ನವದೆಹಲಿ/ತಿರುವನಂತಪುರ: ಮಂಡಲೋತ್ಸವ ಮತ್ತು ಮಕರ ವಿಳಕ್ಕು ಸಂದರ್ಭಕ್ಕಾಗಿ ಶಬರಿಮಲೆ ಅಯ್ಯಪ್ಪ ದೇಗುಲ ತೆರೆಯಲು ಇನ್ನು 6 ದಿನಗಳು ಮಾತ್ರ ಬಾಕಿ ಉಳಿದಿವೆ.
ಅದಕ್ಕೆ ಪೂರಕವಾಗಿ ಸುಪ್ರೀಂಕೋರ್ಟಲ್ಲಿ ಮಂಗಳವಾರ (ನ.13) ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿರುವ 42 ಮೇಲ್ಮನವಿ ಅರ್ಜಿಗಳ ವಿಚಾರಣೆ ನಡೆಯಲಿದೆ. ಸೆ.28ರಂದು ಎಲ್ಲಾ ವಯೋಮಿತಿಯ ಮಹಿಳೆಯರು ದೇಗುಲ ಪ್ರವೇಶಿಸಬಹುದು ಎಂದು ತೀರ್ಪು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಮಧ್ಯಾಹ್ನದ ಬಳಿಕ ಮೇಲ್ಮನವಿಗಳನ್ನು ಪರಿಶೀಲಿಸಲಿದೆ.
ಟಿಡಿಬಿ ವಕೀಲರು ಬದಲು: ಮತ್ತೂಂದು ಮಹತ್ವದ ಬೆಳವಣಿಗೆಯಲ್ಲಿ ದೇಗುಲದ ಆಡಳಿತ ನೋಡಿಕೊಳ್ಳುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯ ವಕೀಲರಾಗಿ ನೇಮಕಗೊಂಡಿದ್ದ ಸಿ.ಆರ್ಯಂ ಸುಂದರಂ ತಮ್ಮ ನಿಲುವು ಬದಲಿಸಿದ್ದಾರೆ. ಅವರು ಈಗ ನಾಯರ್ ಸರ್ವಿಸ್ ಸೊಸೈಟಿ (ಎನ್‌ಎಸ್‌ಎಸ್) ಪರವಾಗಿ ವಾದಿಸಲಿದ್ದಾರೆ.
ಈ ಪ್ರಕರಣದಲ್ಲಿ ಮತ್ತೂಬ್ಬ ಅರ್ಜಿದಾರರ ಜತೆಗೆ ಸುಂದರಂ ಗುರುತಿಸಿಕೊಂಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ. ಟಿಡಿಬಿ ಪರವಾಗಿ ಹಿರಿಯ ನ್ಯಾಯವಾದಿ ಶೇಖರ್ ನಾಫೆx ವಾದಿಸಲಿದ್ದಾರೆ. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ಜಲವಿವಾದ ಪ್ರಕರಣದಲ್ಲಿ ನಾಫೆx ತಮಿಳುನಾಡು ಸರ್ಕಾರದ ಪರವಾಗಿ ವಾದಿಸಿದ್ದರು.
ಅಧಿಕಾರಿಗಳಿಗೆ ಸವಾಲು: ಶಬರಿಮಲೆ ದೇಗುಲ ಆವರಣ, ಪಂಪಾ ನದಿ ತೀರ ಮತ್ತು ಇತರ ಸ್ಥಳಗಳಲ್ಲಿ ಅಧಿಕಾರಿಗಳಿಗೆ ಸಿದ್ಧತೆ ನಡೆಸಲು ಸಮಯದ ಕೊರತೆ ಎದುರಾಗಿದೆ. ಅ.17-22, ನ.5 ಮತ್ತು 6ರಂದು ಮಹಿಳೆಯರ ಪ್ರವೇಶ ವಿರೋಧಿಸಿ ನಡೆದ ಪ್ರತಿಭಟನೆ, ಕೇರಳಕ್ಕೆ ಅಪ್ಪಳಿಸಿದ ಪ್ರವಾಹ ಕಾರಣಗಳಿಂದಾಗಿ ಈ ಬಾರಿ ಪೂರ್ವ ಸಿದ್ಧತೆ ನಡೆಸಲು ಅನಾನುಕೂಲವಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇದೆ.