ನವದೆಹಲಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲಕ್ಕೆ ವಿಮಾನದಲ್ಲಿ ಹೋಗುವವರಿಗೆ ಒಂದು ಸಿಹಿ ಸುದ್ದಿ. ಕ್ಯಾಬಿನ್ ಲಗೇಜ್‌ನಲ್ಲಿ ತೆಂಗಿನಕಾಯಿಯನ್ನು 20203 ಜನವರಿ 20ರ ವರೆಗೆ ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನ ಭದ್ರತಾ ಮಂಡಳಿ (ಬಿಸಿಎಎಸ್) ಮಂಗಳವಾರ ಅನುಮೋದನೆ ನೀಡಿದೆ.
ಅದಕ್ಕಾಗಿ ಸದ್ಯ ಇರುವ ನಿಯಮಗಳಲ್ಲಿ ರಿಯಾಯಿತಿ ನೀಡಲೂ ಮುಂದಾಗಿದೆ. ಇದರಿಂದಾಗಿ ತೆಂಗಿನಕಾಯಿ, ತುಪ್ಪವನ್ನು ಒಳಗೊಂಡಿರುವ “ಇರುಮುಡಿ ಕಟ್ಟು’ ಅನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ಅಯ್ಯಪ್ಪ ಭಕ್ತರಿಗೆ ಅನುಕೂಲವಾಗಲಿದೆ.
ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಸಿಎಎಸ್‌ನ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದ ಶಬರಿಮಲೆ ದೇಗುಲ ಯಾತ್ರೆ ಡಿ.27ರಂದು ಮುಕ್ತಾಯಗೊಳ್ಳಲಿದೆ.