್ಥಳ ಮೇಳ ಸೇರಿದರು. ನಂತರ ಎಡನೀರು, ಹೊಸನಗರ ಮೇಳಗಳಲ್ಲಿ ಸೇವಾನಿರತರಾಗಿ ಪ್ರಸಕ್ತ ಹನುಮಗಿರಿ ಮೇಳದಲ್ಲಿದ್ದಾರೆ. ಪುಂಡು, ಸಿŒ, ರಾಜ ವೇಷದೊಂದಿಗೆ ಹಾಸ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದು, ಭಾರ್ಗವ, ಸುದರ್ಶನ, ಬಬ್ರುವಾಹನ, ಶ್ರೀರಾಮ, ಪ್ರಹ್ಲಾದ, ಲಕ್ಷ್ಮಣ, ಶ್ರೀಕೃಷ್ಣ, ಅಭಿಮನ್ಯುವಿನ ಸಾರಥಿ, ಗಂಧರ್ವನ ಪತ್ನಿ , ಪದ್ಮಾವತಿಯ ಸಖೀ, ಪಾರ್ವತಿ, ವಿದ್ಯುನ್ಮಾಲಿ ದೂತ, ಅಬ್ಬು ಇತ್ಯಾದಿ ಪಾತ್ರಗಳಿಂದ ಮನ ಗೆದ್ದಿದ್ದಾರೆ. ಯಕ್ಷ ಸಂಘಟಕರೂ ಹೌದು.
Related Articles
Advertisement