Advertisement

ಅಯ್ಯಪ್ಪನಂತೆ ಬಂದು, ಬಚಾವ್‌ ಮಾಡಿದರು!

12:30 AM Jan 15, 2019 | |

ಕಳೆದವರ್ಷ ನಾನು ಶಬರಿಮಲೆ ಯಾತ್ರೆಗೆ ಹೋಗಿದ್ದೆ. ಅಲ್ಲಿನ “ಎರುಮೇಲಿ’ಯಿಂದ ಪಂಪಾವರೆಗಿನ 60 ಕಿ.ಮೀ. ದೂರವನ್ನು ಕಾಡಿನ ಮಾರ್ಗದಲ್ಲಿ ನಡೆದು, ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆದರೆ ಒಳ್ಳೆಯದಾಗುತ್ತದೆಂಬ ನಂಬಿಕೆ ಇದೆ. ತುಂಬಾ ಜನ ಹಾಗೆ ನಡೆದು ಹೋಗುತ್ತಾರೆ. ಅದನ್ನು “ದೊಡ್ಡಪಾದ’ವೆಂದೂ ಕರೆಯುವರು. ಈ ಮಾರ್ಗ ಬಹಳ ದುರ್ಗಮ. 

Advertisement

ಅಂದು ನಾವು ರಾತ್ರಿ 9ಕ್ಕೆ ಊಟ ಮುಗಿಸಿ, ಎರುಮೇಲಿಯಿಂದ ಚಾರಣ ಕೈಗೊಂಡೆವು. ತಲೆ ಮೇಲೆ ಇರುಮುಡಿ, ಮನದಲ್ಲಿ ಭಕ್ತಿ, ಜೊತೆಗೆ ಸ್ನೇಹಿತರು, ಹಿರಿಯರು ಇದ್ದಾರೆನ್ನುವ ಭಯ- ಭಕ್ತಿಯಷ್ಟೇ ನನ್ನ ಮನದಲ್ಲಿದ್ದದ್ದು. ಚಾರಣ ಶುರುವಾಗಿ ರಾತ್ರಿಯೆಲ್ಲಾ ನಡೆದು, ಬೆಳಗ್ಗೆ 7ರ ಸುಮಾರಿಗೆ ಇನ್ನೇನು ಪಂಪಾ (ಅಲ್ಲಿಂದ ಅಯ್ಯಪ್ಪನ ದೇವಸ್ಥಾನ 5 ಕಿ.ಮೀ. ದೂರವಿದ್ದು, ಎಲ್ಲಾ ಯಾತ್ರಿಕರು ಇಲ್ಲಿಗೆ ಬಂದೇ ಅಯ್ಯಪ್ಪನ ದರ್ಶನಕ್ಕೆ ತೆರಳಬೇಕು) ಹತ್ತಿರದಲ್ಲಿದೆ ಎನ್ನುವಷ್ಟರಲ್ಲಿ ನನ್ನ ಜೊತೆಯಿದ್ದ ಸ್ನೇಹಿತರು ಗುಂಪಿನಿಂದ ಬೇರೆಯಾಗಿದ್ದರು. ನನ್ನದು ಮೊದಲನೇ ವರ್ಷದ ಯಾತ್ರೆಯಾದ ಕಾರಣ, ಎಲ್ಲಿಗೆ ಹೋಗಬೇಕು? ಏನು ಮಾಡಬೇಕು? ಅಂತಲೇ ತೋಚಲಿಲ್ಲ. ತುಂಬಾ ಭಯಪಟ್ಟೆ. ಕರೆ ಮಾಡೋಣವೆಂದರೆ, ಮೊಬೈಲ್‌ನಲ್ಲಿ ನೆಟ್‌ವರ್ಕ್‌ ಇಲ್ಲ. ಗುಂಪು ಗುಂಪಾಗಿ ಹೋಗುತ್ತಿದ್ದ ಜನರಲ್ಲಿ ನಮ್ಮ ರಾಜ್ಯದವರು ಯಾರೆಂದು ಕೇಳ್ಳೋಣ. ನನಗೋ ಕನ್ನಡ ಬಿಟ್ಟರೆ ಬೇರೆ ಭಾಷೆ ತಿಳಿದಿಲ್ಲ. ಕೊನೆಗೆ ಹೇಗೋ ಮಾಡಿ ಪಂಪಾವರೆಗೂ ಅವರ ಜೊತೆಯಲ್ಲೇ ನಡೆದುಹೋಗಿ ಅಲ್ಲಿದ್ದ ಕೆಲವರಲ್ಲಿ ವಿಚಾರಿಸಿದಾಗ ನಮ್ಮ ಜಿಲ್ಲೆಯ ಪಕ್ಕದಲ್ಲಿರುವ ಊರಿನವರು ಸಿಕ್ಕರು. ಅವರಿಂದ ಮೊಬೈಲ್‌ ಪಡೆದು, ಕರೆ ಮಾಡಿ, ಸ್ನೇಹಿಹಿತರಿಗೆ ನಾನಿರುವ ಸ್ಥಳದ ಬಗ್ಗೆ ಹೇಳಿದೆ. ಅವರೂ ನನ್ನ ಸ್ನೇಹಿತರು ಬರುವವರೆಗೂ ನನ್ನ ಜೊತೆಯಲ್ಲಿದ್ದು, ಸ್ನೇಹಿತರ ಸುಪರ್ದಿಗೆ ಒಪ್ಪಿಸಿ ಹೊರಟುಹೋದರು. ನಿಜಕ್ಕೂ ಅವರ ಸಹಾಯ ಮರೆಯುವುದಿಲ್ಲ.

– ಪುರುಷೋತ್ತಮ್‌ ವೆಂಕಿ

Advertisement

Udayavani is now on Telegram. Click here to join our channel and stay updated with the latest news.

Next